– ಡಬಲ್ ಮರ್ಡರ್ ಬಳಿಕ ಶವಗಳ ಮುಂದೆ ಕುಳಿತಿದ್ದ ತಂದೆ-ಮಗ
ಬಳ್ಳಾರಿ: ಕುಟುಂಬ ಕಲಹ ಬಗೆಹರಿಸುವ ನೆಪದಲ್ಲಿ ಮಾತುಕತೆಗೆ ಮನೆಗೆ ಕರೆಸಿಕೊಂಡು ಪತ್ನಿ ಹಾಗೂ ಮಾವನನ್ನು ಬರ್ಬರವಾಗಿ ಕೊಲೆ (Double Murder) ಮಾಡಿದ ಘಟನೆ ಬಳ್ಳಾರಿ (Ballari) ಜಿಲ್ಲೆಯ ಗುಗ್ಗರಟ್ಟಿಯಲ್ಲಿ ನಡೆದಿದೆ.
ನಾಗಲಕ್ಷ್ಮೀ (24) ಹಾಗೂ ಆಕೆಯ ತಂದೆ ಶ್ರೀನಿವಾಸ (48) ಮೃತಪಟ್ಟವರು . ಪ್ರಕರಣದಲ್ಲಿ ಪತಿ ತೇಜಾ ಹಾಗೂ ಆತನ ತಂದೆ ಗುರುಶಂಕರ್ ಮೇಲೆ ಕೊಲೆ ಆರೋಪ ಕೇಳಿಬಂದಿದೆ.
ಕುಟುಂಬದ ಸಮಸ್ಯೆ ಬಗ್ಗೆ ಮಾತುಕತೆ ನಡೆಸಬೇಕೆಂದು ಪತ್ನಿ ಹಾಗೂ ಮಾವನನ್ನು ಆರೋಪಿ ಮನೆಗೆ ಕರೆಸಿಕೊಂಡಿದ್ದಾನೆ. ಈ ವೇಳೆ ಹರಿತವಾದ ಆಯುಧಗಳಿಂದ ಇಬ್ಬರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.ಇದನ್ನೂ ಓದಿ: ಅಪ್ಪು ಕಪ್ ಸೀಸನ್ 4ಕ್ಕೆ ಅದ್ಧೂರಿ ಚಾಲನೆ
ಆರೋಪಿ ದೋಬಿ ಕೆಲಸ ಮಾಡಿಕೊಂಡಿದ್ದು, ಹೆಂಡತಿಯ ಮೇಲೆ ಅನುಮಾನ ಹೊಂದಿದ್ದ ಕಾರಣ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಕೊಲೆ ಮಾಡಿದ ಬಳಿಕ ಪರಾರಿಯಾಗದೆ ಇಬ್ಬರು ಆರೋಪಿಗಳು ಶವಗಳ ಮುಂದೆಯೇ ಕುಳಿತಿದ್ದರು ಎನ್ನಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಇಬ್ಬರನ್ನೂ ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಹನಿಮೂನ್ ಹತ್ಯೆ ಕೇಸಲ್ಲಿ ಸೋನಮ್ ಎಡವಿದ್ದೆಲ್ಲಿ? – ಇಂಚಿಂಚು ಮಾಹಿತಿ ಕಲೆ ಹಾಕಿದ್ದ ಸಿಯಾ!

