ಹಾಸನ: ನೇಣುಬಿಗಿದುಕೊಂಡು ಉಪತಹಶೀಲ್ದಾರ್ (Sub Tahsildar) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ನಗರದ (Hassan City) ಬಿಎಂ ರಸ್ತೆಯಲ್ಲಿರುವ ಲಾಡ್ಜ್‌ನಲ್ಲಿ ನಡೆದಿದೆ.
ತಿಮ್ಮಯ್ಯ (52) ಆತ್ಮಹತ್ಯೆಗೆ ಶರಣಾದ ಉಪತಹಶೀಲ್ದಾರ್. ಮೈಸೂರು ಜಿಲ್ಲೆ, ಸಾಲಿಗ್ರಾಮದಲ್ಲಿ ಉಪತಹಶೀಲ್ದಾರ್ ಆಗಿದ್ದ ತಿಮ್ಮಯ್ಯ, ಮೂರು ವರ್ಷಗಳ ಹಿಂದೆ ಹಾಸನದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ನಿನ್ನೆ (ಮೇ 30) ಲಾಡ್ಜ್‌ನಲ್ಲಿ 4 ಪುಟದ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ: ಸಾಮಾನ್ಯ ಕಾರ್ಯಕರ್ತನಿಂದ ಅನಿವಾರ್ಯ ನಾಯಕ – `ಕನಕಪುರ ಬಂಡೆ’ ಅಂದ್ರೆ ಕಾಂಗ್ರೆಸ್ ಪಾಲಿಗೆ ಪಕ್ಷನಿಷ್ಠ

ಮೂಲತಃ ಕೊಡಗು ಜಿಲ್ಲೆಯವರಾದ ತಿಮ್ಮಯ್ಯ ಹಾಸನ ನಗರದ ಚನ್ನಪಟ್ಟಣದ ದ್ಯಾವಮ್ಮ ಬಡಾವಣೆಯಲ್ಲಿ ಕುಟುಂಬಸ್ಥರೊಂದಿಗೆ ವಾಸವಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಬಿಟ್ ಕಾಯಿನ್ ಬಹುಕೋಟಿ ಹಗರಣ ಕೇಸ್ – ನಲಪಾಡ್‌ಗೆ ಮತ್ತೆ ಇಡಿ ಸಮನ್ಸ್
