ಚೆನ್ನೈ: ತಮಿಳುನಾಡು ಸ್ಪೀಕರ್ ಜೆ.ಸಿ.ಡಿ ಪ್ರಭಾಕರ್ ಅವರಿಂದು ಎಐಎಡಿಎಂಕೆ ಶಾಸಕ ಎಸಕ್ಕಿ ಸುಬಯಾ (Esakki Subaya) (ಅಂಬಸಮುದ್ರಂ ಕ್ಷೇತ್ರ) ಅವರ ರಾಜೀನಾಮೆ ನಿರಾಕರಿಸಿದ ಪ್ರಸಂಗ ನಡೆಸಿದೆ. ಸುಬಯಾ (JCD Prabhakar) ಈ ಹಿಂದೆ ವಿಧಾನಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ಅರ್ಜಿ ಸಲ್ಲಿಸಿದ್ದರು.
ರಾಜೀನಾಮೆ ನಿರಾಕರಿಸಲು ಕಾರಣ ಏನು?
ಎಸಕ್ಕಿ ಸುಬಯಾ ಅವರ ರಾಜೀನಾಮೆ ಪತ್ರವನ್ನ (Resignation Letter) ಟೈಪ್ ಮಾಡಲಾಗಿತ್ತು. ಹಾಗಾಗಿ ರಾಜೀನಾಮೆ ನಿರಾಕರಿಸಿದ ಸ್ಪೀಕರ್ ಪತ್ರವನ್ನು ಕೈಬರಹದಲ್ಲಿ ಬರೆದು ಸಲ್ಲಿಸುವಂತೆ ಸೂಚಿಸಿದರು. ಇದನ್ನೂ ಓದಿ: ಮೂವರು AIADMK ಶಾಸಕರು ರಾಜೀನಾಮೆ – ಟಿವಿಕೆಗೆ ಸೇರ್ಪಡೆ
ಇದಕ್ಕೂ ಮುನ್ನ ನಿನ್ನೆ (ಸೋಮವಾರ) ಎಐಎಡಿಎಂಕೆ (AIADMK) ಪಕ್ಷದ ಎಸ್.ಪಿ ವೇಲುಮಣಿ ಮತ್ತು ಸಿ.ವಿ ಷಣ್ಮುಗಂ ಬಣದ ಮೂವರು ಶಾಸಕರು ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದರು. ಮರಗತಂ ಕುಮಾರ್‌ವೇಲ್ (ಮಧುರಾಂತಕಂ ಕ್ಷೇತ್ರ), ಜಯಕುಮಾರ್ (ಪೆರುಂದುರೈ ಕ್ಷೇತ್ರ), ಸತ್ಯಭಾಮಾ (ಧಾರಾಪುರಂ ಕ್ಷೇತ್ರ) ಅವರು ತಮಿಳುನಾಡು ವಿಧಾನಸಭೆಯ ಸ್ಪೀಕರ್ ಜೆ.ಸಿ.ಡಿ ಪ್ರಭಾಕರ್ ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದ್ದರು. ಒಂದು ದಿನದ ನಂತರ ಸ್ಪೀಕರ್ ರಾಜೀನಾಮೆ ಅಂಗೀಕರಿಸಿದರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್, ವಿಧಾನಸಭೆ ನಿಯಮಗಳ ಪ್ರಕಾರ ರಾಜೀನಾಮೆಗಳು ಕ್ರಮಬದ್ಧವಾಗಿವೆ. ಧಾರಾಪುರಂ ಶಾಸಕಿ ಸತ್ಯಭಾಮ, ಮಧುರಾಂತಕಂ ಶಾಸಕಿ ಮರಗತಮ್ ಕುಮಾರವೇಲ್ ಮತ್ತು ಪೆರುಂಡುರೈ ಶಾಸಕ ಜಯಕುಮಾರ್ ಅವರು ಇಂದಿನಿಂದ ಜಾರಿಗೆ ಬರುವಂತೆ ತಮ್ಮ ವಿಧಾನಸಭಾ ಸದಸ್ಯ ಸ್ಥಾನಗಳಿಗೆ ರಾಜೀನಾಮೆ ಪತ್ರಗಳನ್ನ ಸಲ್ಲಿಸಿದ್ದಾರೆ. ಕ್ರಮಬದ್ಧವಾಗಿರುವುದರಿಂದ ಅವುಗಳನ್ನ ಅಂಗೀಕರಿಸಲಾಗಿದೆ ಎಂದು ತಿಳಿಸಿದ್ರು. ಇದನ್ನೂ ಓದಿ: ದಿಲ್ಲಿಯಲ್ಲೂ ದೂರ ದೂರ – ಸಿಎಂ & ಟೀಂನಿಂದ ಅಂತರ ಕಾಯ್ದುಕೊಂಡ ಡಿಕೆಶಿ
ಮುಂದುವರಿದು.. ಶಾಸಕರು ತಮ್ಮ ರಾಜೀನಾಮೆ ಪತ್ರಗಳನ್ನು ತಮ್ಮದೇ ಕೈಬರಹದಲ್ಲಿ ಸಲ್ಲಿಸಬೇಕು. ಅವುಗಳನ್ನು ಬೇರೆಯವರ ಮೂಲಕ ಕಳುಹಿಸದೇ ತಾವೇ ವೈಯಕ್ತಿಕವಾಗಿ ಹಾಜರಾಗಿ ಸಲ್ಲಿಸಬೇಕು. ಈ ವಿಧಾನಗಳನ್ನು ಅನುಸರಿಸದೇ ಇದ್ದರೆ, ರಾಜೀನಾಮೆ ಪತ್ರ ತಿರಸ್ಕರಿಸಲಾಗುವುದು. ಮೂವರು ಸಾಸಕರು ನೇರವಾಗಿ ನಿರ್ಧಾರ ಸಲ್ಲಿಸಿದ್ದರಿಂದ ಅಂಗೀಕರಿಸಲಾಗಿದೆ ಎಂದು ಸ್ಪೀಕರ್ ಪ್ರಭಾಕರ್ ಹೇಳಿದ್ರು. ಇದನ್ನೂ ಓದಿ: ಸುವೇಂದು ಖಡಕ್ ಆಕ್ಷನ್ ಬೆನ್ನಲ್ಲೇ ಸ್ವದೇಶಕ್ಕೆ ಓಡುತ್ತಿದ್ದಾರೆ ಅಕ್ರಮ ಬಾಂಗ್ಲಾ ಪ್ರಜೆಗಳು!
ಇತ್ತೀಚೆಗೆ ನಡೆದ ವಿಧಾನಸಭೆಯ ಕಲಾಪದಲ್ಲಿ ಈ ಬಂಡಾಯ ಶಾಸಕರು ಎಐಎಡಿಎಂಕೆ ಪಕ್ಷದ ಅಧಿಕೃತ ವಿಪ್ (Whip) ಉಲ್ಲಂಘಿಸಿ, ಮುಖ್ಯಮಂತ್ರಿ ವಿಜಯ್ ಸರ್ಕಾರದ ಪರವಾಗಿ ವಿಶ್ವಾಸಮತ ಚಲಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷದ್ರೋಹ ಎಸಗಿದ ಇವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಇಪಿಎಸ್ ನೇತೃತ್ವದ ಎಐಎಡಿಎಂಕೆ ನಾಯಕತ್ವವು ಕಾನೂನು ಪ್ರಕ್ರಿಯೆಯನ್ನು ಆರಂಭಿಸಿತ್ತು. ಅನರ್ಹತೆಯ ಕಾನೂನು ಕ್ರಮ ಎದುರಿಸುವ ಮುನ್ನವೇ ಎಚ್ಚೆತ್ತುಕೊಂಡಿರುವ ಈ ಮೂವರು ಶಾಸಕರು, ಈಗ ತಾವಾಗಿಯೇ ರಾಜೀನಾಮೆ ನೀಡಿ ಹೊರಬಂದಿದ್ದಾರೆ.
