ಬೆಂಗಳೂರು: ಕೇರಳದ (Kerala) ಸರ್ಕಾರಿ ಬಸ್ಸೊಂದು (Bus) ಹೊತ್ತಿ ಉರಿದ ಘಟನೆ ಬೆಂಗಳೂರಿನ (Bengaluru) ಜ್ಞಾನ ಭಾರತಿ ಮೆಟ್ರೋ ನಿಲ್ದಾಣ ಬಳಿ ನಡೆದಿದೆ.
ಬಸ್ ಚಲಿಸುತ್ತಿದ್ದ ವೇಳೆಯೇ ಇದ್ದಕ್ಕಿದ್ದಂತೆ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯಿಂದಾಗಿ ಬಸ್‌ನ ಮುಂಭಾಗ ಹಾಗೂ ಒಳ ಭಾಗಕ್ಕೆ ಹಾನಿಯಾಗಿದೆ. ಅದೃಷ್ಟವಶಾತ್ ಬಸ್‌ನಲ್ಲಿದ್ದ ಇಬ್ಬರು ಪ್ರಯಾಣಿಕರು, ಕಂಡಕ್ಟರ್ ಹಾಗೂ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಆನೇಕಲ್ | ಬೈಕ್ ಸಮೇತ ಸುಟ್ಟು ಕರಕಲಾಗಿದ್ದ ಯುವಕನ ಗುರುತು ಪತ್ತೆ
ಅಗ್ನಿ ಅವಘಡದಿಂದ ದಟ್ಟ ಹೊಗೆ ಆವರಿಸಿದ್ದು, ಕೆಲ ಕಾಲ ಜನರ ಆತಂಕಕ್ಕೆ ಕಾರಣವಾಗಿತ್ತು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಇದನ್ನೂ ಓದಿ: ಓವರ್‌ಲೋಡ್‌ನಿಂದ ಕಂದಕಕ್ಕೆ ಉರುಳಿದ ಬಸ್ – ಬಲೂಚಿಸ್ತಾನದಲ್ಲಿ 40 ಮಂದಿ ಸಾವು
