– ʻಪಬ್ಲಿಕ್ ಟಿವಿʼ ವರದಿ ಬೆನ್ನಲ್ಲೇ ಎಚ್ಚೆತ್ತ ಜಿಬಿಎ
ಬೆಂಗಳೂರು: ಇಲ್ಲಿನ ರಸ್ತೆಯೊಂದಕ್ಕೆ ಹಾಕಿದ ಡಾಂಬರು ಒಂದೇ ವಾರದಲ್ಲಿ ಕಿತ್ತು ಬಂದಿದೆ. ʻಪಬ್ಲಿಕ್ ಟಿವಿʼ ರಿಯಾಲಿಟಿ ಚೆಕ್ ವೇಳೆ ಕಳಪೆ ಕಾಮಗಾರಿ ಅಧ್ವಾನ ಬಟಾಬಯಲಾಗಿದೆ.
ಇತ್ತೀಚೆಗಷ್ಟೇ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ರಸ್ತೆಗಳ ಅಧ್ವಾನ ಬಗ್ಗೆ ಪ್ರಸ್ತಾಪಿಸಿ, ರಸ್ತೆಗಳನ್ನು ಮಾಡೋದು ರಾಕೆಟ್ ಸೈನ್ಸಾ ಅಂತ ಪ್ರಶ್ನೆ ಮಾಡಿದ್ದರು. ಆದ್ರೆ, ಒಂದು ವಾರದ ಹಿಂದಷ್ಟೇ ಕೆ.ಆರ್ ಮಾರುಕಟ್ಟೆ ರಸ್ತೆಗೆ ಡಾಂಬರು ಹಾಕಲಾಗಿತ್ತು. ಈ ರಸ್ತೆಯ ಡಾಂಬರು ದೋಸೆಯಂತೆ ಎದ್ದು ಬರುತ್ತಿದೆ. ಇದನ್ನೂ ಓದಿ: ಮಲೆನಾಡಿನಲ್ಲಿ ಮಳೆಯ ಕೊರತೆ – ಮುಂಗಾರು ಹಂಗಾಮಿನಲ್ಲಿ ಭತ್ತದ ಬೆಳೆಗಿಲ್ಲ ಭದ್ರಾ ಡ್ಯಾಂ ನೀರು!

ಇದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದ್ದು, ಈ ಬಗ್ಗೆ ಗಮನಹರಿಸೋದಾಗಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ತಿಳಿಸಿದ್ದಾರೆ. ಇದನ್ನೂ ಓದಿ: ಆನೇಕಲ್ | ಬೈಕ್ ಸಮೇತ ಸುಟ್ಟು ಕರಕಲಾಗಿದ್ದ ಯುವಕನ ಗುರುತು ಪತ್ತೆ
ʻಪಬ್ಲಿಕ್ ಟಿವಿʼ ವರದಿಗೆ ಪ್ರತಿಕ್ರಿಯಿಸಿದ ಜಿಬಿಎ ಮುಖ್ಯ ಆಯುಕ್ತರು, ಕಳಪೆ ಕಾಮಗಾರಿ ಬಗ್ಗೆ ತನ್ನ ಗಮನಕ್ಕೆ ನೀವು ತಂದಿದ್ದೀರಿ. ಕೂಡಲೇ ನಾನು ಕ್ರಮ ವಹಿಸುತ್ತೇನೆ. ನಮ್ಮ ಟಿವಿಸಿಸಿ ಟೀಂ ನಿಂದ ಚೆಕ್ ಮಾಡಿಸುತ್ತೇನೆ. ನಾವು ಪ್ರತಿ ರಸ್ತೆಯ ಡಾಂಬರು ಹಾಕಿದ ತಕ್ಷಣ ಚೆಕ್ ಮಾಡ್ತೇವೆ. ಅದೇ ರೀತಿ ಚೆಕ್ ಮಾಡ್ತೇವೆ. ಟಿವಿಸಿಸಿ ಟೀಂ ಚೆಕ್ ಮಾಡಿದ ಬಳಿಕ ಕ್ರಮ ಆಗುತ್ತೆ ಎಂದು ತಿಳಿಸಿದ್ದಾರೆ.

ಇನ್ನೂ, ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಭೈರೇಗೌಡ ಗುರುವಾರ ಮಿಡ್ ನೈಟ್‌ನಲ್ಲಿ ಸಿಟಿ ರೌಂಡ್ಸ್ ಹಾಕಿದ್ದಾರೆ. ರಿಂಗ್‌ರೋಡ್ ಲೌರಿ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೂ.. ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಲೌರಿ ಜಂಕ್ಷನ್‌ವರೆಗೂ ಎರಡು ಕಡೆಯ ಪಥದ ಸ್ಥಳ ವೀಕ್ಷಣೆ ನಡೆಸಿದ್ರು. ಯಾವ ಯಾವ ಜಂಕ್ಷನ್‌ನಲ್ಲಿ ಯಾಕೆ ಟ್ರಾಫಿಕ್ ಜಾಮ್ ಆಗುತ್ತೆ..? ಯಾವ ಇಲಾಖೆ ಕೆಲಸಗಳು ಬಾಕಿ ಇರೋ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ್ರು.
