ಬೀಜಿಂಗ್: ದೇಶೀಯವಾಗಿ ತಯಾರಿಸಲಾದ B-12PP ಮಾದರಿಯ ಸಣ್ಣ ವಿಮಾನವು ಬೀಜಿಂಗ್‌ನ (Beijing) ಅತೀ ಎತ್ತರದ ಸಿಟಿಕ್ ಟವರ್‌ಗೆ (CITIC Tower) ಡಿಕ್ಕಿ ಹೊಡೆದಿದೆ. ಪರಿಣಾಮ ವಿಮಾನವು ತುಂಡುಗಳಾಗಿ ನೆಲಕ್ಕೆ ಬೀಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆದ ದೃಶ್ಯಗಳ ಪ್ರಕಾರ, ವಿಮಾನವು ಬೀಜಿಂಗ್‌ನಲ್ಲಿರುವ ಚೀನಾದ (China) ಪ್ರಸಿದ್ಧ 1,700 ಅಡಿ ಎತ್ತರದ 109 ಮಹಡಿಗಳ ಗಗನಚುಂಬಿ ಕಟ್ಟಡವಾದ `ಸಿಟಿಕ್ ಟವರ್’ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಟ್ಟಡದ ಎರಡು ಕಿಟಕಿಗೆ ಹಾನಿಯಾಗಿದೆ. ಅಲ್ಲದೇ ಪತನಗೊಂಡ ವಿಮಾನದ ತುಂಡುಗಳು ನೆಲಕ್ಕೆ ಬಿದ್ದ ಪರಿಣಾಮ ಕಾರಿನ ಗಾಜು ಒಡೆದಿರುವುದು ಕಂಡುಬಂದಿದೆ. ಇದನ್ನೂ ಓದಿ: ಏರ್ ಇಂಡಿಯಾ ಕನಿಷ್ಕ ಬಾಂಬ್ ಸ್ಫೋಟ| 40 ವರ್ಷಗಳ ಬಳಿಕ ಖಲಿಸ್ತಾನಿ ಉಗ್ರರ ಕೈವಾಡ ಒಪ್ಪಿಕೊಂಡ ಕೆನಡಾ
A Sunward SA 60L Aurora light aircraft (B-12PP) crashed in Beijing. Footage from the scene indicate the aircraft had hit the China Zun CITIC Tower, a 109-story, 528-metre (1,732 ft) building.pic.twitter.com/hOsx8RchyQ
— Aviation Safety Network (ASN) (@AviationSafety) June 26, 2026
ಚೀನಾದ ಅತ್ಯಂತ ಯಶಸ್ವಿ ದೇಶೀಯ ನಿರ್ಮಿತ B-12PP ಮಾದರಿಯ ಸಣ್ಣ ವಿಮಾನದ ರೆಕ್ಕೆಯು ಕಟ್ಟಡದ ಪಕ್ಕದಲ್ಲಿ ಬಿದ್ದಿರುವುದು ಕಂಡುಬಂದಿದೆ. ಸದ್ಯಕ್ಕೆ ಕಟ್ಟಡದಲ್ಲಿದ್ದ ಜನರನ್ನು ಸುರಕ್ಷಿತವಾಗಿ ಹೊರತರಲಾಗಿದ್ದು, ಸಾವು-ನೋವುಗಳ ನಿಖರ ಸಂಖ್ಯೆ ಇನ್ನು ತಿಳಿದುಬಂದಿಲ್ಲ.
ವಿಮಾನ ಡಿಕ್ಕಿಯಾದ `ಸಿಟಿಕ್ ಟವರ್’ ಚಾವೊಯಾಂಗ್ (Chaoyang) ಜಿಲ್ಲೆಯ ಕೇಂದ್ರ ವಾಣಿಜ್ಯ ಪ್ರದೇಶದಲ್ಲಿದೆ. ಶಾಂಘೈ ಟವರ್ ಮತ್ತು ಪಿಂಗ್ ಆನ್ ಫೈನಾನ್ಸ್ ಸೆಂಟರ್ ನಂತರ ಇದು ಚೀನಾದಲ್ಲೇ ಮೂರನೇ ಅತಿ ಎತ್ತರದ ಗೋಪುರವಾಗಿದೆ.ಇದನ್ನೂ ಓದಿ: ನಾಲ್ಕು ಬಾರಿಯ ಚಾಂಪಿಯನ್ ಜರ್ಮನಿ ವಿರುದ್ಧ 2-1 ಅಂತರದ ಜಯ – ಈಕ್ವೆಡಾರ್ ದೇಶದಲ್ಲಿ ರಜೆ ಘೋಷಣೆ
