BollywoodCinemaDistrictsKarnatakaLatestMain PostSandalwood

ಕಿಚ್ಚ ಸುದೀಪ್ ವಿರುದ್ಧ ಮತ್ತೆ ತೊಡೆತಟ್ಟಿದ ಅಜಯ್ ದೇವಗನ್

ಹಿಂದಿ ರಾಷ್ಟ್ರೀಯ ಭಾಷೆ ವಿಚಾರವಾಗಿ ಈಗಾಗಲೇ ಒಂದು ಸುತ್ತ ಟ್ವಿಟ್ ವಾರ್ ಮಾಡಿದ್ದ ಕಿಚ್ಚ ಸುದೀಪ್ ಮತ್ತು ಅಜಯ್ ದೇವಗನ್ ಈ ವಿವಾದ ತಣ್ಣಗಾಗುತ್ತಿದ್ದಂತೆಯೇ ಮತ್ತೊಮ್ಮೆ ಒಬ್ಬರಿಗೊಬ್ಬರು ತೊಡೆತಟ್ಟಿಕೊಂಡಿದ್ದಾರೆ. ಈ ಬಾರಿ ಅವರು ತಮ್ಮ ಚಿತ್ರಗಳ ಮೂಲಕ ಅಖಾಡಕ್ಕೆ ಇಳಿದಿದ್ದಾರೆ. ಇದನ್ನೂ ಓದಿ : ಕೇಂದ್ರ ಸಚಿವ ಅನುರಾಗ್ ಠಾಕೂರ್ ಜತೆ ಸಿನಿರಂಗದ ಸಮಸ್ಯೆ ಚರ್ಚೆ

ಹಲವು ತಿಂಗಳ ಹಿಂದಿಯೇ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ರಿಲೀಸ್ ಡೇಟ್ ಬಹಿರಂಗವಾಗಿತ್ತು. ಜುಲೈ 28 ರಂದು ಈ ಸಿನಿಮಾವನ್ನು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದರು. ಈಗ ಅದೇ ತಿಂಗಳು, ಅದೇ ವಾರದಲ್ಲೇ ಅಜಯ್ ದೇವಗನ್ ನಟನೆಯ ಥ್ಯಾಂಕ್ ಗಾಡ್ ಚಿತ್ರವೂ ಕೂಡ ರಿಲೀಸ್ ಆಗುತ್ತಿದೆ. ಜುಲೈ 29 ರಂದು ಥ್ಯಾಂಕ್ ಗಾಡ್ ಸಿನಿಮಾ ರಿಲೀಸ್ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದಾರೆ. ಇದನ್ನೂ ಓದಿ : ಹಿರಿಯ ರಂಗಕರ್ಮಿ, ಏಣಗಿ ಬಾಳಪ್ಪನವರ ಪತ್ನಿ ಲಕ್ಷ್ಮೀಬಾಯಿ ನಿಧನ

ವಿಕ್ರಾಂತ್ ರೋಣ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸಿನಿಮಾ. 2 ಡಿ ಮತ್ತು 3 ಡಿಯಲ್ಲಿಯೂ ಸಿನಿಮಾ ಮೂಡಿ ಬಂದಿದೆ. ಎಂಟಕ್ಕೂ ಹೆಚ್ಚು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಸಾವಿರಾರು ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕಾಗಿ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಈ ಹೊತ್ತಿನಲ್ಲಿ ಅಜಯ್ ದೇವಗನ್ ಅವರ ಸಿನಿಮಾ ಕೂಡ ಬಿಡುಗಡೆ ಆಗುತ್ತಿರುವುದು ಸಖತ್ ಕುತೂಹಲವಂತೂ ಮೂಡಿಸಿದೆ. ಇದನ್ನೂ ಓದಿ : ಶಿವಣ್ಣನ ಹುಲಿ ಅವತಾರ: ಬೈರಾಗಿ ಹಾಡಿಗೆ ಭೀಮನ ಬಲ

ಸುದೀಪ್ ಅವರ ವಿಕ್ರಾಂತ್ ರೋಣ ಮತ್ತು ಅಜಯ್ ದೇವಗನ್ ಅವರ ಥ್ಯಾಂಕ್ ಗಾಡ್ ಒಂದು ದಿನದ ಅಂತರದಲ್ಲಿ ಬಿಡುಗಡೆ ಆಗುತ್ತಿರುವುದು ಕಾಕತಾಳೀಯವಾದರೂ, ಅಭಿಮಾನಿಗಳು ಮಾತ್ರ ಅದನ್ನು ಬೇರೆ ರೀತಿಯಲ್ಲೇ ಅರ್ಥೈಸಿಕೊಂಡಿದ್ದಾರೆ. ಬಾಲಿವುಡ್ ಸಿನಿಮಾ ರಂಗದವರ ಪಿತೂರಿ ಎನ್ನುವ ಮಾತೂ ಕೇಳಿ ಬರುತ್ತಿವೆ. ಏನೇ ಅಗಲಿ, ಒಳ್ಳೆಯ ಪೈಪೋಟಿ ನಡೆದರೆ ಸಾಕು ಎನ್ನುತ್ತಾರೆ ಚಿತ್ರೋದ್ಯಮಿಗಳು.

Leave a Reply

Your email address will not be published.

Back to top button