ಗ್ಲಾಸ್ಗೋ: ಭಾರತದ ನೀರಜ್ ಚೋಪ್ರಾ, ರೋಹಿತ್ ಯಾದವ್ ಮತ್ತು ಯಶ್ ವೀರ್ ಸಿಂಗ್ ಅವರು 2026 ರ ಕಾಮನ್‌ವೆಲ್ತ್ ಕ್ರೀಡಾಕೂಟದ ಪುರುಷರ ಜಾವೆಲಿನ್ ಥ್ರೋ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
2026 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ ಜಾವೆಲಿನ್ ಥ್ರೋ ಅರ್ಹತಾ ಸುತ್ತಿನಲ್ಲಿ ನೀರಜ್ ಚೋಪ್ರಾ 5 ನೇ ಸ್ಥಾನ ಪಡೆದು ಫೈನಲ್‌ಗೇರಿದ್ದಾರೆ. ಆ.1 ರಂದು ಫೈನಲ್ ನಡೆಯಲಿದೆ. ಅರ್ಹತಾ ಸುತ್ತಿನಲ್ಲಿ 7 ನೇ ಸ್ಥಾನ ಪಡೆದ ನಂತರ ಪಾಕಿಸ್ತಾನದ ಅರ್ಷದ್ ನದೀಮ್ ಕೂಡ ಫೈನಲ್‌ಗೆ ಸ್ಥಾನಲ್‌ಗೇರಿದ್ದಾರೆ.
ಭಾರತದ ರೋಹಿತ್ ಯಾದವ್ 78.37 ಮೀಟರ್ ಜಾವೆಲಿನ್ ಎಸೆದು 9 ನೇ ಸ್ಥಾನ ಹಾಗೂ ಯಶ್ ವೀರ್ ಸಿಂಗ್ 78.36 ಮೀಟರ್ ಎಸೆಯುವ ಮೂಲಕ 10 ನೇ ಸ್ಥಾನ ಪಡೆದರು. ಇವರು ಕೂಡ ಫೈನಲ್ ಪ್ರವೇಶಿಸಿದ್ದಾರೆ.
