ಬೆಂಗಳೂರು: ಕರ್ನಾಟಕದಲ್ಲಿ ಹೆಚ್‌ಐವಿ ಕೇಸ್‌ಗೆ ಸಂಬಂಧಪಟ್ಟಂತೆ ಆರೋಗ್ಯ ಸಚಿವ ಯು.ಟಿ.ಖಾದರ್ ಕ್ಲಾರಿಟಿ ನೀಡಿದ್ದಾರೆ.
ಕರ್ನಾಟಕದ ಹೆಚ್‌ಐವಿ ಕೇಸ್ ವಿಚಾರದಲ್ಲಿ ನ್ಯಾಕ್ ಸಂಸ್ಥೆ ನೀಡಿರುವ ಮಾಹಿತಿಯನ್ನು ನಾನು ಒಪ್ಪಲ್ಲ ಎಂದು ಖಾದರ್ ತಿಳಿಸಿದ್ದಾರೆ. 56 ಸಾವಿರ ಕೇಸ್ ಇವೆ ಅಂತಾ ಸಂಸ್ಥೆ ತಿಳಿಸಿದೆ. ಆ ವಿಚಾರಕ್ಕೆ ಸಂಬಂದಿಸಿದಂತೆ ಕ್ಲಾರಿಟಿ ನೀಡಿ ಅಂತಾ ಪತ್ರ ಬರೆಯೋದಕ್ಕೆ ಆರೋಗ್ಯ ಇಲಾಖೆ ಇಲಾಖೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, 2004 ರಿಂದ ಇಲ್ಲಿಯವರೆಗೂ 39,028 ಸೋಂಕಿತರು ರಾಜ್ಯದಲ್ಲಿದ್ದಾರೆ. 18 ರಿಂದ 35 ವರ್ಷದೊಳಗಿನವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡು ಬಗೆಯಲ್ಲಿ ಮಾತ್ರ HIV ಪರೀಕ್ಷೆ ಮಾಡಿಸಲಾಗುತ್ತಿದೆ. ಹೆರಿಗೆ ವೇಳೆ, ರಕ್ತ ನೀಡುವಾಗ ಮಾತ್ರ HIV ಪರೀಕ್ಷೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ HIV ಸೋಂಕಿತರ ಪ್ರಮಾಣ ನಿಯಂತ್ರಣದಲ್ಲಿದೆ. ಕಳೆದ ಮೂರು ತಿಂಗಳಲ್ಲಿ 3091 HIV ಸೋಂಕಿತರು ಪತ್ತೆಯಾಗಿದ್ದಾರೆ. 5,53,453 ಜನರ ಪೈಕಿ 3091 ಸೋಂಕಿತರು ಪತ್ತೆಯಾಗಿದ್ದಾರೆ. ಕಳೆದ ಮೂರು ತಿಂಗಳಲ್ಲಿ 2,81,742 ಗರ್ಭಿಣಿಯರನ್ನ HIV ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ಎಪಿಎಲ್ ಕಾರ್ಡ್‌ದಾರರಿಗೂ ಉಚಿತ ರಕ್ತ ವಿತರಣೆ ಮಾಡ್ತಾರೆ. ಜೊತೆಗೆ ಖಾಸಗಿ ಆಸ್ಪತ್ರೆಗಳಲ್ಲಿ ರಕ್ತ ನೀಡುವಿಕೆಗೆ ದರ ನಿಗದಿ ಮಾಡಿದ್ದೇವೆ. 1,600 ರೂ. ಹೋಲ್ ರಕ್ತಕ್ಕೆ. ಬಿಳಿರಕ್ತಕಣಗಳಿಗೆ 400 ರೂಪಾಯಿ ಮತ್ತು ಪ್ಲಾಸ್ಮಾಗೆ 400 ನಿಗದಿ ಮಾಡಿದ್ದೇವೆ. ಹೆಚ್ಚು ವಸೂಲಿ ಮಾಡಿದ್ರೆ ಖಾಸಗಿ ಆಸ್ಪತ್ರೆ ವಿರುದ್ಧ ಕ್ರಮ ವಹಿಸುತ್ತೇವೆ ಎಂದು ಸಚಿವರು ಎಚ್ಚರಿಸಿದ್ದಾರೆ.
