ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ ಸಿನಿಮಾ `ಕಾಂತಾರ’ (Kantara) ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಮಾಡುವ ಮೂಲಕ ಹೊಸ ದಾಖಲೆಯನ್ನೇ ಬರೆದಿತ್ತು. ಇದೀಗ ಕಾಂತಾರ ಪಾರ್ಟ್ 2ಗಾಗಿ ಕಾಯ್ತಿರುವ ಅಭಿಮಾನಿಗಳಿಗೆ ಹೊಂಬಾಳೆ ಫಿಲ್ಮ್ಸ್(Hombale Films) ಸಿಹಿಸುದ್ದಿ ಹಂಚಿಕೊಂಡಿದ್ದಾರೆ.
ಯುಗಾದಿ ಹಬ್ಬದ ಶುಭ ಸಂದರ್ಭದಲ್ಲಿ (Kantara 2) ಬಗ್ಗೆ ಚಿತ್ರತಂಡ ಅಪ್ಡೇಟ್ ನೀಡಿದ್ದಾರೆ. ರಿಷಬ್ ಶೆಟ್ಟಿ & ತಂಡದ ಫೋಟೋ ಹಂಚಿಕೊಂಡು, `ಕಾಂತಾರ’ 2ನೇ ಭಾಗದ ಬರವಣಿಗೆ ಪ್ರಾರಂಭವಾಗಿದೆ ಎಂದು ಹೇಳಲು ಸಂತೋಷಪಡುತ್ತೇವೆ. ಪ್ರಕೃತಿ ಜೊತೆಗಿನ ನಮ್ಮ ಸಂಬಂಧವನ್ನು ಪ್ರದರ್ಶಿಸುವ ಮತ್ತೊಂದು ಆಕರ್ಷಕ ಕಥೆಯನ್ನು ನಿಮ್ಮಂದೆ ತರಲಿದ್ದೇವೆ ಎಂದು ಹೊಂಬಾಳೆ ಸಂಸ್ಥೆ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ‘ಶ್ರೀಮಂತ’ ಟ್ರೈಲರ್ ಬಿಡುಗಡೆ : ಇದು ಸೋನು ಸೂದ್ ಸಿನಿಮಾ
View this post on Instagram
`ಕಾಂತಾರ’ ಸಿನಿಮಾದ ಬಿಗ್ ಅಪ್ಡೇಟ್ ನೋಡ್ತಿದಂತೆ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ತೆರೆಯ ಮೇಲೆ ಸಿನಿಮಾ ಅಬ್ಬರಿಸೋದನ್ನೇ ಎದುರು ನೋಡ್ತಿದ್ದಾರೆ.
`ಕಾಂತಾರ’ 2ಗಾಗಿ ರಿಷಬ್ ಶೆಟ್ಟಿ ಸಾಕಷ್ಟು ತಯಾರಿಯನ್ನ ಮಾಡ್ತಿದ್ದಾರೆ. `ಕಾಂತಾರ’ ಚಿತ್ರದ ಸಕ್ಸಸ್ ಬಳಿಕ ಅವರ ಜವಾಬ್ದಾರಿ ಹೆಚ್ಚಾಗಿದೆ. ʻಕಾಂತಾರ 2ʼಗೆ ರಿಷಬ್ ಸಿಕ್ಕಾಪಟ್ಟೆ ಹೋಮ್ ವರ್ಕ್ ಮಾಡ್ತಿದ್ದಾರೆ. ಚಿತ್ರದ ಪ್ರೀಕ್ವೆಲ್ ಬಗ್ಗೆ ಫ್ಯಾನ್ಸ್ ಕ್ಯೂರಿಯಸ್ ಆಗಿದ್ದಾರೆ.