ಮುಂಬೈ: ಮಹಾರಾಷ್ಟ್ರದ ನಸ್ರಾಪುರ ಗ್ರಾಮದಲ್ಲಿ ಮೂರುವರೆ ವರ್ಷದ ಮಗುವನ್ನು ಅತ್ಯಾಚಾರಗೈದು, ಹತ್ಯೆ ಮಾಡಿದ್ದ 65 ವರ್ಷದ ಅಪರಾಧಿಗೆ ಪುಣೆಯ ವಿಶೇಷ ನ್ಯಾಯಾಲಯ (Pune Special Court) ಮರಣದಂಡನೆ ವಿಧಿಸಿದೆ.
ಭೀಮರಾವ್ ಕಾಂಬ್ಳೆ (65) ಶಿಕ್ಷೆಗೆ ಗುರಿಯಾದ ಅಪರಾಧಿ. ಈತ ಮೂರುವರೆ ವರ್ಷದ ಬಾಲಕಿಯನ್ನು ಅಪಹರಿಸಿ, ಕ್ರೂರವಾಗಿ ಅತ್ಯಾಚಾರ ಎಸಗಿ ಕೊಲೆಗೈದಿದ್ದ. ಈ ಪ್ರಕರಣ ಸಾರ್ವಜನಿಕರ ಆಕ್ರೋಶ ಮತ್ತು ಪ್ರತಿಭಟನೆಗಳಿಗೆ ಕಾರಣವಾಗಿತ್ತು. ಇದನ್ನೂ ಓದಿ: 33 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ – ಯುಪಿ ದಂಪತಿಗೆ ಮರಣದಂಡನೆ
ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ನ್ಯಾಯಾಧೀಶ (ವಿಶೇಷ ನ್ಯಾಯಾಧೀಶ) ಎಸ್.ಆರ್. ಸಲುಂಖೆ ಅವರಿದ್ದ ಪೀಠ ಈ ಪ್ರಕರಣವನ್ನು ʻಅಪರೂಪದಲ್ಲಿ ಅಪರೂಪʼ ಎಂದು ಕರೆದಿದೆ. ಬಳಿಕ ಅಪರಾಧಿಗೆ ಮರಣದಂಡನೆ ವಿಧಿಸಿ ತೀರ್ಪು ನೀಡಿದೆ. ತೀರ್ಪಿನಲ್ಲಿ ಈ ಅಪರಾಧವನ್ನು ಘೋರ ಕೃತ್ಯ ಎಂದು ಉಲ್ಲೇಖಿಸಲಾಗಿದೆ.
ಅಪರಾಧದ ಗಂಭೀರತೆ ಮತ್ತು ಉದ್ದೇಶ ಮರಣದಂಡನೆಯನ್ನು ವಿಧಿಸಲು ಸೂಕ್ತ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅಪರಾಧಿ ಭೀಮರಾವ್ ಕಾಂಬ್ಳೆ ಮೇ 1 ರಂದು ಮಗುವಿನ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದಿದ್ದ. ಈ ಪ್ರಕರಣವನ್ನು ತ್ವರಿತ ನ್ಯಾಯಾಲಯ ವಿಚಾರಣೆ ನಡೆಸಿತ್ತು. ಜೂನ್ 25 ರಂದು, ಪುಣೆ ನ್ಯಾಯಾಲಯವು ಕಾಂಬ್ಳೆ ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು. ಇದನ್ನೂ ಓದಿ: ತಂದೆ ಮಗನ ಲಾಕಪ್ ಡೆತ್ ಕೇಸ್ – ತಮಿಳುನಾಡಿನ 9 ಪೊಲೀಸರಿಗೆ ಮರಣದಂಡನೆ
