ನವದೆಹಲಿ: ಗ್ರಾಹಕರಿಗೆ ಉಚಿತ ಡೇಟಾ ನೀಡಿರುವ ರಿಲಯನ್ಸ್ ಜಿಯೋ ಕಳೆದ ಆರು ತಿಂಗಳಿನಲ್ಲಿ 22.5 ಕೋಟಿ ರೂ. ನಿವ್ವಳ ನಷ್ಟವನ್ನು ಅನುಭವಿಸಿದೆ.
ಮುಂಬೈ ಷೇರು ವಿನಿಮಯ ಕೇಂದ್ರಕ್ಕೆ (ಬಿಎಸ್‍ಇ) ಸೋಮವಾರ ಸಲ್ಲಿಸಿದ್ದ ಲೆಕ್ಕ ಪತ್ರದಲ್ಲಿ ಈ ವಿವರವನ್ನು ಜಿಯೋ ನೀಡಿದೆ.
Advertisement
ಮಾರ್ಚ್ 31ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ 22.5 ಕೋಟಿ ರೂ. ನಷ್ಟವನ್ನು ಅನುಭವಿಸಿದ್ದರೆ, ಈ ಹಿಂದಿನ ಹಣಕಾಸು ವರ್ಷದಲ್ಲಿ 7.46 ಕೋಟಿ ರೂ. ನಿವ್ವಳ ನಷ್ಟವನ್ನು ಅನುಭವಿಸಿತ್ತು. ಜಿಯೋದ ಒಟ್ಟು ಆದಾಯ ಕಳೆದ 6 ತಿಂಗಳಿನಲ್ಲಿ 2.25 ಕೋಟಿ ರೂ.ಗಳಿಂದ 54 ಲಕ್ಷ ರೂ. ಇಳಿಕೆಯಾಗಿದೆ.
Advertisement
ಸೆಪ್ಟೆಂಬರ್ ತಿಂಗಳಿನಲ್ಲಿ ಆರಂಭಗೊಂಡಿದ್ದ ಜಿಯೋ ಮಾರ್ಚ್ 31ರ ವರೆಗೆ ಉಚಿತ ಸೇವೆಯನ್ನು ನೀಡಿತ್ತು. ಏಪ್ರಿಲ್ ಬಳಿಕ ಗ್ರಾಹಕರಿಂದ ತನ್ನ ಸೇವೆಗಳಿಗೆ ಶುಲ್ಕ ಪಡೆಯಲು ಆರಂಭಿಸಿತ್ತು.
Advertisement
ಜಿಯೋ ಪ್ರೈಮ್ ನೋಂದಣಿಗೆ 99 ರೂ., ಸಮ್ಮರ್ ಸರ್‍ಪ್ರೈಸ್ ಆಫರ್ ಗೆ 303 ರೂ. ಬಳಿಕ ಧನ್ ಧನಾ ಧನ್ ಆಫರ್‍ಗೆ 309 ರೂ. ಶುಲ್ಕ ವಿಧಿಸಿತ್ತು.
Advertisement
ಜಾಗತಿಕ ಹಣಕಾಸು ಸಂಸ್ಥೆ ಮೊರ್ಗಾನ್ ಸ್ಟಾನ್ಲಿ ಈ ಹಿಂದೆ ಜಿಯೋ 2020ರ ನಂತರ ಲಾಭ ಗಳಿಸಲಿದೆ ಎಂದು ಹೇಳಿತ್ತು. 2018ರಲ್ಲಿ 218 ಕೋಟಿ ರೂ., 2019 ರಲ್ಲಿ 209 ಕೋಟಿ ರೂ., 2020ರಲ್ಲಿ 233 ಕೋಟಿ ರೂ. ಆದಾಯಗಳಿಸಲಿದೆ ಎಂದು ಅದು ಅಂದಾಜಿಸಿದೆ.
12 ಕೋಟಿ ಬಳಕೆದಾರರಲ್ಲಿ ಈಗ 7.2 ಕೋಟಿ ಜನ ಪ್ರೈಮ್ ಸದಸ್ಯರಾಗಿದ್ದಾರೆ ಎಂದು ಜಿಯೋ ಹೇಳಿದೆ.
2010ರಲ್ಲಿ ಆರಂಭಗೊಂಡಿದ್ದ ಜಿಯೋ 6 ವರ್ಷಗಳ ಎಲ್‍ಟಿಇ ನೆಟ್‍ವರ್ಕ್ ವಿಸ್ತರಣೆ ಮಾಡಿ, 2016ರ ಸೆಪ್ಟೆಂಬರ್‍ನಲ್ಲಿ ಆರಂಭಗೊಂಡಿತ್ತು. ಈಗ ಕೇವಲ ಆಫರ್‍ಗಳಿಗೆ ಮಾತ್ರ ಜಿಯೋ ಶುಲ್ಕ ವಿಧಿಸಿದ್ದರೂ ಮಾರ್ಚ್ 31, 2018ರ ನಂತರ ಜಿಯೋ ಆಪ್ ಗುಚ್ಚಗಳಿಗೆ ಶುಲ್ಕ ವಿಧಿಸಲಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಜಿಯೋಗೆ ಒಟ್ಟು 2.5 ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡಲಾಗಿದೆ ಎಂದು ಈ ಹಿಂದೆ ತಿಳಿಸಿದ್ದರು.
ಇದನ್ನೂ ಓದಿ: ಈಗ ಬಿಎಸ್‍ಎನ್‍ಎಲ್‍ನಿಂದ ಗ್ರಾಹಕರಿಗೆ ಬಂಪರ್ ಆಫರ್
ಇದನ್ನೂ ಓದಿ: ಜಿಯೋಗೆ ಫೈಟ್ ನೀಡಲು ಏರ್‍ಟೆಲ್‍ನಿಂದ ಪ್ರತಿದಿನ 1ಜಿಬಿ ಡೇಟಾದ ಹೊಸ ಆಫರ್ ರಿಲೀಸ್
ಇದನ್ನೂ ಓದಿ: ಜಿಯೋ ಬಳಕೆದಾರರಿಗೆ ಮತ್ತೊಂದು ಗುಡ್‍ನ್ಯೂಸ್
ಇದನ್ನೂ ಓದಿ: ಜಿಯೋ ಎಫೆಕ್ಟ್: 7 ವರ್ಷದಲ್ಲಿ ಮೊದಲ ಬಾರಿಗೆ ಟೆಲಿಕಾಂ ಕಂಪೆನಿಗಳ ಆದಾಯ ಭಾರೀ ಇಳಿಕೆ
ಇದನ್ನೂ ಓದಿ:ಸಿಮ್ ಆಯ್ತು ಜಿಯೋ ಸೆಟ್‍ಟಾಪ್ ಬಾಕ್ಸ್: ವಿಶೇಷತೆ ಏನು? ಬೆಲೆ ಎಷ್ಟು? ಆರಂಭ ಯಾವಾಗ?