-ಗರ್ಭಿಣಿ ಚಿರತೆ ಸತ್ತಾಗಲೇ ಕ್ವಾರಿಗೆ ವಿರೋಧ ಮಾಡಿದ್ದೆ ಎಂದ ಶಾಸಕ
–ಅಕ್ರಮದಲ್ಲಿ ಗಣಿ, ಅರಣ್ಯ ಇಲಾಖೆ, ಸ್ಥಳೀಯ ಪೊಲೀಸರು ಶಾಮೀಲು
ಬೆಂಗಳೂರು/ರಾಮನಗರ: ಕಲ್ಲು ಕ್ವಾರಿ ಕ್ರಷರ್ ಮಾಲೀಕನನ್ನ ಕೂಡಲೇ ಬಂಧನ ಮಾಡಬೇಕು ಎಂದು ಶಾಸಕ ಎಸ್‌ಟಿ ಸೋಮಶೇಖರ್ (ST Somashekar) ಒತ್ತಾಯಿಸಿದ್ದಾರೆ.
ಕಲ್ಲು ಕ್ವಾರಿ ದುರಂತದ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಹಿಂದೆ ಬಂಡೆ ಓನರ್‌ಗಳ ಕರೆದು ಸಭೆ ಮಾಡಿದ್ದೆ. ಲೀಗಲ್ ಆಗಿ ಬ್ಲ್ಯಾಸ್ಟ್ ಮಾಡಿ ಅಂತ ಹೇಳಿದ್ದೆ. ಗರ್ಭಿಣಿ ಚಿರತೆ ಸತ್ತಾಗಲೇ ನಾನು ವಿಷಯ ಪ್ರಸ್ತಾಪ ಮಾಡಿದ್ದೆ. ಕೂಡಲೇ ಕ್ವಾರಿ ಮಾಲೀಕನ ಬಂಧನ ಮಾಡಬೇಕು. ಪ್ರಬಲವಾಗಿದ್ದಾರೆ, ಕೇಸ್ ಮುಚ್ಚಿ ಹಾಕಿ ಬಿಡ್ತಾರೆ. ಹೀಗಾಗಿ ಸೂಕ್ತ ಕ್ರಮ ಆಗಬೇಕು. ಸತ್ತವರ ಫ್ಯಾಮಿಲಿಗೆ ನ್ಯಾಯ ಕೊಡಿಸಬೇಕು. ಕ್ವಾರಿ ಮಾಲೀಕ ಒಂದು ಕೋಟಿ ರೂ. ಪರಿಹಾರ ಕೊಡಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.
ಬೆಳಗ್ಗೆ 7 ಗಂಟೆಗೆ ಈ ಘಟನೆ ಆಗಿದೆ. ದುರಂತದಲ್ಲಿ 10 ಜನರ ಪೈಕಿ 8 ಜನ ಸತ್ತಿರುವ ಮಾಹಿತಿ ಬಂದಿದೆ. ಈ ಕ್ವಾರಿ ಬಗ್ಗೆ ನಾನು ಹಿಂದೆ ಸದನದಲ್ಲಿ ವಿರೋಧ ಮಾಡಿದ್ದೆ. ಪಿಟೀಷನ್ ಕಮಿಟಿಯಲ್ಲೂ ಪ್ರಸ್ತಾಪ ಮಾಡಿದ್ದೆ. ಈ ಕ್ವಾರಿ ಅಕ್ರಮವಾಗಿ ನಡೆಯುತ್ತಿದೆ. ಇದರಲ್ಲಿ ಗಣಿ ಇಲಾಖೆ, ಅರಣ್ಯ ಇಲಾಖೆ, ಸ್ಥಳೀಯ ಪೊಲೀಸರು, ಪೊಲ್ಯೂಷನ್ ಕಂಟ್ರೋಲ್‌ನವರು ಶಾಮೀಲು ಆಗಿದ್ದಾರೆ. ಇವರ ವಿರುದ್ಧ ಎಫ್‌ಐಆರ್ (FIR) ದಾಖಲಿಸಬೇಕು. ಸಿಎಂ ಗಮನಕ್ಕೆ ತಂದು ಕಠಿಣ ಕ್ರಮಕ್ಕೆ ಒತ್ತಾಯ ಮಾಡ್ತೀನಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬೆಂಗಳೂರು ಸಮೀಪದ ಕಲ್ಲು ಕ್ವಾರಿಯಲ್ಲಿ ಘೋರ ದುರಂತ – ಬಂಡೆ ಕುಸಿದು 7 ಕಾರ್ಮಿಕರು ಸಾವು
