– ಬ್ರೆಜಿಲ್ ಪತ್ರಕರ್ತ ಪೆಪೆ ಎಸ್ಕೋಬಾರ್ ಗಂಭೀರ ಆರೋಪ
– ಸ್ವಿಟ್ಜರ್ಲೆಂಡ್‌ನ ಜಿನೆವಾದಲ್ಲಿ ನಡೆಯುತ್ತಿದ್ದ ಸಭೆ
ದುಬೈ: ಸ್ವಿಟ್ಜರ್ಲೆಂಡ್‌ನ ಜಿನೆವಾದಲ್ಲಿ ಅಮೆರಿಕ (USA) ಮತ್ತು ಇರಾನ್ (Iran) ನಡುವಿನ ಉನ್ನತ ಮಟ್ಟದ ಮಾತುಕತೆ ಸಂದರ್ಭದಲ್ಲಿ ಪಾಕಿಸ್ತಾನದ (Pakistan) ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಹತ್ಯೆಗೆ ಇಸ್ರೇಲ್ ಸಂಚು ರೂಪಿಸಿತ್ತು ಎಂಬ ಸ್ಫೋಟಕ ವಿಚಾರ ಈಗ ಭಾರೀ ಚರ್ಚೆಯಾಗುತ್ತಿದೆ.
ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಮಾತುಕತೆ ನಡೆಸಲು ಪಾಕಿಸ್ತಾನವು ಮಧ್ಯಸ್ಥಿಕೆ ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸ್ವಿಟ್ಜರ್ಲೆಂಡ್‌ನ ಜಿನೆವಾದಲ್ಲಿ ಉನ್ನತ ಮಟ್ಟದ ಮಾತುಕತೆ ನಡೆಯುತ್ತಿತ್ತು. ಈ ನಿಯೋಗದಲ್ಲಿ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.
ಮಾತುಕತೆಯ ಸಮಯದಲ್ಲಿ ಅಸಿಮ್ ಮುನೀರ್(Asim Munir) ಮತ್ತು ಇಡೀ ಪಾಕಿಸ್ತಾನಿ (Pakistan) ನಿಯೋಗವನ್ನು ಹತ್ಯೆ ಮಾಡಲು ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸ್ಸಾದ್ (Mossad) ಸಂಚು ರೂಪಿಸಿತ್ತು ಎಂದು ಬ್ರೆಜಿಲ್ ಪತ್ರಕರ್ತ ಪೆಪೆ ಎಸ್ಕೋಬಾರ್ ಆರೋಪಿಸಿದ್ದಾರೆ.
ಲೆಬನಾನ್-ಆಸ್ಟ್ರೇಲಿಯನ್ ಮೂಲದ ಉದ್ಯಮಿ, ಪಾಡ್‌ಕ್ಯಾಸ್ಟ್ ಹೋಸ್ಟ್ ಮತ್ತು ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿರುವ ಸುದ್ದಿ ನಿರೂಪಕ, ರಾಜಕೀಯ ವಿಶ್ಲೇಷಕ ಮಾರಿಯೋ ನೌಫಲ್ ಅವರ ಪಾಡ್‌ಕಾಸ್ಟ್‌ನಲ್ಲಿ ಎಸ್ಕೋಬಾರ್ ಈ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಮೂವರ ಜೊತೆ ಅಫೇರ್; ತಪ್ಪೊಪ್ಪಿಕೊಂಡ ಬಿಲ್‌ಗೇಟ್ಸ್
🇵🇰🇮🇱 A peace negotiation in Switzerland allegedly came within inches of becoming an international assassination crisis.
Geopolitical analyst Pepe Escobar claims Pakistani military intelligence intercepted a Mossad plan to assassinate Army Chief Asim Munir during the talks, then… https://t.co/JWyHzH7hoT pic.twitter.com/oXOJs1i5e8
— Mario Nawfal (@MarioNawfal) June 24, 2026
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಆದೇಶದ ಮೇರೆಗೆ ಈ ಹತ್ಯೆಯ ಸಂಚು ರೂಪಿಸಲಾಗಿತ್ತು. ಆದರೆ ಪಾಕಿಸ್ತಾನದ ಮಿಲಿಟರಿ ಇಂಟೆಲಿಜೆನ್ಸ್ ಅತ್ಯಂತ ನಂಬಿಕಸ್ಥ ಮೂಲಗಳಿಂದ ಈ ಇಡೀ ಯೋಜನೆಯನ್ನು ಮೊದಲೇ ಪತ್ತೆಹಚ್ಚಿ ಉಗ್ರ ಸಂದೇಶ ರವಾನಿಸಿತ್ತು ಎಂದು ಎಸ್ಕೋಬಾರ್ ಹೇಳಿದ್ದಾರೆ.
ಈ ಸಂಚಿನ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ, ಪಾಕಿಸ್ತಾನವು ಓಮನ್ ದೇಶದ ರಾಯಭಾರಿಗಳ ಮೂಲಕ ಇಸ್ರೇಲ್‌ಗೆ ನೇರ ಮತ್ತು ಕಟು ಸಂದೇಶ ರವಾನಿಸಿತ್ತು. ಒಂದು ವೇಳೆ ನೀವು ನಮ್ಮ ನಿಯೋಗಕ್ಕೆ ಕೈ ಇಟ್ಟರೆ ನಾವು ಇಸ್ರೇಲ್ ಅನ್ನು ಜಗತ್ತಿನ ನಕ್ಷೆಯಿಂದಲೇ ಅಳಿಸಿಹಾಕುತ್ತೇವೆ ಎಂದು ಪಾಕಿಸ್ತಾನ ನೇರವಾಗಿ ಧಮಕಿ ಹಾಕಿತ್ತು ಎಂದು ಮೂಲಗಳನ್ನು ಉಲ್ಲೇಖಿಸಿ ಎಸ್ಕೋಬಾರ್ ವಿವರಿಸಿದ್ದಾರೆ
ಪೆಪೆ ಎಸ್ಕೋಬಾರ್ ಅವರ ಈ ಹೇಳಿಕೆಯನ್ನು ಪಾಕಿಸ್ತಾನದ ಹಿರಿಯ ಪತ್ರಕರ್ತರು ಮತ್ತು ಮಾಧ್ಯಮಗಳು ತಳ್ಳಿಹಾಕಿವೆ. ಇದು ಯಾವುದೇ ಆಧಾರಗಳಿಲ್ಲದ ಕಟ್ಟುಕಥೆ ಮತ್ತು ಪ್ರಚಾರ ಎಂದು ಹಿರಿಯ ಪತ್ರಕರ್ತ ಸೈಯದ್ ತಲತ್ ಹುಸೇನ್ ಸೇರಿದಂತೆ ಹಲವರು ಹೇಳಿದ್ದಾರೆ. ಇದನ್ನೂ ಓದಿ: ಉಕ್ರೇನ್ ಯುದ್ಧಕ್ಕೆ ಭಾರತೀಯ ಸೇನೆ| ಜೆ.ಡಿ. ವ್ಯಾನ್ಸ್ ಶಾಕಿಂಗ್ ಪ್ರಸ್ತಾಪ ನಿರಾಕರಿಸಿದ್ದ ಟ್ರಂಪ್; ಹೊಸ ಪುಸ್ತಕದಲ್ಲಿ ರಹಸ್ಯ ಬಯಲು
ಪಾಕಿಸ್ತಾನ ಮತ್ತು ಇಸ್ರೇಲ್ ದೇಶಗಳ ನಡುವೆ ಯಾವುದೇ ರೀತಿಯ ರಾಜತಾಂತ್ರಿಕ ಸಂಬಂಧಗಳಿಲ್ಲ ಅಷ್ಟೇ ಅಲ್ಲದೇ ಇಸ್ರೇಲ್ ಅನ್ನು ದೇಶ ಎಂದು ಮಾನ್ಯ ಮಾಡುವುದೂ ಇಲ್ಲ.ಇತ್ತೀಚೆಗಷ್ಟೇ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಇಸ್ರೇಲ್ ಅನ್ನು “ಮಾನವಕುಲಕ್ಕೆ ಅಂಟಿರುವ ಶಾಪ” ಎಂದು ಕರಿದಿದ್ದರು.

