ಲಕ್ನೋ: ಗೋ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಗೆ ಗೋ ಶಾಲೆಯಲ್ಲಿ ಒಂದು ತಿಂಗಳು ಗೋವುಗಳ ಸೇವೆ ಮಾಡುವಂತೆ ಷರತ್ತು ವಿಧಿಸಿ ಅಲಹಾಬಾದ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
Advertisement
ಸಲೀಂ ಅಲಿಯಾಸ್ ಕಾಲಿಯಾ ಗೋ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ. ಆ ಬಳಿಕ ಜಾಮೀನು ಕೋರಿ ಅಲಹಾಬಾದ್ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನುವಿಚಾರಣೆ ನಡೆಸಿದ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್, ಆರೋಪಿ ಒಂದು ತಿಂಗಳ ಕಾಲ ಗೋವುಗಳ ಸೇವೆ ಮಾಡಬೇಕು ಮತ್ತು ನೋಂದಾಯಿತ ಗೋಶಾಲೆಗೆ 1 ಲಕ್ಷ ರೂ. ದಂಡ ಕಟ್ಟಬೇಕು ಎಂದು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದ್ದಾರೆ. ಇದನ್ನೂ ಓದಿ: ರೇಪ್‌ಗೆ ಉತ್ತೇಜನ ನೀಡುವ ಪರ್ಫ್ಯೂಮ್ ಜಾಹೀರಾತು ತೆಗೆಯುವಂತೆ ಕೇಂದ್ರ ಸೂಚನೆ
Advertisement
ಸಲೀಂ ವಿರುದ್ಧ ಐಪಿಸಿ ಸೆಕ್ಷನ್ 379 ಕಳ್ಳತನ ಮತ್ತು ಉತ್ತರ ಪ್ರದೇಶ ಗೋ ಹತ್ಯೆ ತಡೆ ಕಾಯ್ದೆಯಡಿ ಬರೈಲಿ ಜಿಲ್ಲೆಯ ಬೊಜಿಪುರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿತ್ತು. ಆ ಬಳಿಕ ಜಾಮೀನು ಅರ್ಜಿ ಸಲ್ಲಿಸಿ ಕೋರ್ಟ್‍ನಲ್ಲಿ ಸಲೀಂ ಪರ ವಾದಿಸಿದ ವಕೀಲರು, ಸಲೀಂ ಮುಗ್ಧ ಆತ ಮತ್ತು ಆತನ ಸಹಚರರು ಬಂಧನದ ಬಳಿಕ ಗೊಂದಲದ ಹೇಳಿಕೆ ನೀಡಿದ್ದಾರೆ. ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾದರೆ ಬರೈಲಿ ಗೋ ಶಾಲೆಗೆ 1 ಲಕ್ಷ ರೂ. ದಂಡ ಕಟ್ಟಲಾಗುವುದು ಹಾಗೂ ಒಂದು ತಿಂಗಳ ಕಾಲ ಗೋವುಗಳ ಸೇವೆ ಮಾಡುವುದಾಗಿ ವಾದ ಮಂಡಿಸಿದರು.
Advertisement
Advertisement
ಆ ಬಳಿಕ ಕೋರ್ಟ್ ಈ ಬಗ್ಗೆ ಅರ್ಜಿದಾರನಿಂದ ವೈಯಕ್ತಿಕ ಬಾಂಡ್ ಹಾಗೂ ಎರಡು ಶ್ಯೂರಿಟಿ ಪಡೆದುಕೊಂಡು ಜಾಮೀನು ಮಂಜೂರು ಮಾಡಿದೆ. ಗೋ ಶಾಲೆಯಲ್ಲಿ ಕೆಲಸ ಮಾಡಿದ ಮತ್ತು ಕಟ್ಟಿರುವ ಹಣದ ಬಗ್ಗೆ ದಾಖಲೆ ಕೋರ್ಟ್‍ಗೆ ಸಲ್ಲಿಸುವಂತೆ ಆದೇಶಿಸಿದೆ. ಇದನ್ನೂ ಓದಿ: ಕೆಮಿಕಲ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟ – 9 ಸಾವು, 20 ಮಂದಿಗೆ ಗಾಯ