ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಕೇಸ್ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದೀಗ ಡ್ರಗ್ಸ್ ಕೇಸ್‍ನಲ್ಲಿ ಸಿಲುಕಿದ್ದ ಚಂದನವನದ ನಟಿಯ ಸ್ನೇಹಿತ ಪೊಲೀಸರ ಬಲೆಗೆ ಬಿದ್ದಿದ್ದಾನೆ.
Advertisement
ಸಿಸಿಬಿಯಲ್ಲಿ ಡ್ರಗ್ಸ್ ಕೇಸ್‍ನಲ್ಲಿ ಬಂಧನವಾಗಿ ಸದ್ದು ಮಾಡಿದ್ದ ಸ್ಯಾಂಡಲ್‍ವುಡ್ ನಟಿಯ ಆಪ್ತ, ಆರ್‍ಟಿಒ ಎಸ್‍ಡಿಎ ರವಿಶಂಕರ್ ವಂಚನೆ ಪ್ರಕರಣದಲ್ಲಿ ಮಲ್ಲೇಶ್ವರಂ ಪೊಲೀಸರ ಅತಿಥಿಯಾಗಿದ್ದಾನೆ. ವಾಹನ ಮಾಲೀಕರ ಬಳಿ ಒಂದು ವರ್ಷದ ಟ್ಯಾಕ್ಸ್ ಪಡೆದು ಟ್ಯಾಕ್ಸ್ ಕಟ್ಟದೇ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಆರೋಪದ ಮೇಲೆ ಅಜಯ್ ಹಾಗೂ ರವಿಶಂಕರ್ ಅನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಸಿದ್ದರಾಮೋತ್ಸವದಲ್ಲಿ ರಾಹುಲ್ ಪಾಲ್ಗೊಳ್ತಾರೆ, `ಸರಿಯಾಗಿ ನಡ್ಕೊಳಿ’ – ಕೆಪಿಸಿಸಿಗೆ ಹೈಕಮಾಂಡ್ ವಾರ್ನಿಂಗ್
Advertisement
Advertisement
ಆರೋಪಿಗಳಾದ ರವಿಶಂಕರ್ ಹಾಗೂ ಅಜಯ್, ಆಶಾ ಯೋಗೇಶ್ ಬಳಿ ಲೈಫ್ ಟೈಮ್ ಟ್ಯಾಕ್ಸ್ ಮಾಡಿಸಿಕೊಡುವುದಾಗಿ 1,37,529 ರೂಪಾಯಿ ಪಡೆದು ಟ್ಯಾಕ್ಸ್ ಕಟ್ಟದೆ ವಂಚಿಸಿರುತ್ತಾರೆ. ಆರೋಪಿತರ ವಂಚನೆ ಬಗ್ಗೆ ಮಹಿಳೆ ಆಶಾ ಯೋಗೇಶ್ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಮಹಿಳೆ ಕೊಟ್ಟ ದೂರಿನ ಆಧಾರದ ಮೇಲೆ ಇಬ್ಬರನ್ನು ಪೊಲೀಸರು ಕಸ್ಟಡಿಗೆ ಪಡೆದು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ನಾಳೆಯಿಂದ ದುಬಾರಿ ದುನಿಯಾ – ಮೀನು, ಮಾಂಸ, ಗೋಧಿ ಸೇರಿ ಎಲ್ಲವೂ ಕಾಸ್ಟ್ಲಿ