ಬೆಂಗಳೂರು: ಜೆಪಿ ನಗರದಲ್ಲಿ (JP Nagar) ರೌಡಿಶೀಟರ್ ರಾಜು ಹಲ್ಮುರ್ಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕರಿಗೆ ಸುಳಿವು ಕೊಟ್ಟ ಮಹಿಳೆ ಸೇರಿ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಹಿಂದೆ ಸ್ಟಾಂಡ್ ಕುಟ್ಟಿ ಎಂಬಾತನ ಕೊಲೆ ಪ್ರಕರಣದಲ್ಲಿ ರೌಡಿಶೀಟರ್ ರಾಜು ಭಾಗಿಯಾಗಿದ್ದ. ಅದೇ ವಿಚಾರಕ್ಕೆ ಸಂಚು ರೂಪಿಸಿ ಆತನನ್ನು ಹಂತಕರು ಮುಗಿಸಿದ್ದಾರೆ. ರಾಜುವಿನ ಚಲನವಲನ ಗಮನಿಸಲು ಹಂತಕರು ಅಕ್ಷತಾ ಎಂಬ ಮಹಿಳೆಯನ್ನು ಬಿಟ್ಟಿದ್ದರು. ಅವಳು ರಾಜು ಬಗ್ಗೆ ಮಾಹಿತಿ ಕಲೆಹಾಕಿ ಹಂತಕರಿಗೆ ನೀಡಿದ್ದಳು. ಇದನ್ನೂ ಓದಿ: ಹನಿಮೂನ್ ಹತ್ಯೆ ಕೇಸಲ್ಲಿ ಸೋನಮ್ ಎಡವಿದ್ದೆಲ್ಲಿ? – ಇಂಚಿಂಚು ಮಾಹಿತಿ ಕಲೆ ಹಾಕಿದ್ದ ಸಿಯಾ!
ಕಾರಿನಲ್ಲಿ ಬಂದ ಹಂತಕರಿಗೆ ಅಕ್ಷತಾ ಮಾಹಿತಿ ನೀಡಿ, ಸ್ಕೂಟಿಯಲ್ಲಿ ತೆರಳಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದೇ ಮಾಹಿತಿ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ಇದನ್ನೂ ಓದಿ: ಹೆಂಡತಿ ಮೇಲೆ ಅನುಮಾನ; ಮಾತುಕತೆಗೆ ಕರೆಸಿ ಪತ್ನಿ- ಮಾವನ ಬರ್ಬರ ಕೊಲೆ
