ಚಿಕ್ಕಮಗಳೂರು: ಶೃಂಗೇರಿ (Sringeri) ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಆಣೆ ಪ್ರಮಾಣ ಧರ್ಮಸ್ಥಳದ (Dharmasthala) ಮಂಜುನಾಥ ಸ್ವಾಮಿ ದೇಗುಲಕ್ಕೂ (Manjunatha Swamy Temple) ಕಾಲಿಟ್ಟಿದೆ.
ಅಂಚೆ ಮತದಾನ ಮರು ಎಣಿಕೆ ಫಲಿತಾಂಶ ಹೊರಬಂದ ಬಳಿಕ ಬಹಳ ಬಿಜೆಪಿ (BJP) ಕಾರ್ಯಕರ್ತರು, ನಮ್ಮ ಅಂದೇ ಗೆಲುವು ಸಾಧಿಸಿತ್ತು. ಆದರೆ, ಬಿಜೆಪಿ ಏಜೆಂಟ್‌ಗಳಾಗಿದ್ದ ರಾಮಸ್ವಾಮಿ ಶೆಟ್ಟಿಗದ್ದೆ ಹಾಗೂ ಸತೀಶ್ ಅದ್ದಡ ಕಾಂಗ್ರೆಸ್ ಗೆಲುವಿಗೆ ಶ್ರಮಿಸಿ ಬಿಜೆಪಿಗೆ ಮೋಸ ಮಾಡಿದ್ದರು ಎಂದು ಆರೋಪಿಸಿದ್ದಾರೆ. ಅಲ್ಲದೇ ಶೃಂಗೇರಿ ವಿಧಾನಸಭಾ ಕ್ಷೇತ್ರದಾದ್ಯಂತ ಅಪಪ್ರಚಾರ ಮಾಡುತ್ತಿದ್ದಾರೆ. ಇದನ್ನೂ ಓದಿ: ಅಂಚೆ ಮತ ಮರು ಎಣಿಕೆಯಲ್ಲಿ ಸೋಲು – ದೇವಾಲಯ, ಚರ್ಚ್, ಮಸೀದಿ ಮೊರೆಹೋದ ರಾಜೇಗೌಡ
ಇದರಿಂದ ಬೇಸತ್ತ ಏಜೆಂಟ್‌ಗಳು ಕೊಪ್ಪ (Koppa) ತಾಲೂಕಿನ ವೀರಭದ್ರ ಸ್ವಾಮಿ ದೇಗುಲ ಹಾಗೂ ಗಬ್ಬಾನೆ ಭೂತರಾಯನ ದೇಗುಲದಲ್ಲಿ 2023ರ ಮತ ಎಣಿಕೆ ಪಾರದರ್ಶಕವಾಗಿತ್ತು ಹಾಗೂ ಯಾವುದೇ ಲೋಪವಾಗಿರದ ಸಾಧ್ಯತೆ ಇದೆ ಎಂದು ಪ್ರಮಾಣ ಮಾಡಿದ್ದರು. ಇಂದು ಪಕ್ಷ ನಿಷ್ಠೆ ಸಾಬೀತುಪಡಿಸಿಕೊಳ್ಳಲು ಒಂದು ಹೆಜ್ಜೆ ಮುಂದೆ ಹೋಗಿರೋ ರಾಮಸ್ವಾಮಿ ಹಾಗೂ ಸತೀಶ್ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇಗುಲಕ್ಕೂ ಭೇಟಿ ನೀಡಿ ಆಣೆ ಪ್ರಮಾಣ ಮಾಡಿದ್ದಾರೆ.
2023ರಲ್ಲಿ ಮಾನ್ಯವಾದ ಮತ 2026ರಲ್ಲಿ ಹೇಗೆ ಅಮಾನ್ಯವಾದವೆಂದು ಮಾಜಿ ಶಾಸಕ ರಾಜೇಗೌಡ ಕೂಡ ಕ್ಷೇತ್ರದ ದೇವಾಲಯ, ಚರ್ಚ್-ಮಸೀದಿಯಲ್ಲಿ ಪ್ರಾರ್ಧನೆ ಮಾಡಿದ್ದಾರೆ. ಅಲ್ಲದೇ ಸುಪ್ರೀಂಕೋರ್ಟ್ ಮೊರೆ ಕೂಡ ಹೋಗಿದ್ದಾರೆ. ಈ ಮಧ್ಯೆ ಬಿಜೆಪಿ ಏಜೆಂಟ್‌ಗಳ ಈ ಆಣೆ-ಪ್ರಮಾಣ ಕ್ಷೇತ್ರದಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದೆ.
2023ರಲ್ಲಿ ಟಿ.ಡಿ. ರಾಜೇಗೌಡ (T.D Raje Gowda) ಅಂಚೆ ಮತಗಳಿಂದ 201 ಮತಗಳ ಅಂತರದಿಂದ ಗೆದ್ದಿದ್ದು, 2026ರ ಮರು ಎಣಿಕೆಯಲ್ಲಿ ಅದೇ ಅಂಚೆ ಮತಗಳಿಂದ 52 ಮತಗಳ ಅಂತರದಿಂದ ಸೋಲು ಕಂಡಿದ್ದರು. ಇದು ಕಾಂಗ್ರೆಸ್ (Congress) ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿತ್ತು. 2023ರಲ್ಲಿ ಮಾನ್ಯವಾಗಿದ್ದ 255 ಮತಗಳು 2026ರಲ್ಲಿ ಹೇಗೆ ಅಮಾನ್ಯವಾದವು? ಇದು ಮತಚೋರಿ ಎಂದು ಕಾಂಗ್ರೆಸ್ ಆರೋಪಿಸಿತ್ತು. ಇದನ್ನೂ ಓದಿ: ಶೃಂಗೇರಿ ಕ್ಷೇತ್ರದಲ್ಲಿ ಮರು ಮತ ಎಣಿಕೆ ವಿಚಾರ – ‘ಸುಪ್ರೀಂ’ ಮೆಟ್ಟಿಲೇರಿದ ಕಾಂಗ್ರೆಸ್ ನಾಯಕ ರಾಜೇಗೌಡ

