ಬೆಂಗಳೂರು: ಆಸ್ಕರ್ ವಿಜೇತ ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ (A.R.Rahman) ಅವರು ಬೆಂಗಳೂರಿನ ಟ್ರಾಫಿಕ್ನಲ್ಲಿ (Bengaluru Traffic) ಪರದಾಡಿರುವ ಪ್ರಸಂಗ ನಡೆದಿದೆ.
ವೈಟ್ಫೀಲ್ಡ್ ಕೆಟಿಪಿಒದಲ್ಲಿ ದಿ ವಂಡರ್ಮೆಂಟ್ ಟೂರ್ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ವೈಟ್ಫೀಲ್ಡ್ ಕಾರ್ಯಕ್ರಮ ಮುಗಿಸಿ ತೆರಳುವಾಗ ರೆಹಮಾನ್ ಅವರು ಟ್ರಾಫಿಕ್ನಲ್ಲಿ ಸಿಲುಕಿದ್ದಾರೆ. ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಲಿಖಿತ್ ಔಟ್; ಮಂಜ ಭಾವುಕ
ಈ ವೇಳೆ ಕಾರಿನ ಕಿಟಕಿಯಿಂದ ನಗುತ್ತಾ ರೆಹಮಾನ್ ಅವರು ಕೈಬೀಸಿದ್ದಾರೆ. ಸಂಗೀತ ಮಾಂತ್ರಿಕನನ್ನು ಗುರುತಿಸಿದ ಅನೇಕರು ತಮ್ಮ ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ರೆಹಮಾನ್ ಕಂಡು ಜನರು ಖುಷಿ ವ್ಯಕ್ತಪಡಿಸಿದ್ದಾರೆ.

