– ಗೆಳೆಯನ ಜೊತೆ ಚಿಕನ್ ತಿನ್ನಬೇಕು ಎಂದುಕೊಂಡಿದ್ದ ಮಂಜನಿಗೆ ನಿರಾಸೆ
ಬಿಗ್ ಬಾಸ್ ಮನೆಯಿಂದ ‘ಅಗ್ನಿಪರೀಕ್ಷೆ’ ಸ್ಪರ್ಧಿ ಲಿಖಿತ್ ಗೊಂದಿ (Likith Gondi) ಹೊರಹೋಗಿದ್ದಾರೆ. ವಾರದ ಎಲಿಮಿನೇಷನ್ನಲ್ಲಿ ಪಾರಾಗದೇ ಔಟ್ ಆಗಿದ್ದಾರೆ. ದೊಡ್ಮನೆಯಲ್ಲಿ ಆತ್ಮೀಯ ಗೆಳೆಯನನ್ನು ಮಿಸ್ ಮಾಡಿಕೊಂಡ ಮಾಡರ್ನ್ ಮಹಾಕವಿ ಮಂಜ (Modern Mahakavi Manja) ಭಾವುಕರಾಗಿದ್ದಾರೆ.
ನಾಮಿನೇಟ್ ಆಗಿದ್ದವರ ಪೈಕಿ ಯಶಸ್, ಮಂಜ, ಧನುಷ್ ಸೇವ್ ಆದರು. ಉಳಿದ ಸಂಗೀತಾ, ಲಿಖಿತ್ ಮತ್ತು ಕಿರಣ್ ಶಾಸ್ತ್ರಿ ಹಾಟ್ ಸೀಟ್ನಲ್ಲಿ ಕುಳಿತಿದ್ದರು. ಅವರಲ್ಲಿ ಒಬ್ಬರು ಮನೆಯಿಂದ ಹೊರಹೋಗುವುದು ಪಕ್ಕಾ ಆಗಿತ್ತು. ಇದನ್ನೂ ಓದಿ: Bigg Boss Bigg Twist: ಒಂದೇ ದಿನ ಬಿಗ್ ಬಾಸ್ ಮನೆಯಿಂದ 8 ಸ್ಪರ್ಧಿಗಳು ಔಟ್
ಮನೆಯೊಳಗೆ ಮುಸುಕುಧಾರಿ, ಶಸ್ತ್ರಸಜ್ಜಿತ ಕಮಾಂಡೋಸ್ ಬಂದು ಹಾಟ್ ಸೀಟ್ನಲ್ಲಿರುವ ಮೂವರನ್ನೂ ಮನೆಯಿಂದ ಹೊರಗೆ ಕರೆದುಕೊಂಡು ಹೋಗಿ ತಮ್ಮ ಕಂಟ್ರೋಲ್ನಲ್ಲಿ ಇಟ್ಟುಕೊಳ್ಳುತ್ತಾರೆ. ವಾಪಸ್ ಬಂದವರು ಸೇಫ್. ಬರದೇ ಇರುವವರು ಎಲಿಮಿನೇಟ್ ಆಗುತ್ತಾರೆ ಎಂದು ಕಿಚ್ಚ ಸುದೀಪ್ ತಿಳಿಸುತ್ತಾರೆ.
ಅದರಂತೆ ಮನೆಗೆ ಕಮಾಂಡೋಸ್ ಎಂಟ್ರಿ ಕೊಟ್ಟು ಮೂವರನ್ನು ಬೇರೆ ಬೇರೆ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಾರೆ. ಮೊದಲು ಸಂಗೀತಾ, ನಂತರ ಕಿರಣ್ ಶಾಸ್ತ್ರಿ ಮನೆಗೆ ವಾಪಸ್ ಬರ್ತಾರೆ. ಅಂತಿಮವಾಗಿ ಲಿಖಿತ್ ಔಟ್ ಆಗಿರುವುದು ಪಕ್ಕಾ ಆಗುತ್ತೆ.
ಬಿಗ್ ಬಾಸ್ ಮನೆಯಲ್ಲಿ ಮೊದಲಿನಿಂದಲೂ ಆತ್ಮೀಯ ಸ್ನೇಹಿತನಾಗಿದ್ದ ಲಿಖಿತ್ ಹೊರಹೋಗಿದ್ದಕ್ಕೆ ಮಂಜ ಭಾವುಕರಾಗುತ್ತಾರೆ. ‘ನಗು ನಗುತ್ತಲೇ ಬಂದು ನಗುತ್ತಲೇ ಹೋದ..’ ಎಂದು ಬೇಸರಗೊಂಡರು. ಲಿಖಿತ್ ಬಂದಾಗ ಚಿಕನ್ನ ಇಬ್ಬರೂ ಖುಷಿಯಿಂದ ತಿನ್ನಬೇಕು ಎಂದುಕೊಂಡಿದ್ದ ಮಂಜಾಗೆ ನಿರಾಸೆಯಾಯಿತು. ಮನೆಮಂದಿ ಮಂಜನನ್ನು ಸಮಾಧಾನ ಮಾಡಿದರು. ಇದನ್ನೂ ಓದಿ: ಮನೆಯಿಂದ ಹೋದ್ರೂ ಪರವಾಗಿಲ್ಲ, ಇಬ್ರು ಹುಡುಗ್ರನ್ನ ಹೊಡೆದು ಹೋಗ್ತೀನಿ: ಆಸಿಯಾ ವೈಲೆಂಟ್
ಮನೆಯವರ ಲೆಕ್ಕಾಚಾರ ಉಲ್ಟಾ
ಎಲಿಮಿನೇಷನ್ಗೂ ಮುಂಚೆ ಮನೆಯಿಂದ ಯಾರು ಹೊರಹೋಗಬೇಕು ಅಂತ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಕೇಳಿದಾಗ, ಬಹುಪಾಲು ಮಂದಿಯ ಉತ್ತರ ಯಶಸ್ ಕೃಷ್ಣ ಆಗಿತ್ತು. ಆದರೆ, ಎಲ್ಲರ ಲೆಕ್ಕಾಚಾರ ಉಲ್ಟಾ ಆಗಿದೆ. ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಮೊದಲು ಸೇಫ್ ಆಗುವ ಮೂಲಕ ಯಶಸ್ ಎಲ್ಲರಿಗೂ ಶಾಕ್ ಕೊಟ್ಟರು. ಆದರೆ, ಹೊರಹೋಗಿದ್ದು ಲಿಖಿತ್.

