CinemaDistrictsKarnatakaLatestMain PostSandalwood

ಹಿರಿಯ ರಂಗಕರ್ಮಿ, ಏಣಗಿ ಬಾಳಪ್ಪನವರ ಪತ್ನಿ ಲಕ್ಷ್ಮೀಬಾಯಿ ನಿಧನ

ಹಿರಿಯ ನಟಿ, ರಂಗ ಕಲಾವಿದೆ ಲಕ್ಷ್ಮೀಬಾಯಿ ಏಣಗಿ ಅವರು ಇಂದು ಮುಂಜಾನೆ ಧಾರವಾಡದ ರಜತಗಿರಿ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು. ಸಿನಿಮಾ ಮತ್ತು ಕಿರುತೆರೆಯ ಖ್ಯಾತ ಕಲಾವಿದರ ಏಣಗಿ ನಟರಾಜ್ ಅವರ ತಾಯಿ ಮತ್ತು ಹಿರಿಯ ರಂಗಕರ್ಮಿ ಏಣಗಿ ಬಾಳಪ್ಪನವರ ಪತ್ನಿ ಇವರಾಗಿದ್ದಾರೆ. ಇದನ್ನೂ ಓದಿ : ಶಿವಣ್ಣನ ಹುಲಿ ಅವತಾರ: ಬೈರಾಗಿ ಹಾಡಿಗೆ ಭೀಮನ ಬಲ

ಬಾಳಪ್ಪನವರ ಜತೆ ಅನೇಕ ನಾಟಕಗಳಲ್ಲಿ ಅಭಿನಯಿಸಿರುವ ಲಕ್ಷ್ಮೀ ಬಾಯಿ, ಪುತ್ರ ನಟರಾಜ್ ಜೊತೆ ‘ಸಿಂಗಾರವ್ವ’ ಸಿನಿಮಾದಲ್ಲಿ ನಟಿಸಿದ್ದರು. ಮಧ್ಯಾಹ್ನ ಧಾರವಾಡದ ಹೊಸಯಲ್ಲಾಪುರದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ : ಗೋವಾ ಸಿಎಂ ಭೇಟಿಯಾದ ಯಶ್, ರಾಧಿಕಾ ಪಂಡಿತ್

ಲಕ್ಷ್ಮೀಬಾಯಿ ಅವರು ಬಾಳಪ್ಪನವರನ್ನು ಮದುವೆಯಾದ ನಂತರ ಬಾಳಪ್ಪನವರ ಕಲಾವೈಭವ ನಾಟ್ಯ ಸಂಘದಲ್ಲೇ ಬಣ್ಣ ಹಚ್ಚುವುದಕ್ಕೆ ಶುರು ಮಾಡಿದರು. ಲಕ್ಷ್ಮಿಬಾಯಿ ಅವರು ಪಾತ್ರಗಳಿಗೆ ಬಣ್ಣ ಹಚ್ಚುವುದು ಆರಂಭಿಸಿದಾಗ ಬಾಳಪ್ಪ ಅವರು ಸ್ತ್ರೀ ಪಾತ್ರಗಳಿಗೆ ಬಣ್ಣ ಹಚ್ಚುವುದು ನಿಲ್ಲಿಸಿದರು. ಹೇಮರಡ್ಡಿ ಮಲ್ಲಮ್ಮ, ಪಠಾಣಿ ಪಾಷಾ, ಚಲೇಜಾವ್, ಕುರುಕ್ಷೇತ್ರ, ಕಿತ್ತೂರು ಚನ್ನಮ್ಮ, ಬಡತನ ಭೂತ, ದೇವರ ಮಗು… ಹೀಗೆ ಅನೇಕ ನಾಟಕಗಳಲ್ಲಿ ಲಕ್ಷ್ಮೀಬಾಯಿ ಅಭಿನಯಿಸಿದ್ದಾರೆ. ಧಾರವಾಡದಲ್ಲಿ 1994ರಲ್ಲಿ ಮ್ಯಾಳ ನಾಟಕ ತಂಡ ಶುರುವಾದಾಗ ‘ಕುಂಕುಮ’ ನಾಟಕ ಆಡಬೇಕಿತ್ತು. ಆದರೆ ಈ ನಾಟಕದಲ್ಲಿ ಅನುರೂಧಾ ಪಾತ್ರ ಮಾಡಬೇಕಿದ್ದ ಪಾತ್ರಧಾರಿ ಕೈ ಕೊಟ್ಟ ಕಾರಣ ಲಕ್ಷ್ಮಿಬಾಯಿ ಅಭಿನಯಿಸಿದರು.

Leave a Reply

Your email address will not be published.

Back to top button