ಪ್ರಶಾಂತ್ ನೀಲ್ (Prashant Neel) ಹಾಗೂ ಪ್ರಭಾಸ್ ಕಾಂಬಿನೇಷನ್ ನ ಸಲಾರ್ ಸಿನಿಮಾದ ಮೊದಲ ಹಾಡು (Song) ಇಂದು ಬಿಡುಗಡೆ ಆಗಲಿದೆ. ಒಟ್ಟು ಐದು ಭಾಷೆಗಳಲ್ಲಿ ಹಾಡು ಬಿಡುಗಡೆಯಾಗಲಿದ್ದು, ಮೊದಲ ಹಾಡಿಗಾಗಿ ಅಭಿಮಾನಿಗಳು ತುದಿಗಾಲಿಲ್ಲ ಕಾಯುತ್ತಿದ್ದಾರೆ. ಬಿಡುಗಡೆಯ ಸಮಯವನ್ನು ಹೊಂಬಾಳೆ ಸಂಸ್ಥೆ ತಿಳಿಸದೇ ಇದ್ದರೂ, ಇಂದು ಪಕ್ಕಾ ಹಾಡು ಬಿಡುಗಡೆ ಮಾಡುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದೆ.
- Advertisement 2
ಪ್ರಭಾಸ್ ಅಲ್ಲದೇ, ಸಲಾರ್ ಸಿನಿಮಾದಲ್ಲಿ ಮಲಯಾಳಂನ ಹೆಸರಾಂತ ನಟ ಪೃಥ್ವಿರಾಜ್ ಸುಕುಮಾರನ್ (Pruthviraj Sukumaran) ಹೊಸಬಗೆಯ ಪಾತ್ರ ಮಾಡಿದ್ದಾರೆ. ಐದು ಭಾಷೆಗಳಲ್ಲಿ ಈ ಸಿನಿಮಾ ಮೂಡಿ ಬಂದಿದ್ದು ವಿಶೇಷವೆಂದರೆ ತಮ್ಮ ಪಾತ್ರಕ್ಕೆ ಐದೂ ಭಾಷೆಗಳಲ್ಲಿ ತಾವೇ ಡಬ್ (Dubbing) ಮಾಡಿದ್ದಾರಂತೆ ಪೃಥ್ವಿರಾಜ್.
- Advertisement 3
- Advertisement 4
ಈಗಾಗಲೇ ಸಿನಿಮಾ ರಿಲೀಸ್ ಗೆ ಸರ್ವಸಿದ್ಧತೆ ನಡೆದಿದೆ. ಈ ನಡುವೆ ಸಲಾರ್ ಸಿನಿಮಾಗೆ ಪ್ರಾದೇಶಿಕ ಸೆನ್ಸಾರ್ (Censor) ಮಂಡಳಿಯ ಪ್ರಮಾಣ ಪತ್ರವನ್ನು ನೀಡಿದೆ. ತೀವ್ರಗತಿಯ ಸಾಹಸ ಸನ್ನಿವೇಶಗಳು ಇರುವ ಕಾರಣದಿಂದಾಗಿ ಚಿತ್ರಕ್ಕೆ ‘ಎ’ ಪ್ರಮಾಣ ಪತ್ರವನ್ನು ಸೆನ್ಸಾರ್ ಮಂಡಳಿ ನೀಡಿದೆ. ಭಾರತದಲ್ಲಿನ ಪ್ರದರ್ಶನಕ್ಕಾಗಿ ‘ಎ’ ಮತ್ತು ಹೊರ ದೇಶದಲ್ಲಿನ ಪ್ರದರ್ಶನಕ್ಕಾಗಿ ಯು/ಎ ಪ್ರಮಾಣ ಪತ್ರ ಸಿಕ್ಕಿದೆ ಎನ್ನಲಾಗುತ್ತಿದೆ. ಸಿನಿಮಾದ ಒಟ್ಟು ಅವಧಿ 2 ಗಂಟೆ 55 ನಿಮಿಷ ಎಂದು ಹೇಳಲಾಗುತ್ತಿದೆ.
ನಾನಾ ಕಾರಣಗಳಿಂದಾಗಿ ಸಿನಿಮಾ ಕುತೂಹಲ ಮೂಡಿಸಿದೆ. ಡಾರ್ಲಿಂಗ್ ಪ್ರಭಾಸ್ (Prabhas) ನಾಯಕತ್ವದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಮೊನ್ನೆಯಷ್ಟೇ ‘ಸಲಾರ್’ (Salaar) ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಫ್ರೆಂಡ್ಶಿಪ್ ಜೊತೆ ಸೇಡಿನ ಕಥೆ ಹೊಂದಿರುವ ಈ ಸಿನಿಮಾದಲ್ಲಿ ರಕ್ತ ಸಿಕ್ತವಾಗಿ ಪ್ರಭಾಸ್ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. 3 ನಿಮಿಷ 47 ಸೆಕೆಂಡ್ ಇರುವ ಈ ಟ್ರೈಲರ್ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಆ ಟ್ರೈಲರ್ ನೋಡಿದಾಗಲೇ ಚಿತ್ರಕ್ಕೆ ಯಾವ ಪ್ರಮಾಣ ಪತ್ರ ಸಿಗಬಹುದು ಎಂದು ಅಂದಾಜಿಸಲಾಗಿತ್ತು.