Latest
ಈ ನಗರಗಳಲ್ಲಿ ಆಗ್ತಿದೆ ಜಿಯೋ ಫೈಬರ್ ಬ್ರಾಂಡ್‍ಬ್ಯಾಂಡ್ ಟೆಸ್ಟಿಂಗ್: ನಿಮ್ಮ ನಗರ ಇದ್ಯಾ?

ಮುಂಬೈ: ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಡೇಟಾ ನೀಡಿ ಕಮಾಲ್ ಮಾಡಿದ್ದ ಜಿಯೋ ಈಗ ಫೈಬರ್ ಬ್ರಾಡ್‍ಬ್ಯಾಂಡ್ ಸೇವೆಯನ್ನು ಆರಂಭಿಸಲು ಮುಂದಾಗುತ್ತಿದ್ದು ಕೆಲ ನಗರಗಳಲ್ಲಿ ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸುತ್ತಿದೆ.
ವ್ಯಕ್ತಿಯೊಬ್ಬರು ಜಿಯೋ ಫೈಬರ್ ಸೇವೆಯ ಬಗ್ಗೆ ಟ್ವಿಟ್ಟರ್ ನಲ್ಲಿ ಕೇಳಿದ್ದಕ್ಕೆ ಜಿಯೋ ಕೇರ್ ಮುಂಬೈ, ದೆಹಲಿ ಎನ್‍ಸಿಆರ್, ಅಹಮದಾಬಾದ್, ಜಾಮ್‍ನಗರ, ಸೂರತ್ ಮತ್ತು ವಡೋದರಾದಲ್ಲಿ ಪರೀಕ್ಷೆ ನಡೆಯುತ್ತಿದೆ ಎಂದು ಉತ್ತರಿಸಿದೆ.
ಈ ವೇಳೆ ದೇಶದ ಮತ್ತಷ್ಟು ನಗರಗಳಲ್ಲಿ ಈ ಸೇವೆಯನ್ನು ಪರಿಚಯಿಸಲಾಗುತ್ತದೆ ಎಂದು ತಿಳಿಸಿದ್ದು, ಪಟ್ಟಿಯಲ್ಲಿ ಯಾವೆಲ್ಲ ನಗರಗಳಿವೆ ಎನ್ನುವ ಮಾಹಿತಿಯನ್ನು ತಿಳಿಸಿಲ್ಲ.
ಈಗಾಗಲೇ ಜಿಯೋ ಫೈಬರ್ ಬ್ರಾಡ್‍ಬ್ಯಾಂಡ್ ಸೇವೆ ಪಡೆಯುವ ಕೆಲ ಗ್ರಾಹಕರು ಈ ಹಿಂದೆ ಟ್ವೀಟ್ ಮಾಡಿದ್ದು, 1 ಜಿಬಿಪಿಎಸ್ ಸಂಪರ್ಕದಲ್ಲಿ 70 ಎಂಬಿಪಿಎಸ್ 100 ಎಂಬಿಪಿಎಸ್ ಡೇಟಾ ಸ್ಪೀಡ್ ಸಿಕ್ಕಿದೆ ಎಂದು ಹೇಳಿದ್ದರು. ಪುಣೆಯಲ್ಲಿ 743.28 ಎಂಬಿಪಿಎಸ್ ಡೇಟಾ ಸ್ಪೀಡ್ ದಾಖಲಾಗಿತ್ತು.
ಈ ಫೈಬರ್ ಸೇವೆಯನ್ನು ಯಾವಾಗ ಆರಂಭವಾಗಲಿದೆ ಎನ್ನುವುದನ್ನು ಜಿಯೋ ಇನ್ನು ಅಧಿಕೃತವಾಗಿ ತಿಳಿಸಿಲ್ಲ. ಜಿಯೋ ಫೈಬರ್ ರೂಟರ್ ಬೆಲೆ 4 ಸಾವಿರ- 4,500 ರೂ. ಇರಲಿದೆ ಎಂದು ಹೇಳಲಾಗುತ್ತಿದ್ದು, ಖರೀದಿಸಿದ ಮೊದಲ 90 ದಿನ ಈ ಸೇವೆ ಜಿಯೋದಂತೆ ಉಚಿತವಾಗಿ ಸಿಗಲಿದೆ
2016ರ ಸೆಪ್ಟೆಂಬರ್ ನಲ್ಲಿ ನಡೆದ ರಿಲಯನ್ಸ್ ವಾರ್ಷಿಕ ಸಭೆಯಲ್ಲಿ ಮುಕೇಶ್ ಅಂಬಾನಿ ಮಲ್ಟಿ ಗಿಗಾಬೈಟ್ ಸೇವೆಯನ್ನು ದೇಶದ 100 ನಗರಗಳಲ್ಲಿ ಆರಂಭಿಸಲಾಗುವುದು ಎಂದು ತಿಳಿಸಿದ್ದರು.
ಇದನ್ನೂ ಓದಿ: ಗ್ರಾಹಕರಿಗೆ ಉಚಿತ ಡೇಟಾ ನೀಡಿದ್ದ ಜಿಯೋಗೆ ಆಗಿರುವ ನಷ್ಟ ಎಷ್ಟು ಗೊತ್ತೆ?
ಇದನ್ನೂ ಓದಿ:ಸಿಮ್ ಆಯ್ತು ಜಿಯೋ ಸೆಟ್‍ಟಾಪ್ ಬಾಕ್ಸ್: ವಿಶೇಷತೆ ಏನು? ಬೆಲೆ ಎಷ್ಟು? ಆರಂಭ ಯಾವಾಗ?
JioFiber is available in select areas of Delhi-NCR. Please DM us your complete address, contact number and email(1/2)
— JioCare (@JioCare) May 10, 2017
JioFiber Preview Offer has currently being launched in select areas of Mumbai, Delhi-NCR, Ahmedabad, Jamnagar,(1/2)
— JioCare (@JioCare) May 3, 2017
Surat and Vadodara. Our network is in the process of being rolled out to other cities – Mayur(2/2)
— JioCare (@JioCare) May 3, 2017
