BollywoodCinemaLatestMain Post

ಸಲ್ಮಾನ್ ನೆಚ್ಚಿನ ಹಿರಿಯ ನಿರ್ದೇಶಕ ಸಾವನ್ ಕುಮಾರ್ ನಿಧನ: ಬಿಟೌನ್ ಕಂಬನಿ

ಬಾಲಿವುಡ್ ಬಹುತೇಕ ಸೂಪರ್ ಸ್ಟಾರ್ ಚಿತ್ರಗಳಿಗೆ ನಿರ್ದೇಶನ ಮಾಡಿರುವ ಹಿರಿಯ ನಿರ್ದೇಶಕ ಮತ್ತು ನಿರ್ಮಾಪಕ ಸಾವನ್ ಕುಮಾರ್ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಮುಂಬೈನ ಕೋಕಿಲಾಬೆನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ನಿಧನ ಹೊಂದಿದ್ದಾರೆ.

1972ರಲ್ಲಿ ರಿಲೀಸ್ ಆದ ‘ಗೋಮ್ತಿ ಕೆ ಕಿನಾರೆ’ ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶ ಮಾಡಿದ್ದ ಸಾವನ್ ಕುಮಾರ್, ಕೇವಲ ನಿರ್ದೇಶನ ಮಾತ್ರವಲ್ಲ, ಚಿತ್ರಕಥೆ ಬರಹಗಾರ, ಗೀತೆ ಸಾಹಿತಿಯಾಗಿಯೂ ಫೇಮಸ್ ಆಗಿದ್ದವರು. ಖ್ಯಾತ ನಟಿ ಮೀನಾಕುಮಾರಿ ಸೇರಿದಂತೆ ಹಲವು ಸ್ಟಾರ್ ನಟ ನಟಿಯರ ಚಿತ್ರಗಳಿಗೆ ಇವರು ಕೆಲಸ ಮಾಡಿದ್ದಾರೆ. ಇದನ್ನೂ ಓದಿ:ಜಯಶ್ರೀ ಜೊತೆ ಸೋನು ಶ್ರೀನಿವಾಸ್ ಗೌಡ ಕಿರಿಕ್

ಈಗಿನ ಸಲ್ಮಾನ್ ಖಾನ್ ರಿಂದ ಹಿಡಿದು ರಾಜೇಶ್ ಖನ್ನ, ಕಪೂರ್, ಅಮಿತಾಭ್ ಬಚ್ಚನ್ ಹೀಗೆ ಸಾಕಷ್ಟು ಕಲಾವಿದರಿಗೆ ಹಿಟ್ ಚಿತ್ರಗಳನ್ನು ಕೊಟ್ಟವರು. ಸಲ್ಮಾನ್ ಖಾನ್ ಅವರ ಹಿಟ್ ಸಿನಿಮಾ ಸನಮ್ ಬೇವಫಾ ಚಿತ್ರಕ್ಕೆ ಇವರೇ ನಿರ್ದೇಶಕರು. ಹೀಗಾಗಿ ಸಾವನ್ ನಿಧನಕ್ಕೆ ಸಲ್ಮಾನ್ ಖಾನ್ ಸೇರಿದಂತೆ ಅನೇಕ ಬಾಲಿವುಡ್ ನಟ ನಟಿಯರು ಕಂಬನಿ ಮಿಡಿದಿದ್ದಾರೆ.

Live Tv

Leave a Reply

Your email address will not be published.

Back to top button