Bengaluru CityDistrictsKarnatakaLatestLeading NewsMain Post

ಫುಡ್ ಡೆಲಿವರಿ ಬಾಯ್ ಮೇಲೆ ಮಹಿಳಾ ಸಿಬ್ಬಂದಿ ದರ್ಪ

Advertisements

ಬೆಂಗಳೂರು: ಫುಡ್ ಪ್ಯಾಕೆಟ್ ನೀಡಲು ತಡವಾಗಿದ್ದನ್ನು ಪ್ರಶ್ನಿಸಿದ ಫುಡ್ ಡೆಲಿವರಿ ಬಾಯ್ ಮೇಲೆ ಮಹಿಳಾ ಸಿಬ್ಬಂದಿ ದರ್ಪ ಮೆರೆದಿರುವ ಘಟನೆ ನಗರದ ವೈಟ್ ಫೀಲ್ಡ್ ಬಳಿಯ ರೆಸ್ಟೋರೆಂಟ್‍ವೊಂದರಲ್ಲಿ ನಡೆದಿದೆ.

ಫುಡ್ ಡೆಲಿವರಿ ಬಾಯ್ ಸಂಜಯ್ ಫುಡ್ ಪ್ಯಾಕೆಟ್ ಪಡೆಯಲು ರೆಸ್ಟೋರೆಂಟ್‍ಗೆ ಬಂದಿದ್ದರು. ಈ ವೇಳೆ ಫುಡ್ ಪ್ಯಾಕೆಟ್ ನೀಡಲು ತಡವಾದ ಹಿನ್ನೆಲೆ ಗ್ರಾಹಕರಿಗೆ ತಲುಪಿಸಲು ತಡವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಕೋಪಗೊಂಡ ಮಹಿಳಾ ಸಿಬ್ಬಂದಿ ಆತನೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಇದನ್ನೂ ಓದಿ: ವಿಧಾನಸಭೆಯಲ್ಲಿ ಮತಾಂತರ ತಡೆ ವಿಧೇಯಕ ಅಂಗೀಕಾರ

ನಂತರ ಮಾತಿಗೆ ಮಾತು ಬೆಳೆದು ಮಹಿಳೆ ಡೆಲಿವರಿ ಬಾಯ್ ಕುತ್ತಿಗೆ ಪಟ್ಟಿ ಹಿಡಿದು ಎಳೆದೊಯ್ದು ರೆಸ್ಟೋರೆಂಟ್‍ನಿಂದ ಹೊರದಬ್ಬಿದ್ದಾರೆ. ನಂತರ ಕನ್ನಡಪರ ಸಂಘಟನೆಗಳು ರೆಸ್ಟೋರೆಂಟ್ ಮ್ಯಾನೇಜರ್ ಪ್ರಶಾಂತ್ ಅವರನ್ನು ಭೇಟಿಯಾಗಿ ಮಹಿಳೆಯನ್ನು ಕೆಲಸದಿಂದ ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ. ಮಹಿಳೆಯ ಕೃತ್ಯ ಗಮನಿಸಿದ ಬಳಿಕ ಮ್ಯಾನೇಜರ್ ಮಹಿಳೆಯಿಂದ ಫುಡ್ ಡೆಲಿವರಿ ಬಾಯ್‍ಗೆ ಕ್ಷಮಾಪಣೆ ಕೇಳಿಸಿ, ಕೆಲಸದಿಂದ ವಜಾಗೊಳಿಸಿದ್ದಾರೆ. ಅಲ್ಲದೇ ಕನ್ನಡಪರ ಸಂಘಟನೆಗಳು ಡೆಲಿವರಿ ಬಾಯ್ ಗೆ ಒಂದು ದಿನದ ಸಂಬಳ ಕೊಡಿಸಿದ್ದಾರೆ. ಇದನ್ನೂ ಓದಿ  ಹಿಂದಿನ ಸರ್ಕಾರವೇ ರೈತರ ಆತ್ಮಹತ್ಯೆಗೆ ಕಾರಣ – ಯೋಗಿ ಆದಿತ್ಯನಾಥ್

Leave a Reply

Your email address will not be published.

Back to top button