ಬೆಂಗಳೂರು: ಕೆಪಿಎಸ್‌ಸಿ (KPSC) ನೇಮಕಾತಿಗೆ ಸುಳ್ಳು ಪ್ರಮಾಣಪತ್ರ ಸಲ್ಲಿಕೆ ಆರೋಪ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ (Shivashankarappa Sahukar) ಪುತ್ರಿ ಸುಮಾ ಸಾಹುಕಾರ್ ಹೈಕೋರ್ಟ್‌ಗೆ (High Court) ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಪೀಠ, ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿದೆ. ವರ್ಷಕ್ಕೆ 30 ಲಕ್ಷ ರೂ. ಆದಾಯವಿರುವ ನೀವು 40 ಸಾವಿರ ರೂ. ಆದಾಯವೆಂದು ಅರ್ಜಿ ಸಲ್ಲಿಸಿದ್ದೀರಿ. ಇದು ಮೇಲ್ನೋಟಕ್ಕೇ ವಂಚನೆ ಎಂಬುದು ತಿಳಿಯುತ್ತಿದೆ. ಕೆಪಿಎಸ್‌ಸಿಯ ಪ್ರತಿ ನೇಮಕವೂ ವಿವಾದಗಳಿಂದ ಕೂಡಿದೆ. ಬಡವನಿಗೆ ಸಿಗಬೇಕಾದ ಆಯ್ಕೆಯನ್ನು ನೀವು ಕಿತ್ತುಕೊಂಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿತು.ಇದನ್ನೂ ಓದಿ: ಪ್ರತಿಭಟನೆ ನಡೆಸಿದ ಮಾತ್ರಕ್ಕೆ ಲಾಠಿಚಾರ್ಜ್ ಮಾಡಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್
ಇದೇ ವೇಳೆ ಸುಮಾ ಪರವಾಗಿ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್ ವಾದ ಮಂಡಿಸಿದರು. ಬಳಿಕ ಕೋರ್ಟ್ ನಾವು ಪರೀಕ್ಷೆಯಲ್ಲಿ ಭಾಗವಹಿಸದಂತೆ ಯಾರನ್ನು ತಡೆದಿಲ್ಲ. ಆರೋಪಪಟ್ಟಿ ಸಲ್ಲಿಕೆ ಆದ ನಂತರ ಅರ್ಜಿ ಸಲ್ಲಿಸಿ ಅಂತ ಸೂಚಿಸಿದೆ. ಅರ್ಜಿದಾರರ ವಕೀಲರ ಮನವಿಯ ಮೇರೆಗೆ ಪ್ರಕರಣ ರದ್ದು ಕೋರಿದ್ದ ಅರ್ಜಿ ವಾಪಸ್ ಪಡೆಯಲಾಗಿದೆ.
