ಬೆಂಗಳೂರು: IOCL (Indian Oil Corporation Ltd) ದೇವನಗೊಂದಿ ಟರ್ಮಿನಲ್ನಲ್ಲಿ ಪೆಟ್ರೋಲ್ಗೆ ನಿಗದಿತ 20% ಗಿಂತ ಹೆಚ್ಚಿನ ಎಥೆನಾಲ್ ಬೆರೆಸುತ್ತಿರುವುದು ಬೆಳಕಿಗೆ ಬಂದ ಬೆನ್ನಲ್ಲೇ ರಾಜ್ಯ ಸರ್ಕಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಕಾನೂನು ಮಾಪನಶಾಸ್ತ್ರ ಇಲಾಖೆಯು ಎಥೆನಾಲ್ ಬೆರೆಕೆ ನಡೆಯುವ ಒಎಂಸಿ ಟರ್ಮಿನಲ್ಗಳ ತಪಾಸಣೆ ನಡೆಸಿತ್ತು. ಈ ವೇಳೆ, ಬೆಂಗಳೂರಿನ ದೇವನಗೊಂದಿ ಐಒಸಿಎಲ್ ಟರ್ಮಿನಲ್ನಲ್ಲಿ ಪ್ರತಿ 3,000 ಲೀಟರ್ಗೆ 14 ಲೀಟರ್ ಎಥೆನಾಲ್ ಹೆಚ್ಚುವರಿಯಾಗಿ ಹೋಗುತ್ತಿರುವುದು ಹಾಗೂ 4 ರಿಂದ 6 ಲೀಟರ್ ಪೆಟ್ರೋಲ್ ಕಡಿಮೆ ಹೋಗುತ್ತಿರುವುದು ಪತ್ತೆಯಾಗಿದೆ. ಈ ಸಂಬಂಧ ಕಾನೂನು ಮಾಪನಶಾಸ್ತ್ರ ಕಾಯ್ದೆ 2009ರ ಅಡಿಯಲ್ಲಿ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಈ ಬಗ್ಗೆ ಸಚಿವ ರಿಜ್ವಾನ್ ಅರ್ಷದ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಎಥೆನಾಲ್ ಉತ್ಪಾದನೆ ಹೇಗಾಗುತ್ತೆ? – E20 ಪೆಟ್ರೋಲ್ ಬಳಸೋದ್ರಿಂದ ಎಂಜಿನ್ ಹಾಳಾಗುತ್ತದೆಯೇ? ಇಲ್ಲಿದೆ ಉತ್ತರ…
After the Karnataka Government exposed over-blending of ethanol in petrol beyond the prescribed E20 limit, our Legal Metrology Department has begun inspecting Oil Marketing Company (OMC) terminals, where the blending is carried out.
At the IOCL Terminal, Devanagonthi, mass flow meters tested against a verified proving measure showed excess delivery of 14 litres of ethanol for every 3,000 litres, while motor gasoline was short-delivered by 4–6 litres. Both are beyond permissible limits. A show-cause notice has been issued under the Legal Metrology Act, 2009.
#EthanolBlending #OMC #noticed #IOCLTerminal #E20
— Rizwan Arshad (@ArshadRizwan) November 27, 2026
ಸರ್ಕಾರದ ಪರಿಶೀಲಿತ ಮಾಪಕದೊಂದಿಗೆ ಪರಿಶೀಲನೆಗೆ ಮಾಡಿದಾಗ ಅಕ್ರಮ ಸಾಬೀತಾಗಿದೆ ಎಂದು ಆರೋಪಿಸಲಾಗಿದೆ. 7 ದಿನದೊಳಗೆ ಸಂಬಂಧಪಟ್ಟ ದಾಖಲೆಗಳನ್ನು ಒದಗಿಸುವಂತೆ ಮೈಸೂರು ಹಾಗೂ ಬೆಂಗಳೂರು ವಿಭಾಗದ ಕಾನೂನು ಮಾಪನ ಶಾಸ್ತ್ರ ಇಲಾಖೆ ನೋಟಿಸ್ ಜಾರಿ ಮಾಡಿದೆ. ಇದನ್ನೂ ಓದಿ: ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಹುನ್ನಾರ – ಮಾಧ್ಯಮಗಳ ಸಮ್ಮುಖದಲ್ಲೇ ಎಥೆನಾಲ್ ಪರೀಕ್ಷೆ ನಡೆಯಲಿ: ನಿರಾಣಿ ಸವಾಲು
