Connect with us

Cinema

ಸೋನು ಸೂದ್ ಮೊಬೈಲ್‍ಗೆ ನಿರಂತರ ನೋಟಿಫಿಕೇಶನ್ಸ್ – ವೀಡಿಯೋ ವೈರಲ್

Published

on

ಮುಂಬೈ: ಬಾಲಿವುಡ್ ನಟ ಸೋನು ಸೂದ್ ಸಾವಿರಾರು ಮಂದಿಗೆ ಜನರಿಗೆ ಬೆಡ್, ಆಕ್ಸಿಜನ್ ಮತ್ತು ಮೆಡಿಸನ್‍ಗಳನ್ನು ಒದಗಿಸುವ ಮೂಲಕ ಸಹಾಯ ಮಾಡುತ್ತಿದ್ದಾರೆ. ಸದ್ಯ ಸೋನು ಸೂದ್ ತಮ್ಮ ಫೋನ್‍ನ ಸ್ಕ್ರೀನ್ ವೀಡಿಯೋವನ್ನು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವೀಡಿಯೋದಲ್ಲಿ ಅನೇಕ ಜನರು ಸೋನು ಸೂದ್‍ರವರಿಗೆ ಸಹಾಯ ಕೋರಿ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಮೆಸೇಜ್ ಬರುತ್ತಿದ್ದಂತೆಯೇ ಫೋನ್‍ನ ರಿಂಗ್ ಕೊಂಚವು ಬಿಡುವಿಲ್ಲದಂತೆ ಬಡಿದುಕೊಳ್ಳುವುದನ್ನು ಕಾಣಬಹುದಾಗಿದೆ.

ಸದ್ಯ ಈ ವೀಡಿಯೋವನ್ನು ಸೋನು ಸೂದ್, ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ನಾವು ವೇಗವಾಗಿ ದೇಶಾದ್ಯಂತ ಮನವಿಗಳನ್ನು ಪಡೆಯುತ್ತಿದ್ದೇವೆ. ನಾನು ಪ್ರತಿಯೊಬ್ಬರನ್ನು ತಲುಪಲು ಪ್ರಯತ್ನಿಸುತ್ತಿದ್ದೇನೆ. ಎಲ್ಲರೂ ದಯವಿಟ್ಟು ಮುಂದೆ ಬನ್ನಿ. ನಮಗೆ ಹೆಚ್ಚು ಸಹಾಯ ಹಸ್ತ ಬೇಕು. ನಿಮ್ಮ ಸಾಮಥ್ರ್ಯಕ್ಕೆ ತಕ್ಕಂತೆ ನಿಮ್ಮ ಕೈಲಾದಷ್ಟು ಸಹಾಯಮಾಡಿ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.

 

View this post on Instagram

 

A post shared by Sonu Sood (@sonu_sood)

ಇದೀಗ ಕಾಮೆಂಟ್ ಸೆಕ್ಷನ್‍ನಲ್ಲಿ ಸಾವಿರಾರು ಜನರು ಸೋನು ಸೂದ್ ಕ್ಯಾಪ್ಷನ್‍ಗೆ ಪ್ರತಿಕ್ರಿಯಿಸಿದ್ದು, ಅನೇಕ ಮಂದಿ ಸಹಾಯ ಮಾಡುವ ಇಚ್ಛೆಯನ್ನು ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *