ಮಡಿಕೇರಿ: ಆನೆ (Elephant) ನೋಡ್ಬೇಕು, ಅವುಗಳ ಜೊತೆ ಫೋಟೋ ತೆಗೆಸಿಕೊಳ್ಬೇಕು, ನಾವೇ ಕೈಯಾರೆ ಸ್ನಾನ ಮಾಡಿಸಿ ಖುಷಿ ಪಡ್ಬೇಕು ಅಂತ ದೇಶ ವಿದೇಶಗಳ ಪ್ರವಾಸಿಗರು ದುಬಾರೆಗೆ (Dubare) ಬರ್ತಾರೆ. ಆದರೆ ರಜೆಗಾಗಿ ಕೊಡಗಿನ ದುಬಾರೆ ಸಾಕಾನೆ ಶಿಬಿರಕ್ಕೆ ಬಂದ ಮಹಿಳೆಯೊಬ್ಬರು (Woman) ಆನೆಗಳ ಕಾಲಿಗೆ ಸಿಲುಕಿ ಬಲಿಯಾಗಿದ್ದಾರೆ.
ದುಬಾರೆ ಸಾಕಾನೆ ಶಿಬಿರದಲ್ಲಿ ಸಾಕಾನೆಗಳ ಕಾಳಗದಿಂದ ಚೆನೈ ಮೂಲದ ಮಹಿಳೆಯೋರ್ವರು ಮೃತಪಟ್ಟಿದ್ದಾರೆ. ಸಾಕಾನೆಗಳ ಕಾಳಗದಿಂದ ದುಬಾರೆ ಶಿಬಿರಕ್ಕೆ ಕಪ್ಪು ಚುಕ್ಕೆ ಎಂಬಂತೆ ಆಗಿದೆ. ಸಾಮಾನ್ಯವಾಗಿ ದೇಶ ವಿದೇಶಗಳಿಂದ ಬರುವ ಸಾವಿರಾರು ಪ್ರವಾಸಿಗರು ಸಾಕಾನೆಗಳ ಬಳಿ ನಿಂತು ಫೋಟೋ ತೆಗೆಸಿಕೊಳ್ಳಬೇಕು ಆಹಾರವನ್ನು ನೀಡಬೇಕು ಆನೆಗಳಿಗೆ ಸ್ನಾನ ಮಾಡಿಸಬೇಕು ಇಲ್ಲಿಗೆ ಅತ್ಯಂತ ಉತ್ಸಾಹದಿಂದ ಬರುತ್ತಾರೆ. ಇದನ್ನೂ ಓದಿ: ವನ್ಯಜೀವಿಗಳಿಂದ ನಿರ್ದಿಷ್ಟ ಅಂತರ ಕಾಯ್ದುಕೊಳ್ಳಿ – ದುಬಾರೆಯಲ್ಲಿ ಆನೆ ಕಾದಾಟದ ವೇಳೆ ಮಹಿಳೆ ಸಾವಿಗೆ ಖಂಡ್ರೆ ಸಂತಾಪ
ಕೆಲ ಪ್ರವಾಸಿಗರು ಸಾಕಾನೆಗಳ ಮಾವುತ ಕಾವಾಡಿಗಳಿಗೆ ಸ್ವಲ್ಪ ಹಣವನ್ನು ನೀಡಿ ಸಾಕಾನೆಗಳಿಗೆ ಫೀಡಿಂಗ್ ಮಾಡಿಸೋದು, ಸ್ನಾನ ಮಾಡಿಸಲು ಮುಂದಾಗುತ್ತಾರೆ. ಇಂತಹ ಸಮಯದಲ್ಲಿ ಸಾಕಾನೆಗಳು ಯಾವ ಸಮಯದಲ್ಲಿ ಯಾವ ರೀತಿಯಲ್ಲಿ ಇರುತ್ತದೆ. ಅದರ ಸ್ವಭಾವ ಯಾವ ರೀತಿ ಬದಲಾವಣೆ ಅಗುತ್ತದೆ ಎಂದು ಯಾರು ಊಹಿಸಲು ಸಾದ್ಯವಾಗೋಲ್ಲ. ಅಲ್ಲದೇ ಸಾಕಾನೆಗಳನ್ನು ಪಳಗಿಸುವ ಮಾವುತ, ಕಾವಾಡಿಗಳ ಮೇಲೆಯೇ ಒಂದೊಂದು ಬಾರಿ ದಾಳಿ ನಡೆಸಿ ಮಾವುತರನ್ನೆ ಬಲಿ ಪಡೆದ ಉದಾಹರಣೆಗಳು ದುಬಾರೆ ನಡೆದು ಹೋಗಿದೆ.

ದುಬಾರೆ ಸಾಕಾನೆ ಶಿಬಿರದಲ್ಲಿ ಸುಮಾರು 32 ಸಾಕಾನೆಗಳು ಇವೆ. ಇದರಲ್ಲಿ 30 ಸಾಕಾನೆಗಳು ಸೌಮ್ಯ ಸ್ವಭಾವದ ಸಾಕಾನೆಗಳು ಆಗಿದ್ರೆ ಇನ್ನೂ ಎರಡು ಸಾಕಾನೆಗಳು ಮಾತ್ರ ಆಗೊಮ್ಮೆ ಈಗೊಮ್ಮೆ ಶಿಬಿರದಲ್ಲಿ ಕಾಳಗ ನಡೆಸಿಕೊಂಡು ಸಾಕಷ್ಟು ಸುದ್ದಿ ಆಗುತ್ತಲ್ಲೇ ಇರುತ್ತವೆ. ಶಿಬಿರದಲ್ಲಿ ಇರುವಂತಹ ಕಂಜನ್ ಹಾಗೂ ಧನಂಜಯ ಎಂಬ ಸಾಕಾನೆಗಳು ಕಾಳಗ ನಡೆಸುತ್ತಲ್ಲೇ ಇರುತ್ತವೆ. ಇದಕ್ಕೆ ಕಾರಣ ಏನು ಎಂಬುದರ ಬಗ್ಗೆ ಹಿರಿಯ ಮಾವುತ ಡೋಬ್ಬಿ ʻಪಬ್ಲಿಕ್ ಟಿವಿʼ ಬಳಿ ಎಳೆಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಶಿಬಿರದಲ್ಲಿ ಸಾಕಾನೆಗಳನ್ನು ಮಕ್ಕಳಂತೆ ಸಾಕಲಾಗುತ್ತದೆ. ಆದ್ರೆ, ಈ ಎರಡೂ ಆನೆಗಳು ಸರಿಯಾಗಿ ಪಳಗಿಲ್ಲ. ಆನೆಗಳನ್ನು ಪಳಗಿಸುತ್ತಿದ್ದ ಮಾವುತ ಗೋಪಾಲ್ ಮೃತಪಟ್ಟಿದ್ದಾರೆ. ಅವರ ಹುದ್ದೆಗೆ ನುರಿತ ಮಾವುತರನ್ನು ನೇಮಿಸಿಯೇ ಇಲ್ಲ. ಈಗಿರುವ ಕೆಲ ಮಾವುತರು ಹಣ ಪಡೆದು ಆನೆಗಳ ಸ್ನಾನಕ್ಕೆ ಅವಕಾಶ ನೀಡುತ್ತಾರೆ. ಇತ್ತೀಚೆಗೆ ಹುಡುಗರನ್ನು ಮಾವುತರನ್ನಾಗಿ ಮಾಡುತ್ತಾರೆ. ಹಿರಿಯ ಮಾವುತರ ಮಾತನ್ನು ಹುಡುಗರು ಕೇಳೋದಿಲ್ಲ. ಹೀಗಾಗಿ ಈ ರೀತಿಯ ಘಟನೆಗಳು ಮರುಕಳಿಸುತ್ತಿವೆ. ಈ ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವ ಪ್ರಯೋಜನವಾಗಿಲ್ಲ ಎಂದಿದ್ದಾರೆ.
ಕಂಜನ್ ಅನೆಯ ಕಾಳಗ ಇದೇ ಮೊದಲ ಬಾರಿಯಾಗಿಲ್ಲ ವಿಶ್ವ ವಿಖ್ಯಾತ ಮೈಸೂರು ದಸರಾದ ಸಂದರ್ಭದಲ್ಲೂ ಸಾಕಾನೆಗಳೊಂದಿಗೆ ಕಾಳಗ ನಡೆಸಿತ್ತು. ಇದರಿಂದಾಗಿ ಮೈಸೂರು ಜನರು ಆತಂಕಕ್ಕೆ ಒಳಗಾಗಿದ್ದರು. ಅದು ಅದ ಬಳಿಕ ಮೈಸೂರು ದಸರಾ ಮುಗಿಸಿ ಬಳಿಕ ಶಿಬಿರಕ್ಕೆ ಬಂದ ಒಂದು ವಾರದಲ್ಲೇ ಕಂಜನ್ ಮತ್ತು ಧನಂಜಯ ಸಾಕಾನೆಗಳು ಕಾಳಗ ನಡೆಸಿದ್ದವು. ಇದನ್ನೂ ಓದಿ: ಚಿಕ್ಕಮಗಳೂರು | ರೈತರಿಗೆ ಉಪಟಳ ಕೊಡ್ತಿದ್ದ ದೈತ್ಯ ಕಾಡುಕೋಣ ಸೆರೆ – ತ್ಯಾವರೆಕೊಪ್ಪಕ್ಕೆ ಶಿಫ್ಟ್

