ಬೆಂಗಳೂರು: ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ಈಗ ಮತ್ತೊಂದು ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದು, ಮತ್ತೆ ಉಳಿದವರು ಕಂಡಂತೆ ಸಿನಿಮಾದಲ್ಲಿನ ರಿಚ್ಚಿ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ನಟ ರಕ್ಷಿತ್ ಶೆಟ್ಟಿ ಈಗ ಹೊಸ ನಿರ್ದೇಶಕರೊಂದಿಗೆ ಸಿನಿಮಾ ಮಾಡಲಿದ್ದು, ಈ ಸಿನಿಮಾವನ್ನು ರಾಹುಲ್ ಪಿಕೆ ನಿದೇರ್ಶಿಸುತ್ತಿದ್ದಾರೆ.
ರಕ್ಷಿತ್ ಶೆಟ್ಟಿ ಮೊದಲ ಬಾರಿಗೆ ನಿರ್ದೇಶಿಸಿದ ಉಳಿದವರು ಕಂಡಂತೆ ಎಂಬ ಸಿನಿಮಾದಲ್ಲಿ, ರಾಹುಲ್ ಸಹಾಯಕ ನಿರ್ದೇಶಕರಾಗಿದ್ದರು. `ಉಳಿದವರು ಕಂಡಂತೆ’ ಸಿನಿಮಾವು ತಮಿಳು ಭಾಷೆಯಲ್ಲಿ ರೀಮೇಕ್ ಆಗಿತ್ತು. ಅಷ್ಟೇ ಅಲ್ಲದೇ ರಿಕ್ಕಿ ಮತ್ತು ಕಿರಿಕ್ ಪಾರ್ಟಿ ಸಿನಿಮಾದಲ್ಲೂ ಭಾಗಿಯಾಗಿದ್ದರು. ಇದೀಗ ಮೊದಲ ಬಾರಿಗೆ ರಾಹುಲ್ ಪಿಕೆ ಅವರು ನಿರ್ದೆಶಿಸುತ್ತಿದ್ದು, ಅದರಲ್ಲಿ ರಕ್ಷಿತ್ ಶೆಟ್ಟಿ ಅಭಿನಯಿಸಲು ಸಜ್ಜಾಗಿದ್ದಾರೆ.
ರಾಹುಲ್ ಪಿಕೆ ನಿರ್ದೇಶನದ ಚಿತ್ರ ಕಥೆಯಲ್ಲಿ ರಕ್ಷಿತ್ ಅವರ ಪಾತ್ರ ರಿಚ್ಚಿಯನ್ನು ಹೋಲುವಂತೆ ಇದೆ ಎಂದು ಹೇಳಿದ್ದಾರೆ. ಹಾಗಾಗಿ ರಕ್ಷಿತ್ ಶೆಟ್ಟಿ ಮತ್ತೊಮ್ಮೆ ರಿಚ್ಚಿ ಪಾತ್ರದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಆದರೆ ಹೊಸ ಸಿನಿಮಾದ ಟೈಟಲ್ ಇನ್ನೂ ಬಿಡುಗಡೆ ಯಾಗಿಲ್ಲ.
ಸದ್ಯ ರಕ್ಷಿತ್ ಶೆಟ್ಟಿ ಅವನೇ ಶ್ರೀಮನ್ನಾರಾಯಣ ಹಾಗೂ 777 ಚಾರ್ಲಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಎರಡು ಸಿನಿಮಾದ ಚಿತ್ರೀಕರಣ ಮುಗಿದ ನಂತರ ಈ ಸಿನಿಮಾ ಸೆಟ್ಟೇರಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv