ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2026) 19ನೇ ಆವೃತ್ತಿಯ ಪ್ಲೇ-ಆಫ್‌ಗೆ (Playoffs) ಮೂರು ತಂಡಗಳು ಲಗ್ಗೆ ಇಟ್ಟಿವೆ. ಇನ್ನುಳಿದ ಒಂದು ಸ್ಥಾನಕ್ಕಾಗಿ 5 ತಂಡಗಳ ನಡುವೆ ಭರ್ಜರಿ ಪೈಪೋಟಿ ಏರ್ಪಟ್ಟಿದೆ.
ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಮೊದಲ ತಂಡವಾಗಿ ಪ್ಲೇ-ಆಫ್‌ಗೆ ಅಧಿಕೃತವಾಗಿ ಎಂಟ್ರಿಕೊಟ್ಟಿದೆ. ಸೋಮವಾರ (ಮೇ 19) ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ವಿರುದ್ಧ ಹೈದರಾಬಾದ್ ಭರ್ಜರಿ ಜಯ ಸಾಧಿಸುತ್ತಿದ್ದಂತೆ ಗುಜರಾತ್ ಟೈಟಾನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಕೂಡ 16 ಅಂಕಗಳೊಂದಿಗೆ ಅಧಿಕೃತವಾಗಿ ಟಾಪ್-4ರಲ್ಲಿ ಸ್ಥಾನವನ್ನು ಖಚಿತಪಡಿಸಿಕೊಂಡಿವೆ.ಇದನ್ನೂ ಓದಿ: ಮುಂದಿನ ಐಪಿಎಲ್ ಆಡ್ತಾರಾ ಧೋನಿ – ಸುರೇಶ್ ರೈನಾ ಹೇಳಿದ್ದೇನು?
We’ve got the 𝐐 next to our name, but we’re farrrrrr from done. ❤️ pic.twitter.com/lkQkRN95mj
— Royal Challengers Bengaluru (@RCBTweets) May 17, 2026
— SunRisers Hyderabad (@SunRisers) May 19, 2026
ಇನ್ನೂ ಲೀಗ್ ಹಂತದ ಕೆಲವೇ ಪಂದ್ಯಗಳು ಬಾಕಿಯಿದ್ದು, ಪ್ಲೇ-ಆಫ್‌ನಲ್ಲಿ ಉಳಿದಿರುವ ಕೇವಲ ಒಂದೇ ಒಂದು ಸ್ಥಾನಕ್ಕಾಗಿ ಒಟ್ಟು 5 ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
Making 𝐪𝐮𝐚𝐥𝐢𝐟𝐢𝐜𝐚𝐭𝐢𝐨𝐧 a habit on the back of captain Gill’s leadership and the team’s consistency. 🤝 pic.twitter.com/0bHtCyXnTo
— Gujarat Titans (@gujarat_titans) May 18, 2026
ಅಂಕಪಟ್ಟಿಯ 4ನೇ ಸ್ಥಾನಕ್ಕಾಗಿ ಸದ್ಯ ಪಂಜಾಬ್ ಕಿಂಗ್ಸ್ (PBKS), ರಾಜಸ್ಥಾನ್ ರಾಯಲ್ಸ್ (RR), ಚೆನ್ನೈ ಸೂಪರ್ ಕಿಂಗ್ಸ್ (CSK), ಡೆಲ್ಲಿ ಕ್ಯಾಪಿಟಲ್ಸ್ (DC) ಮತ್ತು ಕೋಲ್ಕತಾ ನೈಟ್ ರೈಡರ್ಸ್ (KKR) ತಂಡಗಳ ಕಾದಾಟ ಜೋರಾಗಿದ್ದು, `Do Or Die’ ಪರಿಸ್ಥಿತಿ ಎದುರಾಗಿದೆ. ಮುಂಬೈ ಇಂಡಿಯನ್ಸ್ (MI) ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG) ಈಗಾಗಲೇ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿವೆ.
ಮೇ 26ರಿಂದ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಕ್ವಾಲಿಫೈಯರ್ ಹಾಗೂ ಎಲಿಮಿನೇಟರ್ ಪಂದ್ಯಗಳು ಆರಂಭವಾಗಲಿದ್ದು, ಮೇ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ.ಇದನ್ನೂ ಓದಿ: ‘ವಿಸಿಲ್ ಪೋಡು’ ಸನ್ನೆ ಮಾಡಿ ಸಿಎಸ್‌ಕೆ ಅಭಿಮಾನಿಗಳನ್ನು ಕೆಣಕಿದ ಇಶಾನ್ ಕಿಶನ್

