ಬೆಂಗಳೂರು: ಟ್ರೇಡಿಂಗ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ 93 ಲಕ್ಷ ರೂ. ಹಣ ವಂಚಿಸಿದ್ದ (Cyber Crime) ಮೂವರು ಆರೋಪಿಗಳನ್ನು ಸೈಬರ್ ಕಮಾಂಡ್ ಪೊಲೀಸರು ಬಂಧಿಸಿದ್ದಾರೆ.
ಜಾರ್ಖಂಡ್ನ ಅಮಿತ್ ಮಿಶ್ರಾ, ಬೆಂಗಳೂರಿನ (Bengaluru) ತೌಸಿಫ್ ಅಹ್ಮದ್ ಹಾಗೂ ಪರಶುರಾಮ್ ಬಂಧಿತ ಆರೋಪಿಗಳು. ಇವರೆಲ್ಲ ಸೇರಿ ಹರೀಶ್ ಎಂಬವರಿಗೆ 93 ಲಕ್ಷ ರೂ. ವಂಚಿಸಿದ್ದರು. ಬಳಿಕ APK ಫೈಲ್ಗಳ ಮೂಲಕ ಮ್ಯೂಲ್ ಅಕೌಂಟ್ ಗಳಿಗೆ ಹಣ ವರ್ಗಾವಣೆ ಮಾಡಿಕೊಂಡಿದ್ದರು. ಇದನ್ನೂ ಓದಿ: ದಾವಣಗೆರೆ | 150 ಕೋಟಿ ವಂಚನೆ ಪ್ರಕರಣ – ದೂರುದಾರನೇ ಸೈಬರ್ ವಂಚಕರ ಗ್ಯಾಂಗ್ ಸದಸ್ಯ!

ಡೊನೇಷನ್ ಕೊಡುವುದಾಗಿ ಬ್ಯಾಂಕ್ ಅಕೌಂಟ್ ಬಳಸಿಕೊಂಡು ಆರೋಪಿಗಳು ವಂಚಿಸುತ್ತಿದ್ದರು. ಬಂಧಿತ ಮೂವರು ಆರೋಪಿಗಳಿಂದ 6 ಮೊಬೈಲ್ಗಳನ್ನು ವಶಕ್ಕೆ ಪಡೆಯಲಾಗಿದೆ. ಮೊಬೈಲ್ಗಳಲ್ಲಿ 507 ಮ್ಯೂಲ್ ಅಕೌಂಟ್ ಡಿಟೇಲ್ಸ್ ಪತ್ತೆಯಾಗಿದೆ.
ವಂಚನೆಗಾಗಿ ಸುಮಾರು 51 APK ಫೈಲ್ಗಳನ್ನ ಆರೋಪಿಗಳು ಬಳಸುತ್ತಿದ್ದರು. ಅಲ್ಲದೇ ವಾಟ್ಸ್ಯಾಪ್ ಮತ್ತು ಟೆಲಿಗ್ರಾಂನಲ್ಲಿ ಗ್ರೂಪ್ ಮಾಡಿದ್ದರು. ಆ ಗ್ರೂಪ್ಗಳಲ್ಲಿ ಮ್ಯೂಲ್ ಅಕೌಂಟ್ ಡಿಟೇಲ್ಸ್ ಕಲೆಕ್ಟ್ ಮಾಡಿ ಕಿಂಗ್ ಪಿನ್ಗಳಿಗೆ ಅಕೌಂಟ್ ಡಿಟೇಲ್ಸ್ ಶೇರ್ ಮಾಡುತ್ತಿದ್ದರು. ಕಮ್ಯುನಿಕೇಷನ್ಗಾಗಿ ದುಬೈ ಮೂಲದ BOTIM ಆಪ್ ಬಳಕೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: 3 ದಿನದಲ್ಲಿ ಸತತ 36 ಗಂಟೆ ವೀಡಿಯೋ ಕಾಲ್ – ಸೈಬರ್ ವಂಚನೆಗೆ ಸಿಕ್ಕಿ 15 ಲಕ್ಷ ರೂ. ಕಳೆದುಕೊಂಡ ಮಹಿಳೆ

