Connect with us

Bengaluru City

ಬೆನ್ನ ಮೇಲಿನ ಟ್ಯಾಟೂ ರಿವೀಲ್ ಮಾಡಿ ಪತಿಗೆ ಸಂಜನಾ ಧನ್ಯವಾದ

Published

on

Share this

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಸಂಜನಾ ಗಲ್ರಾನಿ 15 ವರ್ಷಗಳ ನಂತರ ಟ್ಯಾಟೂವನ್ನು ಸೋಶಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿದ್ದಾರೆ.

ಗಂಡ-ಹೆಂಡತಿ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟು, ಖ್ಯಾತಿ ಪಡೆದ ನಟಿ ಸಂಜನಾ ಗಲ್ರಾನಿ ನಂತರ ಹಲವು ಚಿತ್ರರಂಗಗಳಲ್ಲಿ ಬ್ಯುಸಿಯಾಗಿದ್ದರು. ಇತ್ತೀಚೆಗೆ ಕೆಲವು ತಿಂಗಳ ಹಿಂದೆ ನಟಿ ಸಂಜನಾ ಗಲ್ರಾನಿ ವೈದ್ಯ ಆಜೀಜ್ ಎಂಬವರನ್ನು ವಿವಾಹವಾಗಿದ್ದಾರೆ ಎಂಬ ವಿಚಾರ ಬಹಿರಂಗಗೊಂಡಿತು.

ಸದ್ಯ ಇದೀಗ ಸಂಜನಾ ಗಲ್ರಾನಿಯವರು ಬೆನ್ನ ಮೇಲೆ ಹಾಕಿಸಿಕೊಂಡಿರುವ ತಮ್ಮ ಪತಿಯ ಹೆಸರಿನ ಟ್ಯಾಟೂವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಸಂಜನಾ ಸೀರೆಯುಟ್ಟು, ಮುಡಿಗೆ ಮಲ್ಲಿಗೆ ಹೂ ಮುಡಿದು, ಟ್ರೇಡಿಶನ್ ಲುಕ್‍ನಲ್ಲಿ ಫೋಸ್ ನೀಡಿದ್ದು, ಅವರ ಬೆನ್ನ ಮೇಲೆ ಆಜೀಜ್ ಎಂಬ ಹಚ್ಚೆ ಇರುವುದನ್ನು ಕಾಣಬಹುದಾಗಿದೆ.

ಫೋಟೋ ಜೊತೆಗೆ ನನ್ನ ಟ್ಯಾಟೂವನ್ನು ಬಹಿರಂಗ ಪಡಿಸುತ್ತಿದ್ದೇನೆ. ನನ್ನ ವೈಯಕ್ತಿಕ ಮತ್ತು ನನ್ನ ಹೃದಯಕ್ಕೆ ಹತ್ತಿರವಾದಂತಹ ಟ್ಯಾಟೂ, ಅನಗತ್ಯ ಗಾಸಿಪ್‍ಗಳಿಂದ ದೂರವಿರುವ ಸಲುವಾಗಿ ನನ್ನ ಜೀವನದ ಪ್ರೀತಿಯನ್ನು ಇಷ್ಟು ದಿನ ಮುಚ್ಚಿಟ್ಟಿದೆ. ಆದರೀಗ ನಾವು ಮದುವೆಯಾಗಿರುವ ವಿಚಾರವನ್ನು ಅಧಿಕೃತವಾಗಿ ಘೋಷಿಸುತ್ತಿದ್ದೇವೆ. ಹಾಗಾಗಿ ಟ್ಯಾಟೂವನ್ನು ತೋರಿಸುತ್ತಿದ್ದೇನೆ ಎಂದಿದ್ದಾರೆ.

ವೃತ್ತಿ ಜೀವನದಲ್ಲಿ ನಟಿಯರು ಸ್ನೇಹಿತರೊಂದಿಗೆ ಒಂದೆರಡು ಬಾರಿ ಕಾಣಿಸಿಕೊಂಡರೆ ಹಲವಾರು ಗಾಸಿಪ್‍ಗಳನ್ನು ಎದುರಿಸಬೇಕಾಗುತ್ತದೆ. ನಾನು ಹೇಳುತ್ತಿರುವುದು ತಮಾಷೆ ಎನಿಸಬಹುದು, ಆದರೆ ನಾನು ಸತ್ಯವನ್ನೇ ಹೇಳುತ್ತಿದ್ದೇನೆ. ನನ್ನ ರಾಕಿ ಬ್ರದರ್ ಅಲ್ಲದೇ ನನ್ನ ಶುಗರ್ ಡ್ಯಾಡಿಯನ್ನು ಕೂಡ ಬಾಯ್ ಫ್ರೆಂಡ್ ಎಂದು ಕರೆದಿರುವುದನ್ನು ನೋಡಿದ್ದೇನೆ. ಓರ್ವ ನಟಿಯೊಂದಿಗೆ ಪಬ್ಲಿಕ್‍ನಲ್ಲಿ ಕಾಣಿಸಿಕೊಳ್ಳುವವರೆಲ್ಲರೂ ಬಾಯ್‍ಫ್ರೆಂಡ್ ಆಗುತ್ತಾರಾ? ಇದು ಮಾನಸಿಕವಾಗಿ ತೊಂದರೆ ಕೊಡುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ನಮ್ಮ ಎದುರಾಳಿ ವ್ಯಕ್ತಿ ಸ್ನೇಹಿತ, ಹಿತೈಷಿ, ಓರ್ವ ಪ್ರಸಿದ್ಧ ನಟ, ರಾಜಕಾರಣಿ ಅಥವಾ ಕ್ರಿಕೆಟಿಗನಾಗಿದ್ದು, ಯಾವುದೇ ಸಾಕ್ಷಿಗಳಿಲ್ಲದೇ ಅವರ ಸ್ನೇಹಕ್ಕೆ 1,000 ಕಥೆಗಳನ್ನು ಕಟ್ಟಿ ಹೇಳುತ್ತಾರೆ. ವಾವ್ ನಾವು ಎಂತಹ ಸಮಾಜದಲಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಈ ಎಲ್ಲಾ ಸಮಸ್ಯೆ, ಆರೋಪ ಮತ್ತು ನೆಗೆಟಿವಿಟಿಗಳ ಮಧ್ಯೆ ನಿಜವಾದ ಪ್ರೀತಿ ತನ್ನ ದಾರಿಯನ್ನು ಕಂಡುಕೊಂಡಿದೆ ಮತ್ತು ನಿಜವಾದ ಪ್ರೇಮಿಗಳು ಮಾತ್ರ ಒಬ್ಬರಿಗೊಬ್ಬರು ನಿಲ್ಲುತ್ತಾರೆ. ಸತ್ಯ ಕೊನೆಗೆ ಗೆಲ್ಲುತ್ತದೆ ಎಂದು ತಿಳಿಸಿದ್ದಾರೆ.

ನನ್ನ ದೇಹದ ಒಂದು ಭಾಗವನ್ನು ನಾನು ಪ್ರೀತಿಸುವ ವ್ಯಕ್ತಿಗೆ ಅರ್ಪಿಸುತ್ತೇನೆ, ಅವರ ಹೆಸರನ್ನು ನನ್ನ ಮೇಲೆ ಬರೆಸಿಕೊಂಡಿದ್ದೇನೆ. ಇಂದಿಗೂ ಮತ್ತು ಎಂದಿಗೂ ಐ ಲವ್ ಯೂ ಅಜೀಜ್.. 15 ವರ್ಷದಿಂದ ನನ್ನ ಜೀವನದ ಸರ್ವ ಶಕ್ತಿಯಾಗಿ, ನಿಜವಾದ ಗೆಳೆಯ, ಲವರ್, ಗಂಡ ಮತ್ತು ತಂದೆ ರೀತಿಯ ಮೆಂಟರ್ ಆಗಿ ಇರುವುದಕ್ಕೆ ಧನ್ಯವಾದ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: 80 ಕೆಜಿ ತೂಕ ಎತ್ತಿದ ನಟಿ ದಿಶಾ ಪಟಾನಿ

Click to comment

Leave a Reply

Your email address will not be published. Required fields are marked *

Advertisement