ಚೆನ್ನೈ: ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್. ಧೋನಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದು ಐಪಿಎಲ್‌ನಲ್ಲಿ ಮಾತ್ರ ಸಿಎಸ್‌ಕೆ ತಂಡದ ಭಾಗವಾಗಿದ್ದಾರೆ. ಅಲ್ಲಿಯೂ ಅವರು ಮುಂದಿನ ಆವೃತ್ತಿ ಆಡ್ತಾರಾ ಅಥವಾ ಇಲ್ಲವಾ? ಎಂಬ ಚರ್ಚೆಗಳು ಆರಂಭಗೊಂಡಿವೆ. ಇದೇ ರೀತಿಯ ಚರ್ಚೆಗಳು ಕಳೆದ 5 ವರ್ಷಗಳಿಂದೂ ನಡೆಯುತ್ತಿವೆ.
ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ತಂಡದ ಭಾಗವಾಗಿರುವ ಧೋನಿ, ಇದುವರೆಗೆ ಸಿಎಸ್‌ಕೆ ಪರ ಯಾವುದೇ ಪಂದ್ಯದಲ್ಲೂ ಮೈದಾನದಲ್ಲಿ ಕಾಣಿಸಿಕೊಂಡಿಲ್ಲ.
ನಿನ್ನೆ (ಮೇ 18) ನಡೆದ ತವರಿನ ಕೊನೆಯ ಪಂದ್ಯದಲ್ಲಿ ಫೋಟೊ ತೆಗೆಸಿಕೊಳ್ಳಲು ಮೈದಾನಕ್ಕೆ ಬಂದ ಅವರು, ಚೆನ್ನೈ ಅಭಿಮಾನಿಗಳು ಕೈಬೀಸಿದ್ದಾರೆ ಮಾತ್ರವಲ್ಲ, ಹಲವರಿಗೆ ಆಟೊಗ್ರಾಫ್ ಹಾಗೂ ಬಾಲ್‌ನ್ನು ನೀಡಿದ್ದಾರೆ.
2026ರ ಐಪಿಎಲ್ ಆವೃತ್ತಿಯಲ್ಲಿ ತಮ್ಮ ಕೋಟಾದ ಕೊನೆಯ ತವರಿನ ಪಂದ್ಯವನ್ನು ಸಿಎಸ್‌ಕೆ ಆಡಿತು. ಈ ಪಂದ್ಯ ವೀಕ್ಷಣೆಗೆಂದು ಮೈದಾನಕ್ಕೆ ಆಗಮಿಸಿದ್ದ, ಅವರ ಮಾಜಿ ಸಹ ಆಟಗಾರ ಹಾಗೂ ಚೆನ್ನೈ ತಂಡದಲ್ಲಿ ‘ಚಿನ್ನ ಥಲಾ’ ಅಂತಲೇ ಹೆಸರುವಾಸಿಯಾಗಿರುವ ಸುರೇಶ್ ರೈನಾ ಅವರು ಧೋನಿ ಅವರು ಮುಂದಿನ ಆವೃತ್ತಿಯಲ್ಲಿ ಆಡುತ್ತಾರಾ? ಇಲ್ಲವಾ ಎಂಬ ಬಗ್ಗೆ ಮಾತಾಡಿದ್ದಾರೆ.
ಧೋನಿಗೆ ಮುಂದಿನ ವರ್ಷ ಮತ್ತೆ ಆಡಬೇಕು ಎಂದು ಕೇಳಿದೆ. ಆದರೆ, ಅವರು ನನ್ನ ದೇಹ ಸ್ವಲ್ಪ ದಣಿದಿದೆ ಎನಿಸುತ್ತಿದೆ ಎಂದು ಹೇಳಿದರು. ಆದರೆ, ನೀವು ಮುಂದಿನ ವರ್ಷವೂ ಆಡಲೇಬೇಕು ಒತ್ತಾಯಿಸಿದ್ದೇನೆ. ಅಂತಿಮ ನಿರ್ಧಾರ ತೆಗೆದುಕೊಳ್ಳುವವರು ಅವರೇ ಆಗಿರುತ್ತಾರೆ. ಅವರು ಮುಂದಿನ ವರ್ಷ ಆಡಲು ತಯಾರಿದ್ದಾರೆ ಎಂಬುದು ನನ್ನ ಅನಿಸಿಕೆ ಎಂದಿದ್ದಾರೆ.

