-ವೇಗದ ತೀವ್ರತೆಗೆ ನಜ್ಜುಗುಜ್ಜಾದ ಟೆಂಪೋ, 15 ಜನರಿಗೆ ಗಂಭೀರ ಗಾಯ
ಕಾರವಾರ: ವೇಗವಾಗಿ ಬಂದ ಟೆಂಪೋ ಹಾಗೂ ಟ್ಯಾಂಕರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ, ಟೆಂಪೋ ನಜ್ಜುಗುಜ್ಜಾಗಿ ಸ್ಥಳದಲ್ಲಿಯೇ ತಾಯಿ ಮಗು ಸೇರಿ ಐವರು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ಬಳಿ ನಡೆದಿದೆ.
ಕುಮಟಾದ ಬಗ್ಗೋಣ ಕಮಲಾಕರ ಭಂಡಾರಿ (50), ಹೊನ್ನಾವರ ಕರ್ಕಿಯ ಮೋಹನ ಮೇಸ್ತಾ (50), ಕುಮಟಾ ನಾಗೂರಿನ ಸಮಂತ ಮಡಿವಾಳ (34), ಸಿಂಚನಾ ಮಡಿವಾಳ (6) ಹಾಗೂ ಹೊನ್ನಾವರ ನಗರೆಯ ನಾಗರಾಜ ನಾಯ್ಕ (26) ಮೃತ ದುರ್ದೈವಿಗಳು.
Advertisement
ಕರ್ಕಿ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈ ಅವಘಡ ಸಂಭವಿಸಿದೆ. ಟೆಂಪೋದಲ್ಲಿ 30ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು. ವೇಗವಾಗಿದ್ದ ಟೆಂಪೋ ಕರ್ಕಿ ಬಳಿಕೆ ಬರುತ್ತಿದ್ದಂತೆ ಎದುರಿಗೆ ವೇಗವಾಗಿ ಬರುತ್ತಿದ್ದ ಟ್ಯಾಂಕರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಟೆಂಪೋ ನಜ್ಜುಗುಜ್ಜಾಗಿದ್ದು, ಮುಂಭಾಗದಲ್ಲಿ ಕುಳಿತ್ತಿದ್ದ ಕೆಲವರು ಹೊರ ಹಾರಿಬಿದ್ದಾರೆ. ಅಪಘಾತದಲ್ಲಿ ಐವರು ಸ್ಥಳದಲ್ಲಿಯೇ ಮೃಟ್ಟಿದ್ದು, 15 ಜನರ ಸ್ಥಿತಿ ಗಂಭಿರವಾಗಿದ್ದು, ಅವರನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
Advertisement
ಘಟನಾ ಸ್ಥಳಕ್ಕೆ ಹೊನ್ನಾವರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv