Connect with us

Crime

ಮನೆಯಲ್ಲಿ ಯಾರೂ ಇಲ್ಲದಾಗ ಸ್ಕ್ರೂಡ್ರೈವರ್‌ನಿಂದ ಚುಚ್ಚಿ ತಾಯಿಯನ್ನು ಕೊಂದ ಮಗ!

Published

on

ದೆಹಲಿ: ಮದ್ಯ ಸೇವಿಸಲು ತಾಯಿ ಹಣ ನೀಡುತ್ತಿಲ್ಲ ಎಂದು ಕೋಪಗೊಂಡು ತಾಯಿಯನ್ನು ಮಗ ಸ್ಕ್ರೂಡ್ರೈವರ್‍ನಿಂದ ಇರಿದು ಕೊಂದಿರುವ ಘಟನೆ ನವದೆಹಲಿಯ ಖಜುರಿ ಖಾಸ್ ಪ್ರದೇಶದಲ್ಲಿ ನಡೆದಿದೆ.

ಸುಶೀಲ್ ಪಾಂಡೆ (22)ತಾಯಿಯನ್ನು ಕೊಂದ ಪಾಪಿ ಮಗ. ರಾಮ್ ಲಲ್ಲಿ(64) ಮಗನಿಂದ ಕೊಲೆಯಾದ ಮೃತದುರ್ದೈವಿ ತಾಯಿ. ಕುಡಿಯಲು ತಾಯಿ ಹಣ ನೀಡುತ್ತಿಲ್ಲ ಎಂದು ಮಗ ತಾಯಿಯನ್ನೇ ಸ್ಕ್ರೂಡ್ರೈವರ್ ನಿಂದ ಚಿಚ್ಚಿ ಕೊಲೆ ಗೈದಿದ್ದಾನೆ.

ಮಗ ತಾಯಿಯ ಬಳಿ ಕುಡಿಯಲು ಹಣ ಕೇಳಿದ್ದಾನೆ. ಈ ವೇಳೆ ತಾಯಿ ಹಣವನ್ನು ಕೊಡಲು ನಿರಾಕರಿಸಿದ್ದಾರೆ. ಕೋಪಗೊಂಡ ಮಗ ತಾಯಿಯನ್ನು ಕೊಲೆ ಮಾಡಲು ಸಂಚುರೂಪಿಸಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ತಾಯಿ ಮೇಲೆ ಸ್ಕ್ರೂಡ್ರೈವರ್‌ನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ತಾಯಿ ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ ಎಂದು ದೆಹಲಿಯ ಉಪ ಪೊಲೀಸ್ ಆಯುಕ್ತ ವೇದ್ ಪ್ರಕಾಶ್ ಸೂರ್ಯ ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *