ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಉದ್ದೇಶಿತ ಕ್ಷೇತ್ರ ಪುನರ್ವಿಂಗಡಣೆ (Delimitation) ಮಸೂದೆಗೆ ಬೆಂಬಲ ನೀಡಲು ಡಿಎಂಕೆ (DMK) ಎರಡು ಷರತ್ತು ವಿಧಿಸಿದೆ ಎಂದು ಮೂಲಗಳು ತಿಳಿಸಿವೆ.
ಕ್ಷೇತ್ರ ಪುನರ್ವಿಂಗಡಣೆಯ ಮೇಲಿನ ತಡೆಯನ್ನು (Freeze) ಇನ್ನೂ 25 ವರ್ಷಗಳ ಕಾಲ ಮುಂದುವರಿಸುವುದು. ಎಲ್ಲಾ ರಾಜ್ಯಗಳ ಪ್ರಾತಿನಿಧ್ಯದ ಪ್ರಮಾಣದಲ್ಲಿ ಯಾವುದೇ ಬದಲಾವಣೆಯಾಗದಂತೆ, ದೇಶಾದ್ಯಂತ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಏಕರೂಪವಾಗಿ ಶೇ.50 ರಷ್ಟು ಹೆಚ್ಚಿಸಬೇಕೆಂಬ ಷರತ್ತನ್ನು ಮುಂದಿಟ್ಟಿದೆ.
2027ರ ಜನಗಣತಿಗೆ ಕಾಯದೆ 2011ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ಮಾಡಲು ಸರ್ಕಾರ ಮುಂದಾಗಿದೆ. ರಾಜ್ಯಗಳ ನಡುವಿನ ಸಮತೋಲನ ಕಾಪಾಡಲು ಪ್ರತಿ ರಾಜ್ಯದ ಸ್ಥಾನಗಳನ್ನು ಒಂದೇ ಸಮನಾಗಿ ಶೇ. 50ರಷ್ಟು ಹೆಚ್ಚಿಸಲಾಗುವುದು ಎಂದು ಸರ್ಕಾರ ಈ ಹಿಂದೆ ಮೌಖಿಕವಾಗಿ ಭರವಸೆ ನೀಡಿತ್ತು. ಆದರೆ ಕಳೆದ ಬಾರಿಯ ಮಸೂದೆಯ ಕರಡಿನಲ್ಲಿ ಈ ಅಂಶ ಇರಲಿಲ್ಲ. ಈ ಕಾರಣಕ್ಕೆ ಡಿಎಂಕೆ ಮಸೂದೆಯನ್ನು ವಿರೋಧಿಸಿತ್ತು.
ಮಸೂದೆ ಸಂಬಂಧ ತಮಿಳುನಾಡು ಮಾಜಿ ಸಿಎಂ ಸ್ಟಾಲಿನ್ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪೋಸ್ಟ್ ಪ್ರಕಟಿಸಿ ತಮ್ಮ ಪಕ್ಷದ ನಿಲುವು ಪ್ರಕಟಿಸಿದ್ದಾರೆ.
ಕ್ಷೇತ್ರ ಪುನರ್ವಿಂಗಡಣೆಯಿಂದ ಉಂಟಾಗಬಹುದಾದ ದುಷ್ಪರಿಣಾಮಗಳ ವಿರುದ್ಧ ದೇಶದಲ್ಲೇ ಮೊದಲ ಬಾರಿಗೆ ಧ್ವನಿ ಎತ್ತಿದ್ದು ಡಿಎಂಕೆ.. ಅಷ್ಟೇ ಅಲ್ಲ, ನ್ಯಾಯಯುತ ಕ್ಷೇತ್ರ ಪುನರ್ವಿಂಗಡಣೆಗೆ ಆಗ್ರಹಿಸಿ ರಾಷ್ಟ್ರೀಯ ನಾಯಕರನ್ನು ಒಂದೇ ವೇದಿಕೆಗೆ ತಂದು ಮೊದಲ ಸಭೆ ನಡೆಸಿದ್ದು ಕೂಡ ಚೆನ್ನೈನಲ್ಲೇ ಎಂದು ಪಕ್ಷವು ಸ್ಪಷ್ಟಪಡಿಸಿದೆ.
ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸಿದರೆ, ಯಾವುದೇ ಕಾರಣಕ್ಕೂ ತಮಿಳುನಾಡಿನ ಪ್ರಸ್ತುತ ಸ್ಥಾನಗಳ ಪಾಲು ಶೇ. 7.18 ಕ್ಕಿಂತ ಕಡಿಮೆಯಾಗಬಾರದು. 1971 ರ ಜನಗಣತಿಯ ಆಧಾರದ ಮೇಲೆ ನಿಗದಿಪಡಿಸಲಾದ ಮತ್ತು ಈ ಹಿಂದೆ ತಡೆಹಿಡಿಯಲಾಗಿದ್ದ (Frozen) ರಾಜ್ಯಗಳ ನಡುವಿನ ಸಂಸದೀಯ ಪ್ರಾತಿನಿಧ್ಯದ ಪ್ರಮಾಣವನ್ನು ಮುಂದಿನ 25 ವರ್ಷಗಳ ಕಾಲ ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು ಎಂದು ಹೇಳಿದ್ದಾರೆ.
ಈ ಎರಡೂ ನಿಲುವುಗಳಿಗೆ ಡಿಎಂಕೆ ಇಂದಿಗೂ ಬದ್ಧವಾಗಿದೆ ಮತ್ತು ಮುಂದೆಯೂ ಬದ್ಧವಾಗಿರುತ್ತದೆ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಹಾಗೂ ಇಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ ಎಂದು ಪಕ್ಷವು ಕಡ್ಡಿ ಮುರಿದಂತೆ ತಿಳಿಸಿದ್ದಾರೆ.
தொகுதி மறுவரையறையால் ஏற்படக்கூடிய பாதிப்புகள் குறித்து இந்தியாவிலேயே முதன் முதலில் குரல் எழுப்பியது தி.மு.க.தான்!
நியாயமான மறுவரையறை என்ற கோரிக்கையுடன் அகில இந்தியத் தலைவர்களை ஒன்றிணைத்து முதன் முதலில் கூட்டம் நடத்தப்பட்டதும், சென்னையில்தான்.
தமிழ்நாடு சட்டமன்றத்தில் நிறைவேற்றிய தீர்மானத்தின்படியும், நியாயமான தொகுதி மறுவரையறைக்கான கூட்டு நடவடிக்கைக் குழுக் கூட்டத்தில் நிறைவேற்றிய தீர்மானங்களின்படியும், நாம் முன்வைத்த உறுதியான கோரிக்கைகள்:
• நாடாளுமன்றத் தொகுதிகளின் எண்ணிக்கை உயர்த்தப்பட்டால், எக்காரணத்தைக் கொண்டும், தமிழ்நாட்டின் பங்கு தற்போதுள்ள 7.18%-ல் இருந்து குறையக் கூடாது!
• 1971 மக்கள்தொகை அடிப்படையில், மாநிலங்களுக்கு இடையேயான நாடாளுமன்றப் பிரதிநிதித்துவ விகிதாசாரத்தின் அடிப்படையில் நிர்ணயிக்கப்பட்டு, முன்னர் நிலைப்படுத்தப்பட்டவாறே, அடுத்த 25 ஆண்டுகளுக்கும் எந்தவித மாற்றமும் செய்யப்படக் கூடாது!
எடுத்த இந்த இரண்டு நிலைப்பாட்டிலும் தி.மு.க. இன்றும் என்றும் உறுதியாக இருக்கிறது. இந்த நிலைப்பாட்டில் எந்த மாற்றமும் இல்லை, சமரசம் என்ற பேச்சுக்கே இடமில்லை!
ஊடகங்களில் பரப்பப்படும் ஊகங்களும், முதுகுகுத்திகளின் முணுமுணுப்புகளும் எங்களது இந்த நிலைப்பாட்டை எந்த விதத்திலும் அசைத்துப் பார்க்காது.
பதவிக்காகக் கொள்கையை உதறிவிட்டுச் செல்லும் மானமற்ற, நன்றிகெட்ட கூட்டத்தினர் இதனை உணர வேண்டும்.
தமிழ்நாட்டின் நலனைக் கழகம் ஒருபோதும் விட்டுக்கொடுக்காது. கொண்ட கொள்கையில் இருந்து தடம் மாறாது!
The DMK was the first in India to raise its voice against the dangers of delimitation!
It was only in Chennai that political leaders from across the country came together for the first time to demand fair delimitation.
In keeping with the resolution passed by the Tamil Nadu Legislative Assembly and the resolutions adopted at the Joint Action Committee meeting for #FairDelimitation, we put forth two categorical demands:
• If the number of parliamentary constituencies is increased, under no circumstances should Tamil Nadu’s existing 7.18% share of seats in the lower house be reduced!
• The existing proportion of parliamentary representation among States, as determined on the basis of the 1971 Census and frozen earlier, must remain frozen for another 25 years!
The DMK stands firm on these two demands and will continue to do so. There is no change in our position, and there is no question of any compromise!
Neither the speculations being circulated in the media nor the wails of backstabbers can shake our resolve.
The shameless and ungrateful lot who abandoned their principles for positions of power must realise this.
The DMK will never compromise on Tamil Nadu’s interests. Nor will it depart from its principles!
— M.K.Stalin (@mkstalin) November 27, 2026
ಮಾಧ್ಯಮಗಳಲ್ಲಿ ಹರಡುತ್ತಿರುವ ಊಹಾಪೋಹಗಳು ಮತ್ತು ಬೆನ್ನಿಗೆ ಚೂರಿ ಹಾಕುವವರ ಗೊಣಗಾಟಗಳು ನಮ್ಮ ನಿಲುವನ್ನು ಯಾವುದೇ ರೀತಿಯಲ್ಲೂ ಅಲುಗಾಡಿಸಲು ಸಾಧ್ಯವಿಲ್ಲ. ಅಧಿಕಾರದ ಆಸೆಗಾಗಿ ತಮ್ಮ ಸಿದ್ಧಾಂತಗಳನ್ನು ಗಾಳಿಗೆ ತೂರಿದ ನಾಚಿಕೆಯಿಲ್ಲದ, ಕೃತಘ್ನ ಗುಂಪು ಈ ಸತ್ಯವನ್ನು ಅರ್ಥಮಾಡಿಕೊಳ್ಳಬೇಕು. ತಮಿಳುನಾಡಿನ ಹಿತಾಸಕ್ತಿಯ ವಿಷಯದಲ್ಲಿ ಡಿಎಂಕೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಮತ್ತು ತನ್ನ ಸಿದ್ಧಾಂತಗಳಿಂದ ವಿಮುಖವಾಗುವುದಿಲ್ಲ ಎಂದು ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಏಪ್ರಿಲ್ನಲ್ಲಿ ಏನಾಗಿತ್ತು?
ಕಳೆದ ಏಪ್ರಿಲ್ನಲ್ಲಿ ನಡೆದ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ನೀಡುವ ಮಸೂದೆಯೊಂದಿಗೆ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನೂ ಜಾರಿಗೆ ತರಲು ಕೇಂದ್ರ ಸರ್ಕಾರ ಪ್ರಯತ್ನಿಸಿತ್ತು.
ಲೋಕಸಭೆ ಮತ್ತು ವಿಧಾನಸಭೆಗಳ ಸ್ಥಾನ ಬಲವನ್ನು ಹೆಚ್ಚಿಸಲು ಸರ್ಕಾರವು ‘ಸಂವಿಧಾನ (131ನೇ ತಿದ್ದುಪಡಿ) ಮಸೂದೆ, 2026’ ಅನ್ನು ಮಂಡಿಸಿತ್ತು. ಆದರೆ, ಏಪ್ರಿಲ್ 17 ರಂದು ನಡೆದ ಮತದಾನದಲ್ಲಿ ಮಸೂದೆಯ ಪರವಾಗಿ 298 ಮತ್ತು ವಿರುದ್ಧವಾಗಿ 230 ಮತಗಳು ಬಿದ್ದವು. ಮೂರನೇ ಎರಡರಷ್ಟು ಬಹುಮತ ಸಿಗದ ಕಾರಣ ಮಸೂದೆ ಸೋಲು ಕಂಡಿತು. ಹೀಗಾಗಿ ಸರ್ಕಾರವು ಇದಕ್ಕೆ ಸಂಬಂಧಿಸಿದ ಉಳಿದ ಎರಡು ಮಸೂದೆಗಳನ್ನು ಮುಂದುವರಿಸಲಿಲ್ಲ.
ಜನಸಂಖ್ಯಾ ನಿಯಂತ್ರಣವನ್ನು ಯಶಸ್ವಿಯಾಗಿ ಜಾರಿಗೆ ತಂದಿರುವ ದಕ್ಷಿಣದ ರಾಜ್ಯಗಳಿಗೆ, ಜನಸಂಖ್ಯೆ ಆಧಾರಿತ ಪುನರ್ವಿಂಗಡಣೆಯಿಂದ ಅನ್ಯಾಯವಾಗುತ್ತದೆ ಎಂದು ಡಿಎಂಕೆ ವಿರೋಧಿಸಿತ್ತು. ಚರ್ಚೆಯ ವೇಳೆ ಮಾತನಾಡಿದ್ದ ಸಂಸದೆ ಕನಿಮೊಳಿ, “ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯಕ್ಕೆ ಧಕ್ಕೆಯಾಗುವುದಿಲ್ಲ ಎಂಬ ಗೃಹ ಸಚಿವ ಅಮಿತ್ ಶಾ ಅವರ ಭರವಸೆಯನ್ನು ಮುಂದಿನ ಆಯೋಗ ಪಾಲಿಸದಿದ್ದರೆ ಏನು ಗತಿ?” ಎಂದು ಪ್ರಶ್ನಿಸಿದ್ದರು. ಭರವಸೆಗಳ ಬದಲು ಕಾನೂನಿನಲ್ಲಿಯೇ ರಕ್ಷಣೆ ಬೇಕು ಎಂದು ಅವರು ಆಗ್ರಹಿಸಿದ್ದರು.
