-ನಮ್ಮ ತಂಟೆಗೆ ಬಂದ್ರೆ ಹುಷಾರ್ ಎಂದ ಸಂಗಮೇಶ್
ಬಾಗಲಕೋಟೆ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಮ್ಮ ಮನೆ ಬೆಕ್ಕು, ನಾಯಿಯ ಕಾಲು ಹಿಡಿದಿದ್ದ ಎಂದು ಏಕವಚನದಲ್ಲಿಯೇ ಮಾಜಿ ಸಚಿವ ಮುರುಗೇಶ್ ನಿರಾಣಿ ಸೋದರ ಸಂಗಮೇಶ್ ನಿರಾಣಿ ಗುಡುಗಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಂಗಮೇಶ್ ನಿರಾಣಿ, ಯತ್ನಾಳ ಒಬ್ಬ ಹರಕುಬಾಯಿ ಮನುಷ್ಯ. ಅಧಿಕಾರ ಇಲ್ಲದಿದ್ದಾಗ ನಮ್ಮ ಮನೆಗೆ ಶಿರಸಾಷ್ಟಾಂಗ ನಮಸ್ಕಾರ ಮಾಡಿದ್ದಲ್ಲದೆ ನಮ್ಮ ಮನೆಯ ನಾಯಿ, ಬೆಕ್ಕಿನ ಕಾಲು ಹಿಡಿದಿದ್ದ. ಏಕವಚನದಲ್ಲಿ ಹಿಗ್ಗಾಮುಗ್ಗಾ ಟೀಕೆ ಮಾಡಿದ್ದಲ್ಲದೆ ಯತ್ನಾಳ ಒಬ್ಬ ಭಸ್ಮಾಸುರ ಎನ್ನುವ ಪದ ಪ್ರಯೋಗ ಮಾಡಿದರು.
Advertisement
Advertisement
ಅಧಿಕಾರ ಇಲ್ಲದಿದ್ದಾಗ ಅವನಿಗೆ ನಮ್ಮ ಕುಟುಂಬ ಸಹಾಯ ಮಾಡಿದೆ. ಮುರುಗೇಶ್ ನಿರಾಣಿ ಅವರು ಯತ್ನಾಳಗೆ ರಾಜಕೀಯ ಪುನರ್ ಜನ್ಮ ನೀಡಿದ್ದಾರೆ. ಈ ಹಿಂದೆ ಅವನು ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಜಗದೀಶ ಶೆಟ್ಟರ್, ಪ್ರಹ್ಲಾದ್ ಜೋಶಿ, ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ಧವೂ ನಾಲಿಗೆ ಹರಿಬಿಟ್ಟಿದ್ದ. ಇದೀಗ ನಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದಕ್ಕೆ ನಾನು ಬಹಿರಂಗವಾಗಿ ಮಾತನಾಡುತ್ತಿದ್ದೇನೆ. ನಮ್ಮ ತಂಟೆಗೆ ಬಂದರೆ ಹುಷಾರ್ ಎನ್ನುವ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
Advertisement
Advertisement
ಯತ್ನಾಳ್ ಎಲ್ಲ ಪಕ್ಷಗಳಲ್ಲೂ ತಿರುಗಾಡಿ ಬಂದಿದ್ದಾರೆ. ಬಿಜೆಪಿ ಮುಖಂಡರ ಬಗ್ಗೆ ನಾಲಿಗೆ ಹರಿಬಿಟ್ಟು, ದೇವೇಗೌಡರಿಗೆ ಜೀ ಹುಜುರ್ ಅಂತಿದ್ರು. ಈಗ ನಮ್ಮ ಕುಟುಂಬದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ. ಅವರಿಗೆ ರಾಜಕೀಯ ನೈತಿಕತೆ, ಬದ್ಧತೆ ಯಾವುದು ಇಲ್ಲ ಎಂದು ಸಂಗಮೇಶ್ ನಿರಾಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.