ನೆಲಮಂಗಲ: ಕಾಲೇಜಿಗೆ ಬರುವ ವೇಳೆ ಪೋಲಿಪುಂಡರ ಹಾವಳಿ ದಿನೇ ದಿನೇ ಹೆಚ್ಚುತ್ತಿದೆ. ಕೂಡಲೇ ಇವರ ಹಾವಳಿ ತಪ್ಪಿಸಿ ಎಂದು ನೂರಾರು ಕಾಲೇಜು ವಿದ್ಯಾರ್ಥಿಗಳು ಶಾಸಕ ಶ್ರೀನಿವಾಸಮೂರ್ತಿ ಅವರನ್ನು ತಡೆದು ಮನವಿ ಪತ್ರ ನೀಡಿದ ಪ್ರಸಂಗ ಜರುಗಿದೆ.
Advertisement
ಬೆಂಗಳೂರು ಹೊರವಲಯ ನೆಲಮಂಗಲ ನಗರದ ಸೊಂಡೆಕುಪ್ಪ ರಸ್ತೆಯ ಪವಾಡ ಬಸವಣ್ಣ ದೇವರ ಮಠದ ನೂರಾರು ವಿದ್ಯಾರ್ಥಿನಿಯರು ಶ್ರೀನಿವಾಸಮೂರ್ತಿ ಅವರಿಗೆ ಪತ್ರ ನೀಡಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಾಷ್ಟ್ರೀಯ ಹಸಿರು ನ್ಯಾಯಾಲಯಕ್ಕೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವ ಅಧಿಕಾರವಿದೆ: ಸುಪ್ರೀಂಕೋರ್ಟ್
Advertisement
ನೆಲಮಂಗಲ ನಗರಸಭೆ ವ್ಯಾಪ್ತಿಯ ಸೊಂಡೆಕೊಪ್ಪ ರಸ್ತೆಯ ಎರಡು ಬದಿಯಲ್ಲೂ ಅನಧಿಕೃತವಾಗಿ ಅಂಗಡಿಗಳು ಹಾಗೂ ಶೇಡ್ ಗಳು ನಿರ್ಮಾಣವಾಗಿದೆ. ಈ ಹಿನ್ನೆಲೆ ಸೊಂಡೆಕೊಪ್ಪ ರಸ್ತೆಯಲ್ಲಿ ವೃದ್ಧರು, ಹೆಣ್ಣು ಮಕ್ಕಳು ಓಡಾಡುವುದೇ ದುಸ್ತರವಾಗಿದೆ.
Advertisement
Advertisement
ಈ ರಸ್ತೆಯಲ್ಲಿ ವಾಹನ ದಟ್ಟಣೆ ಬಲು ಜೋರಾಗಿದ್ದು, ರಸ್ತೆಯ ಎರಡು ಬದಿಯಲ್ಲಿ ಅಂಗಡಿ ಮುಂಗಟ್ಟು ಇರುವುದರಿಂದ ಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿಯರು ಕಾಲೇಜಿಗೆ ತೆರಳಲು ಹರ ಸಾಹಸ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಕಷ್ಟು ಬಾರಿ ಈ ಕುರಿತು ಅಧಿಕಾರಿಗಳು, ಪೊಲೀಸರಿಗೆ ದೂರು ನೀಡಲಾಗಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಇದನ್ನೂ ಓದಿ: ಜೆಡಿಎಸ್ ಅನ್ನು ರಾಜಕೀಯವಾಗಿ 1 ಕಿ.ಮೀ, 1 ಮೀಟರ್ ದೂರ ಇಡಬೇಕು: ಪ್ರೀತಂಗೌಡ
ಇಂದು ವಿದ್ಯಾರ್ಥಿಗಳು ಶಾಸಕ ಶ್ರೀನಿವಾಸಮೂರ್ತಿ ಬಳಿ ತಮ್ಮ ನೋವನ್ನು ಮನವಿ ಮೂಲಕ ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆ ನೆಲಮಂಗಲದಲ್ಲಿ ಶ್ರೀನಿವಾಸ್ ಮೂರ್ತಿ ಮಾತನಾಡಿ, ಕೂಡಲೇ ಈ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದ್ದಾರೆ.