LatestLeading NewsMain PostNational

ನಾಳೆಯಿಂದ ದುಬಾರಿ ದುನಿಯಾ – ಮೀನು, ಮಾಂಸ, ಗೋಧಿ ಸೇರಿ ಎಲ್ಲವೂ ಕಾಸ್ಟ್ಲಿ

Advertisements

ನವದೆಹಲಿ: ದಿನಬಳಕೆಯ ವಸ್ತುಗಳ ಮೇಲೆ ಜೆಎಸ್‍ಟಿ ಶೇ.5ರಷ್ಟು ಹೆಚ್ಚಳ ಸೋಮವಾರದಿಂದ ಜಾರಿಗೆ ಬರಲಿದೆ. ಹೀಗಾಗಿ ಜನಸಾಮಾನ್ಯರಿಗೆ ನಾಳೆಯಿಂದ ದುನಿಯಾ ದುಬಾರಿ ಆಗಲಿದೆ.

meat ban

ಪ್ಯಾಕ್ ಮಾಡಿದ ಮೀನು, ಮಾಂಸ, ಮೊಸರು, ಜೇನು, ಬೆಲ್ಲ, ತರಕಾರಿ, ಗೋಧಿ ಸೇರಿ ಹಲವು ದಿನಸಿ ಪದಾರ್ಥಗಳ ಬೆಲೆ ಏರಿಕೆ ಆಗಲಿದೆ. ಹೋಟೆಲ್ ರೂಂಗಳ ಬಾಡಿಗೆ, ವಾಣಿಜ್ಯ ಮಳಿಗೆಗಳ ಬಾಡಿಗೆಯೂ ಹೆಚ್ಚಾಗಲಿದೆ. ಜುಲೈ 18 ರಿಂದಲೇ ಜಿಎಸ್‍ಟಿ ಅನ್ವಯವಾಗಲಿದೆ. ಪ್ಯಾಕ್ ಮಾಡಿ ಲೇಬಲ್ ಮಾಡಿದ ಮೊಸರು, ಲಸ್ಸಿ ಮತ್ತು ಮಜ್ಜಿಗೆ ಸೇರಿದಂತೆ ಹಲವಾರು ಉತ್ಪನ್ನಗಳಿಗೆ ತೆರಿಗೆ ವಿನಾಯಿತಿಯನ್ನು ಕೊನೆಗೊಳಿಸಿ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯಿಂದ ಅಧಿಸೂಚನೆ ಹೊರಡಿಸಿದೆ.

ನಿತ್ಯದ ಬಾಡಿಗೆ 1,000ರೂ.ಗಿಂತ ಕಡಿಮೆ ಇರುವ ಹೋಟೆಲ್ ಕೊಠಡಿಗಳಿಗೆ ಇದ್ದ ವಿನಾಯಿತಿ ರದ್ದಾಗಿ, ಇನ್ನೂ ಶೇ.12ರಷ್ಟು ತೆರಿಗೆ ಬೀಳಲಿದೆ. ದಿನಕ್ಕೆ 5000 ರೂ.1ಗಿ0ತ ಹೆಚ್ಚಿನ ಬಾಡಿಗೆ ವಿಧಿಸುವ ಸಾರ್ವಜನಿಕ ಧಾರ್ಮಿಕ ಕೆಂದ್ರಗಳು, ಮಾಸಿಕ 2500ರೂ.ಗಿಂತ ಹೆಚ್ಚಿನ ಬಾಡಿಗೆ ಇರುವ ವಾಣಿಜ್ಯ ಮಳಿಗೆಗಳಿಗೂ ಜಿಎಸ್‍ಟಿ ಜಾರಿಯಾಗಲಿದೆ.

ಚರ್ಮದ ಸಿದ್ಧ ಉತ್ಪನ್ನಗಳು, ಟೈಲರಿಂಗ್, ಜವಳಿ ಸೇವೆಗಳು, ಅಂಚೆ ಇಲಾಖೆ ಬುಕ್‌ಪೋಸ್ಟ್ 10 ಗ್ರಾಂಗಿಂತ ಕಡಿಮೆ ಇರುವ ಲಕೋಟಿ, ಚೆಕ್‍ಬುಕ್‍ಗಳ ಬೆಲೆ ಕೂಡ ಏರಿಕೆಯಾಗಲಿದೆ. ನಿತ್ಯ 5,000ರೂ.ಗಿಂತ ಹೆಚ್ಚಿನ ಶುಲ್ಕವಿರುವ ಐಸಿಯು ಹೊರತುಪಡಿಸಿದ ಆಸ್ಪತ್ರೆ ಕೊಠಡಿಗಳ ಬಿಲ್‍ಗೆ ಶೇ.5ರಷ್ಟು ಜಿಎಸ್‍ಟಿ ಜಾರಿಯಾಗುವ ಕಾರಣ ಇದು ಕೂಡ ದುಬಾರಿಯಾಗಲಿದೆ. ಅಂಚೆ ಇಲಾಖೆಯ ಕೆಲವು ಸೇವೆಗಳು ಸಹ ದುಬಾರಿಯಾಗಲಿದೆ. ಇದನ್ನೂ ಓದಿ: ಚಾಕು ಹಾಕಿದವರಿಗೆ ಪರಿಹಾರ ಕೊಡೋಕೆ ಹೋಗ್ತೀವಾ: ಯತ್ನಾಳ್‌ ಪ್ರಶ್ನೆ

ಪ್ಯಾಕ್ ಮಾಡಿದ ಬ್ರ್ಯಾಡೆಂಡ್ ಭೂ ಪಟ, ಚಾರ್ಟ್, ಅಟ್ಲಾಸ್, ಸೋಲಾರ್ ವಾಟರ್ ಹೀಟರ್, ಮುದ್ರಣ, ಬರಹ/ಚಿತ್ರಕಲೆಯ ಇಂಕ್, ಎಲ್‍ಇಡಿ ಬಲ್ಬ್, ಎಲ್‍ಇಡಿ ಲ್ಯಾಂಪ್ ಬೆಲೆ ಕೂಡ ಹೆಚ್ಚಾಗಲಿದೆ. ಇನ್ನೂ ಬ್ಲಡ್ ಬ್ಯಾಂಕ್‍ಗಳಿಗೆ ನೀಡಲಾಗಿದ್ದ ತೆರಿಗೆ ವಿನಾಯಿತಿ ರದ್ದುಗೊಳಿಸಲಾಗಿದೆ.

Live Tv

Leave a Reply

Your email address will not be published.

Back to top button