-ಆಂಟಿ ಪದ ಕೇಳಿದ ಕೇಂದ್ರ ಸಚಿವೆ ಪ್ರತಿಕ್ರಿಯೆ ಹೀಗಿತ್ತು
ನವದೆಹಲಿ: ಬಾಲಿವುಡ್ ನಟಿ ಶ್ರೀದೇವಿ ಪುತ್ರಿ ತಮ್ಮನ್ನ ಆಂಟಿ ಎಂದು ಕರೆದ ಸಂದರ್ಭದಲ್ಲಿ ನನಗೆ ಯಾರಾದ್ರು ಶೂಟ್ ಮಾಡಬಾರದಾ ಎಂದು ಅನಿಸಿತ್ತು ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.
ಈ ಕುರಿತು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಸ್ಮೃತಿ ಇರಾನಿ ಅವರು, ಜಾಹ್ನವಿ ಕಪೂರ್ ಪದೇ ಪದೇ ತಮ್ಮನ್ನು ಆಂಟಿ ಎಂದು ಕರೆದಿದ್ದರು, ಬಳಿಕ ಈ ಬಗ್ಗೆ ಕ್ಷಮೆ ಕೇಳಿದ್ದರು. ಜಾಹ್ನವಿ ಅಂಟಿ ಎಂದ ಸಂದರ್ಭದ ನನಗೆ ಯಾರದ್ರು ಶೂಟ್ ಮಾಡಬಾರದ ಎಂದೆನಿಸಿತ್ತು ಎಂದು ಬರೆದುಕೊಂಡಿದ್ದಾರೆ.
Advertisement
https://www.instagram.com/p/Br390f1Agma/
Advertisement
ಸ್ಮೃತಿ ಇರಾನಿ ಅವರ ಈ ವಿಡಿಯೋಗೆ ಹಲವರು ಪ್ರತಿಕ್ರಿಯೆ ನೀಡಿದ್ದು, ನಿಮಗೆ ಅದ್ಭುತ ಹಾಸ್ಯ ಪ್ರಜ್ಞೆ ಇದೆ ಎಂದು ತಿಳಿಸಿದ್ದಾರೆ. ಮತ್ತೆ ಕೆಲವರು ಮುಂದೇ ಆಗುತ್ತೆ ಬಿಡಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Advertisement
ಈ ಹಿಂದೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಾಸ್ಯಾತ್ಮಕವಾಗಿ ಪೋಸ್ಟ್ ಮಾಡುವ ಮೂಲಕ ಗಮನ ಸೆಳೆದಿದ್ದ ಸ್ಮೃತಿ ಇರಾನಿ ಅವರು, ಬಾಲಿವುಡ್ನ ಖ್ಯಾತ ಜೋಡಿಯಾದ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಅದ್ಧೂರಿಯಾಗಿ ವಿವಾಹ ಫೋಟೋ ಬಹಿರಂಗವಾಗದ ಕುರಿತು ಪೋಸ್ಟ್ ಮಾಡಿದ್ದರು. ಮನುಷ್ಯನ ಅಸ್ಥಿ ಪಂಜರದ ಫೋಟೋ ಪೋಸ್ಟ್ ಮಾಡಿದ್ದ ಇರಾನಿ ಅವರು, ನವಜೋಡಿಯ ಮದುವೆ ಫೋಟೋ ನೋಡಲು ಜಾತಕ ಪಕ್ಷಿಯಂತೆ ಕಾದು ಕುಳಿತಿರುವೆ ಎಂದು ಬರೆದುಕೊಂಡಿದ್ದರು.
Advertisement
https://www.instagram.com/p/BqKsPELAi_3/
https://www.instagram.com/p/BpJj7uSHPmG/
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv