Connect with us

ತೆಲಂಗಾಣದಲ್ಲಿ ನಾಳೆಯಿಂದ 10 ದಿನಗಳ ಕಾಲ ಲಾಕ್‍ಡೌನ್

ತೆಲಂಗಾಣದಲ್ಲಿ ನಾಳೆಯಿಂದ 10 ದಿನಗಳ ಕಾಲ ಲಾಕ್‍ಡೌನ್

ಹೈದರಾಬಾದ್: ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದನ್ನು ನಿಯಂತ್ರಿಸಲು ತೆಲಂಗಾಣ ಸರ್ಕಾರ ರಾಜ್ಯದಲ್ಲಿ 10 ದಿನಗಳ ಕಾಲ ಸಂಪೂರ್ಣ ಲಾಕ್‍ಡೌನ್‍ಗೊಳಿಸಿಲು ನಿರ್ಧರಿಸಿದೆ.

ಈ ನಿರ್ಬಂಧಗಳು ಮೇ 12ರ ಬುಧವಾರದಿಂದ ಜಾರಿಗೆ ಬರಲಿದ್ದು, ಮೇ 22ರವರೆಗೂ ಮುಂದುವರಿಯುತ್ತದೆ. ನಾಳೆಯಿಂದ ಬೆಳಗ್ಗೆ 10 ಗಂಟೆಯಿಂದ ಹತ್ತು ದಿನಗಳ ಕಾಲ ರಾಜ್ಯದಲ್ಲಿ ಲಾಕ್‍ಡೌನ್ ಜಾರಿಗೆ ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಕಚೇರಿ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

ಕಳೆದ ವಾರ ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ್ ರಾವ್‍ರವರು ಲಾಕ್‍ಡೌನ್‍ಗೊಳಿಸುವುದನ್ನು ಮುಂದೂಡಿದರು. ಅದರಿಂದ ಜನರು ಜೀವನ ನಡೆಸಲು ಕಷ್ಟವಾಗುತ್ತದೆ ಮತ್ತು ಆರ್ಥಿಕತೆಯು ಸಂಪೂರ್ಣ ಕುಸಿಯುತ್ತದೆ. ಲಾಕ್‍ಡೌನ್ ಹೇರುವುದರಿಂದ ಯಾವುದೇ ಪ್ರಯೋಜನವಿಲ್ಲ. ತೆಲಂಗಾಣದಲ್ಲಿ 25 ರಿಂದ 30 ಲಕ್ಷ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಕೊರೊನಾ ಮೊದಲನೇ ಅಲೆಯ ಸಮಯದಲ್ಲಿ ಲಾಕ್‍ಡೌನ್ ಕಾರ್ಮಿಕರ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರಿದ್ದನ್ನು ನಾವು ನೋಡಿದ್ದೇವೆ. ಅವರು ಇದೀಗ ಸ್ಥಳಾಂತರವಾದರೆ ಮತ್ತೆ ಅವರು ಹಿಂದಿರುಗುವುದಿಲ್ಲ ಎಂದಿದ್ದರು.

Advertisement
Advertisement