ಬೆಂಗಳೂರು: ಈ ಹಿಂದೆ ಬಸವರಾಜ್ ಬೊಮ್ಮಾಯಿ (Basavaraj Bommai) ಅವರ ಸರ್ಕಾರ ಇದ್ದಾಗ ಏರಿಕೆ ಮಾಡಿದ್ದ ದಲಿತರ ಮೀಸಲಾತಿಯನ್ನು ಕಾಂಗ್ರೆಸ್ (Congress) ಸರ್ಕಾರ ಕಡಿತಗೊಳಿಸಿದೆ. ತಕ್ಷಣವೇ ದಲಿತ ಸಮುದಾಯದ ಮೀಸಲಾತಿಯನ್ನು ಶೇ.15 ರಿಂದ ಶೇ. 17ಕ್ಕೆ ಹೆಚ್ಚಿಸಬೆಕೆಂದು ಪರಿಷತ್‌ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆಗ್ರಹಿಸಿದ್ದಾರೆ.
ಬಿಜೆಪಿ (BJP) ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಸ್‌ಸಿ ಸಮುದಾಯದ ಮೀಸಲಾತಿ ಕಡಿತಗೊಳಿಸಿರುವ ಹಿನ್ನೆಲೆ ರಾಜ್ಯಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಪರೀಕ್ಷೆ ನಡೆಯುವ 45 ಗಂಟೆ ಮುಂಚೆಯೇ ಪ್ರಶ್ನೆಪತ್ರಿಕೆ ಸೋರಿಕೆ – ಹಗರಣದಲ್ಲಿ ಬಯಲಾಯ್ತು ಅಚ್ಚರಿಯ ಸತ್ಯ!
ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿತ್ತು. ಆದರಿಂದ ಆ ಸಮುದಾಯಕ್ಕೆ ಎಲ್ಲಾ ರೀತಿಯ ಸೌಲಭ್ಯ ಸಿಕ್ಕಿತ್ತು. ಈಗ ಕಾಂಗ್ರೆಸಿನವರು ಮೀಸಲಾತಿ ಕಡಿತ ಮಾಡಿದ್ದಾರೆ. ದಲಿತ ಪರ, ಅಂಬೇಡ್ಕರ್ ಪರ, ಸಂವಿಧಾನ ಪರ ಎನ್ನುವ ಕಾಂಗ್ರೆಸ್ ಈ ಮೂರಕ್ಕೂ ಎಳ್ಳು ನೀರು ಬಿಟ್ಟಿದೆ ಎಂದುಸರ್ಕಾರವನ್ನು ಲೇವಡಿ ಮಾಡಿದ್ದಾರೆ.
ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬಹುದು. ಛತ್ತೀಸ್‌ಗಡದಲ್ಲಿ ಶೇ.58 ಮೀಸಲಾತಿ ಇದೆ. ತಮಿಳುನಾಡಿನಲ್ಲಿ ಶೇ.69 ಇದೆ. ಕಾಂಗ್ರೆಸ್ ಸರ್ಕಾರ ಶೆಡ್ಯೂಲ್ 9ಕ್ಕೆ ಸೇರಿಸಿ ಎಂದು ಹೇಳುವುದು ಯಾಕೆ? ನಾಗಮೋಹನ್ ದಾಸ್ ವರದಿ ಪ್ರಕಾರ, ಎಸ್‌ಟಿ ಸಮುದಾಯಕ್ಕೆ ಶೇ. 17 ಹಾಗೂ ಎಸ್‌ಸಿ ಸಮುದಾಯಕ್ಕೆ ಶೇ. 7 ಮೀಸಲಾತಿ ಕೊಡಬೇಕು. ಆದರೆ ಕಾಂಗ್ರೆಸ್ ಸರ್ಕಾರಕ್ಕೆ ಮೀಸಲಾತಿ ಹೆಚ್ಚಿಸಲು ಇಷ್ಟವಿಲ್ಲ. ಅಧಿವೇಶನದಲ್ಲಿ 17% ಮೀಸಲಾತಿ ಕೊಡುವುದಾಗಿ ಹೇಳಿ 15% ಮೀಸಲಾತಿ ನೀಡಿದೆ ಎಂದು ಆರೋಪಿಸಿದ್ದಾರೆ.
ಕೋರ್ಟ್ 50% ಮೀಸಲಾತಿ ಪ್ರಕಾರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಅಂತ ಹೇಳಿದರೂ ಕೂಡ ಸರ್ಕಾರ ಕೋರ್ಟ್‌ಗೆ ಸರಿಯಾದ ಮಾಹಿತಿ ನೀಡದೆ ತಪ್ಪು ಮಾಡಿದೆ. ಇಲ್ಲಿ ಸರ್ಕಾರದ್ದೇ ತಪ್ಪು ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಎಸ್‍ಸಿ-ಎಸ್‍ಟಿ ಸಮುದಾಯಕ್ಕೆ ಅನ್ಯಾಯ ಮಾಡಿದೆ: ಆರ್.ಅಶೋಕ್

