Sunday, 19th May 2019

`ಯಜಮಾನ’ನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಸ್ಯಾಂಡಲ್‍ವುಡ್ ಸ್ಟಾರ್ಸ್

ಬೆಂಗಳೂರು: ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 42ನೇ ವರ್ಷದ ಹುಟ್ಟುಹಬ್ಬಕ್ಕೆ ಸ್ಯಾಂಡಲ್‍ವುಡ್ ಸ್ಟಾರ್ಸ್ ಗಳು ಹಾಗೂ ನಿರ್ದೇಶಕ, ನಿರ್ಮಾಪಕರು ತುಂಬು ಹೃದಯದಿಂದ ಶುಭಾಶಯ ಕೋರಿದ್ದಾರೆ.

ನಟಿ ಸುಮಲತಾ, ರಕ್ಷಿತಾ ಪ್ರೇಮ್, ನಟ ಜಗ್ಗೇಶ್, ನೆನಪಿರಲಿ ಪ್ರೇಮ್, ಧ್ರುವ ಸರ್ಜಾ, ಆದಿತ್ಯ, ನಿರ್ದೇಶಕರಾದ ಪವನ್ ಒಡೆಯರ್, ಸಂತೋಷ್ ಆನಂದ್ ರಾಮ್, ಎ ಪಿ ಅರ್ಜುನ್ ಸೇರಿದಂತೆ ಕನ್ನಡ ಚಿತ್ರರಂಗದ ಗಣ್ಯರು ಡಿ ಬಾಸ್‍ಗೆ ಟ್ವೀಟ್ ಮಾಡಿ ಶುಭಹಾರೈಸಿದ್ದಾರೆ.

ಯಾರ ಟ್ವೀಟ್‍ನಲ್ಲಿ ಏನಿದೆ?
ದರ್ಶನ್ ನಿನಗೆ ಪ್ರೀತಿಯಿಂದ ಆಶೀರ್ವಾದಿಸುತ್ತಿದ್ದೇನೆ. ನೀನು ಜೀವನದಲ್ಲಿ ಸಿಕ್ಕ ಪ್ರತಿಯೊಂದು ಕಷ್ಟದ ಮೆಟ್ಟಿಲು ಹತ್ತಿಕೊಂಡು ಇಂದು ಇಂತಹ ದೊಡ್ಡ ಸ್ಥಾನದಲ್ಲಿದ್ದಿ. ನಿನ್ನ ಯಶಸ್ಸನ್ನು ನಾನು ಹೆಮ್ಮೆಯಿಂದ, ಖುಷಿಯಿಂದ ನೋಡಿಕೊಂಡು ಬಂದಿದ್ದೇನೆ. ಎಂದೆಂದಿಗೂ ನೀನು ಸಂತೋಷದಿಂದ ಇರಲಿ ಎಂದು ಆಶಿಸುತ್ತಾನೆ. ಹುಟ್ಟುಹಬ್ಬದ ಶುಭಾಶಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದು ಬರೆದು ದರ್ಶನ್ ಫೋಟೋ ಹಾಕಿ ಸುಮಲತಾ ಟ್ವೀಟ್ ಮಾಡಿದ್ದಾರೆ.

ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಮ್ಯಾನ್ ಆಫ್ ಮಾಸ್ ಎಂದು ಚಾಲೆಂಚಿಂಗ್ ಸ್ಟಾರ್‍ಗೆ ಹೊಸ ಬಿರುದು ನೀಡಿ ಶುಭಕೋರಿದ್ದಾರೆ. ಹಾಗೆಯೇ ಎಪಿ ಅರ್ಜುನ್ “ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಅಣ್ಣ. ನಿಮ್ಮ ಆನೆ ನಡಿಗೆ ಹೀಗೆಯೇ ಮುಂದುವರಿಯಲಿ. ಯಶಸ್ಸು ಸದಾ ನಿಮ್ಮದಾಗಲಿ. ನೂರುಕಾಲ ನಗುತಾ ಸುಖವಾಗಿ ಬಾಳಿ” ಎಂದು ಶುಭ ಹಾರೈಸಿದ್ದಾರೆ.

ನಟಿ ರಕ್ಷಿತಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಹ್ಯಾಪಿ ಬರ್ತ್ ಡೇ ದರ್ಶನ್. ಖುಷಿಯಾಗಿರಿ, ಚೆನ್ನಾಗಿರಿ. ನಿಮಗೆ ದೇವರು ಒಳ್ಳೆಯದು ಮಾಡಲಿ ಎಂದು ಬರೆದು ದರ್ಶನ್ ಅವರನ್ನು ಟ್ಯಾಗ್ ಮಾಡಿ ಶುಭಕೋರಿದರೆ, ಹುಟ್ಟು ಹಬ್ಬದ ಶುಭಾಶಯಗಳು ಚಾಲೆಂಜಿಂಗ್ ಸ್ಟಾರ್ “ಡಿ” ಬಾಸ್, ನೂರು ಕಾಲ ಸುಖವಾಗಿ ಬಾಳಿ. ಜೈ ಆಂಜನೇಯ ಎಂದು ತಾವು ದರ್ಶನ್ ಅವರೊಂದಿಗೆ ಇರುವ ಫೋಟೋವನ್ನು ಹಾಕಿ ಟ್ವೀಟ್ ಮಾಡುವ ಮೂಲಕ ನಟ ಧ್ರುವ ಸರ್ಜಾ ವಿಶ್ ಮಾಡಿದ್ದಾರೆ.

ದರ್ಶನ್ ಹುಟ್ಟುಹಬ್ಬಕ್ಕೆ ನಟ ಜಗ್ಗೇಶ್ ಸಹ ಶುಭಹಾರೈಸಿದ್ದು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ದರ್ಶನ್ ಜೊತೆಗಿನ ಫೋಟೋವನ್ನು ಹಂಚಿಕೊಂಡು, ಒಂದೇ ಸಾಲಿನಲ್ಲಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *