ಬಿಗ್ ಮನೆಯಲ್ಲಿ ದಿನದಿಂದ ದಿನಕ್ಕೆ ಮನೆಯ ರಂಗು ಹೆಚ್ಚುತ್ತಿದೆ. ಹಾಗೆಯೇ ಸ್ಪರ್ಧಿಗಳ ಮಧ್ಯೆ ಜಟಾಪಟಿ ಕೂಡ ಸೌಂಡ್ ಮಾಡುತ್ತಿದೆ. ಎರಡನೇ ವಾರಕ್ಕೆ ಕಾಲಿಟ್ಟಿರುವ ದೊಡ್ಮನೆಯ ಕಾಳಗದಲ್ಲಿ ಒಂದಲ್ಲಾ ಒಂದು ವಿಚಾರವಾಗಿ ಸ್ಪರ್ಧಿಗಳು ಸದ್ದು ಮಾಡ್ತಿದ್ದಾರೆ. ಇನ್ನು ಮಿಡ್ನೈಟ್ನಲ್ಲಿ ಸೋನು ಶ್ರೀನಿವಾಸ್ ಗೌಡಗೆ ರಾಕೇಶ್ ಅಡಿಗ ಕ್ಲಾಸ್ ತೆಗೆದುಕೊಂಡಿದ್ದಾರೆ.
Advertisement
ಎರಡನೇ ವಾರದಲ್ಲಿ ಮೊದಲ ದಿನವೇ ನಾಮಿನೇಷನ್ ಆಗಿರುವ ಸೋನು ಗೌಡಗೆ ಮಿಡ್ನೈಟ್ನಲ್ಲಿ ರಾಕೇಶ್ ಅಡಿಗ ಕ್ಲಾಸ್ ತೆಗೆದುಕೊಂಡಿದ್ದಾರೆ. ಸೋನು ಮಾತು, ವರ್ತನೆ ನೋಡಿ ಸೋನುಗೆ ರಾಕೇಶ್ ತರಾಟೆಗೆ ತೆಗೆದುಕೊಂಡಿದ್ದಾರೆ. ನಿನ್ನೆಯ ಎಪಿಸೋಡ್ನಲ್ಲಿ (ಆಗಸ್ಟ್ 15) ಮಧ್ಯರಾತ್ರಿ 2.15 ಈ ಸಮಯದಲ್ಲಿ ಚೈತ್ರಾ ಹಳ್ಳಿಕೇರಿ, ಜಯಶ್ರೀ ಆರಾಧ್ಯ ಜೊತೆ ಸೋನು ಗೌಡ ಮಾತನಾಡುತ್ತಿದ್ದರು. ಈ ವೇಳೆ ಸೋನು ಅವರನ್ನು ಮಾತನಾಡಿಸಲು ರಾಕೇಶ್ ಅಡಿಗ ಬಂದರು. ನೀನು ದಯವಿಟ್ಟು ಹೋಗಬೇಕು ಅಂತ ವಿನಂತಿ. ನನ್ನ ಮತ್ತು ನಿನ್ನ ವಿಷಯವನ್ನು ಬೇರೆಯವರ ಮುಂದೆ ಜಡ್ಜ್ ಮಾಡಬೇಡ. ನನಗೆ ಇಷ್ಟ ಆಗಲ್ಲ ಹೋಗು ಎಂದು ಸೋನು ಗೌಡ ರಾಕೇಶ್ಗೆ ಬೈಯ್ದು ಕಳಿಸಿದರು. ಇದನ್ನೂ ಓದಿ:Bigg Boss: ಗರ್ಲ್ಫ್ರೆಂಡ್ ವಿಚಾರಕ್ಕೆ ಬಂದ ಸೋನು ಶ್ರೀನಿವಾಸ್ ಗೌಡ ವಿರುದ್ಧ ಕಿಡಿಕಾರಿದ ಜಶ್ವಂತ್
Advertisement
Advertisement
ಸೋನು ಗೌಡ ಸಿಟ್ಟಾಗಿದ್ದು ಕಂಡು ರಾಕೇಶ್ ಅಡಿಗ ಕೂಲ್ ಆಗಿ ಪ್ರತಿಕ್ರಿಯಿಸಿದರು. ನನ್ನ ವಿಷಯ ಬಿಡು. ಇನ್ಮೇಲೆ ಚೈತ್ರಾ ಅವರಿಗೆ ಹೋಗೆ ಬಾರೆ ಅಂತ ಕರೆಯಬೇಡ ಎಂದು ಬುದ್ಧಿ ಮಾತು ಹೇಳಿ ರಾಕೇಶ್ ಜಾಗ ಖಾಲಿ ಮಾಡಿದರು. ಯಾರು ಎಷ್ಟೇ ಬುದ್ಧಿ ಹೇಳಿದರೂ ಅದನ್ನು ಸೋನು ಶ್ರೀನಿವಾಸ್ ಗೌಡ ಕೇಳುತ್ತಿಲ್ಲ. ಪದೇ ಪದೇ ಹೇಳಬೇಡಿ. ನನಗೆ ಮರೆತು ಹೋಗುತ್ತದೆ ಎಂದು ಸೋನು ಪ್ರತಿಯುತ್ತರ ನೀಡಿದ್ದಾರೆ. ಮೊದಲ ವಾರದ ಕಿಚ್ಚನ ಪಂಚಾಯಿತಿಯಲ್ಲಿ ಕಿಚ್ಚನ ಎದುರು ಸೋನು ವಾದ ಮಾಡಿದ್ದರು. ಕಿಚ್ಚನ ಮುಂದೆ ಜಂಬ ತೋರಿದ್ದ ಸೋನುಗೆ ನಗು ಮುಖದಲ್ಲೇ ಸುದೀಪ್ ವಾರ್ನಿಂಗ್ ಕೊಟ್ಟಿದ್ದರು.