ಜೀ ಕನ್ನಡ ವಾಹಿನಿಯ ಡಾನ್ಸ್ ಕರ್ನಾಟಕ ಡಾನ್ಸ್ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಭಾವುಕರಾದ ಮತ್ತು ಶಿವರಾಜ್ ಕುಮಾರ್ ಕಣ್ಣೀರು ಹಾಕಿದ ಘಟನೆ ನಡೆಯಿತು. ಕಾರ್ಯಕ್ರಮದ ಮಧ್ಯ ಕಿಚ್ಚ ಸುದೀಪ್ ನಟನೆಯ ‘ಪೈಲ್ವಾನ್’ ಸಿನಿಮಾ ಆಡಿಯೋ ಬಿಡುಗಡೆ ಸಮಾರಂಭದ ಒಂದು ವಿಡಿಯೋ ತುಣಕನ್ನು ಪ್ರದರ್ಶನ ಮಾಡಲಾಯಿತು. ವಿಡಿಯೋ ನೋಡಿ ಸುದೀಪ್ ಭಾವುಕರಾಗಿ, ಏನು ಹೇಳಬೇಕು ಎಂದು ತೋಚದೇ ಮೌನಕ್ಕೆ ಜಾರಿದರು. ಪ್ರದರ್ಶನವಾದ ವಿಡಿಯೋದಲ್ಲಿ ಪುನೀತ್ ರಾಜ್ ಕುಮಾರ್ ಇದ್ದರು.
Advertisement
ನಂತರ ಮಾತನಾಡಿದ ಸುದೀಪ್, “ಏರಿಯಾಗಳಲ್ಲಿ ಸೈಟ್ ಮಾಡಿ, ಮನೆ ಮಾಡಿಕೊಳ್ಳುವುದಕ್ಕಿಂತ ಹೃದಯಗಳಲ್ಲಿ ಒಂದು ಚಿಕ್ಕ ಸೈಟಲ್ಲಿ ಮನೆ ಮಾಡಿಕೊಂಡು ಸದಾ ಬದುಕಿರ್ತಾರಲ್ಲ, ಅವರಿಗೆ ನಾವು ಅಮರ ಅಂತೀವಿ. ಕನ್ನಡ ಚಿತ್ರರಂಗ ಮಾತ್ರವಲ್ಲ, ಯಾವ ಕಲಾವಿದನ ಅಭಿಮಾನಿಗಳೇ ಆಗಿರಬಹುದು, ದ್ವೇಷಿಸದೇ ಇರುವಂತ ಒಬ್ಬ ನಟ, ಬೇರೆಯವರ ಅಭಿಮಾನಿಗಳು ದ್ವೇಷ ಮಾಡದೇ ಇರುವಂತ ಒಬ್ಬ ನಟ, ಯಾರದ್ದೇ ಅಭಿಮಾನಿಯಿದ್ರೂ ಸದಾ ಪ್ರೀತಿಸುತ್ತಾ ಇದ್ದ ಒಬ್ಬ ನಟ ಪುನೀತ್ ರಾಜ್ ಕುಮಾರ್. ನನಗೆ ಹಳೆಯ ವಿಡಿಯೋಗಳನ್ನು ನೋಡಿದಾದಾಗ ಅನಿಸೋದು ಅವರು ಎಲ್ಲಾ ಕಡೆ ಇದ್ದಾರೆ’ ಅನಿಸುತ್ತದೆ ಅಂದರು. ಇದನ್ನೂ ಓದಿ:ಥೇಟ್ ನಯನತಾರಾ ರೀತಿಯೇ ಕಂಗೊಳಿಸಿದ ‘ಸತ್ಯ’ ಧಾರಾವಾಹಿಯ ಗೌತಮಿ
Advertisement
Advertisement
ಮುಂದುವರೆದು ಮಾತನಾಡಿದ ಕಿಚ್ಚ “ನನಗೆ ಖುಷಿಯಾಗಿದ್ದು ಏನೆಂದರೆ ಚಿಕ್ಕ ವಯಸ್ಸಿನಲ್ಲಿ ನಾನು, ಪುನೀತ್ ತುಂಬಾ ಚೆನ್ನಾಗಿ ಪಳಗಿದ್ದು. ನಾವು ಕಲಾವಿದರಾಗಿ ಬೆಳೆದ ಮೇಲೆ, ಬೆಳವಣಿಗೆಯಲ್ಲಿ ಒಂದು ಅಂತರ ಬರೋದು ಸಹಜ. ಆ ಅಂತರ ಬೆಳೆಯುತ್ತಲೇ ಇರುತ್ತೆ. ಒಂದು ಹಂತಕ್ಕೆ ಬಂದಮೇಲೆ ಆ ಅಂತರ ಕಡಿಮೆ ಆಗೋಕೆ ಶುರುವಾಗುತ್ತೆ. ಪೈಲ್ವಾನ್ ವೇದಿಕೆಗೆ ಬಂದಾಗ ಆ ಹಂತದಲ್ಲಿ ಇದ್ವಿ ನಾವಿಬ್ಬರು. ಒಬ್ಬರ ಮೇಲೆ ಒಬ್ಬರಿಗೆ ಗೌರವ ಇತ್ತು, ಅಭಿಮಾನ ಇತ್ತು. ಪ್ರತಿ ಶುಕ್ರವಾರ, ಗುರುವಾರ ನಮ್ಮದೇ ಆಗಿರಬೇಕು ಎಂದು ಆರಂಭದಲ್ಲಿ ಅನಿಸುತ್ತೆ. ಹೋಗ್ತಾ ಹೋಗ್ತಾ ಅನಿಸುತ್ತೆ ವರ್ಷದಲ್ಲಿ ಎಷ್ಟು ಗುರುವಾರ, ಶುಕ್ರವಾರಗಳು ಇರುತ್ತವೆ, ಯಾಕೆ ನಾವು ಕಿತ್ತಾಡುತ್ತೇವೆ’ ಎಂದರು.
Advertisement
ಪುನೀತ್ ಸಿಕ್ಕಿದ್ದು ಒಂದು ಒಳ್ಳೆಯ ಕ್ಷಣ ಎಂದು ಕೊಂಡಾಡಿದ ಸುದೀಪ್, “ಪೈಲ್ವಾನ್ ಸಮಯದಲ್ಲಿ ಒಳ್ಳೆಯ ಮನಸ್ಸಿನಿಂದ ಒಬ್ಬ ದೊಡ್ಡ ಕಲಾವಿದರು ಇನ್ನೊಬ್ಬ ಕಲಾವಿದನ ಸೆಟ್ಗೆ ಬರ್ತಾರೆ, ಶುಭ ಕೋರುತ್ತಾರೆ, ಅದ್ಭುತವಾದ ಕ್ಷಣಗಳನ್ನು ಸೆರೆಹಿಡಿಯಲು ಅವಕಾಶ ಕೊಟ್ಟು ಪುನೀತ್ ಹೊರಟು ಹೋಗುತ್ತಾರೆ. ಪುನೀತ್ ಜೊತೆ ಇರುವ ಚಿಕ್ಕವಯಸ್ಸಿನ ಫೋಟೋ ನನಗೆ ಮಿಲಿಯನ್ ಡಾಲರ್ ಫೋಟೋ’ ಎಂದು ಸುದೀಪ್ ಭಾವುಕರಾದರು. ಬಾನದಾರಿಯಲ್ಲಿ ಸೂರ್ಯ ಜಾರಿಹೋದ ಎಂದು ಸುದೀಪ್ ಹಾಡುತ್ತಿದ್ದಂತೆ ಶಿವಣ್ಣ ಕಣ್ಣೀರು ಹಾಕಿದರು.