ನವದೆಹಲಿ/ ಬೆಂಗಳೂರು: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಹೆಚ್ಚುತ್ತಿರುವ ಮಧ್ಯೆ ದೇಶದ ತೈಲ ಕಂಪನಿಗಳು ಮತ್ತೆ ಪೆಟ್ರೋಲ್, ಡೀಸೆಲ್ (Petrol, Diesel Prices Hike) ದರ ಏರಿಕೆ ಮಾಡಿವೆ. 3 ದಿನಗಳ ಹಿಂದಷ್ಟೇ 3 ರೂಪಾಯಿ ಹೆಚ್ಚಳ ಮಾಡಿದ್ದ ತೈಲ ಕಂಪನಿಗಳು ಮಂಗಳವಾರ (ಇಂದು) ಪ್ರತಿ ಲೀಟರ್‌ಗೆ 90 ಪೈಸೆ ಹೆಚ್ಚಳ ಮಾಡಿವೆ.
ವಿವಿಧ ಮಹಾನಗರಗಳಲ್ಲಿ 87 ರಿಂದ 98 ಪೈಸೆ ವರೆಗೆ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ. ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ದರ ಎಷ್ಟಿದೆ ಅಂತಾ ನೋಡೋದಾದ್ರೆ ..

ಇಂದಿನ ದರ ಎಲ್ಲೆಲ್ಲಿ – ಎಷ್ಟಿದೆ?
* ಹೊಸ ದರ ಏರಿಕೆ ಬಳಿಕ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 0.94 ಪೈಸೆ ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ 0.98 ಪೈಸೆ ಏರಿಕೆಯಾಗಿದೆ. ಹೊಸ ದರದ ಅನ್ವಯ ಪೆಟ್ರೋಲ್ ಲೀಟರ್‌ಗೆ 107.12 ರೂಪಾಯಿ ತಲುಪಿದ್ರೆ, ಡೀಸೆಲ್ ಬೆಲೆ 95.04 ರೂ.ಗಳಿಗೆ ಏರಿಕೆಯಾಗಿದೆ. ಇದನ್ನೂ ಓದಿ: ದೇಶದ ಜನರಿಗೆ ಬೆಳ್ಳಂಬೆಳಗ್ಗೆ ಶಾಕ್ – ಪೆಟ್ರೋಲ್, ಡೀಸೆಲ್ ದರ 90 ಪೈಸೆ ಹೆಚ್ಚಳ
* ದೆಹಲಿಯಲ್ಲಿ ಪೆಟ್ರೋಲ್ ಲೀಟರ್‌ಗೆ 87 ಪೈಸೆ ಹೆಚ್ಚಳವಾಗಿದ್ದು 98.64 ರೂ. ತಲುಪಿದೆ. ಡೀಸೆಲ್ ಈಗ ಲೀಟರ್‌ಗೆ 91 ಪೈಸೆ ಹೆಚ್ಚಳವಾಗಿದ್ದು 91.58 ರೂ.ಗೆ ಏರಿಕೆಯಾಗಿದೆ.
* ಮುಂಬೈನಲ್ಲಿ, ಪೆಟ್ರೋಲ್ ಬೆಲೆ ಲೀಟರ್‌ಗೆ 91 ಪೈಸೆ ಏರಿಕೆಯಾಗಿ 107.59 ರೂ.ಗೆ ತಲುಪಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ 94 ಪೈಸೆ ಏರಿಕೆಯಾಗಿ 94.08 ರೂ.ಗೆ ತಲುಪಿದೆ.
* ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆಯಲ್ಲಿ ಅತಿ ಹೆಚ್ಚು ಏರಿಕೆಯಾಗಿದ್ದು, ಲೀಟರ್‌ಗೆ 96 ಪೈಸೆ ಏರಿಕೆಯಾಗಿ 109.70 ರೂ.ಗೆ ತಲುಪಿದ್ರೆ, ಡೀಸೆಲ್ ಬೆಲೆ 94 ಪೈಸೆ ಏರಿಕೆಯಾಗಿ 96.07 ರೂ.ಗೆ ಪ್ರತಿ ಲೀಟರ್ ಮಾರಾಟವಾಗುತ್ತಿದೆ.
* ಚೆನ್ನೈನಲ್ಲಿ, ಪೆಟ್ರೋಲ್ ಬೆಲೆ 82 ಪೈಸೆ ಏರಿಕೆಯಾಗಿ ಲೀಟರ್ 104.49 ರೂ.ಗಳಿಗೆ ತಲುಪಿದೆ, ಡೀಸೆಲ್ ಬೆಲೆ 86 ಪೈಸೆ ಏರಿಕೆಯಾಗಿ ಲೀಟರ್‌ಗೆ 96.11 ರೂ.ಗಳಿಗೆ ಹೆಚ್ಚಳವಾಗಿದೆ. ಇದನ್ನೂ ಓದಿ: ಸರ್ಕಾರದ ಸಂಧಾನ ಸಭೆ ವಿಫಲ – ಬಸ್ ಬಂದ್ ಆಗೋದು ಫಿಕ್ಸ್

