LatestMain PostNational

ಧೋ ಎಂದು ಸುರಿಯುತ್ತಿರುವ ಮಳೆಯಲ್ಲೇ ಡಾಂಬರೀಕರಣ – 4 ಎಂಜಿನಿಯರ್‌ಗಳು ಸಸ್ಪೆಂಡ್

Advertisements

ಚಂಡೀಗಢ: ಜೋರಾಗಿ ಸುರಿಯುತ್ತಿರುವ ಮಳೆಯ ನಡುವೆಯೇ ರಸ್ತೆಯಲ್ಲಿ ಮರು ಡಾಂಬರೀಕರಣ ನಡೆದಿದೆ. ಕಾರ್ಮಿಕರು ರಸ್ತೆಯಲ್ಲಿ ಡಾಂಬರ್‌ಅನ್ನು ಸುರಿಯುತ್ತಲೇ ಅದು ಮಳೆ ನೀರಿನೊಂದಿಗೆ ಕಳಚಿಕೊಂಡಿದೆ. ಇಂತಹ ಎಡವಟ್ಟಿನ ಕಾಮಗಾರಿಯನ್ನು ನಡೆಸಿರುವ ಎಂಜಿನಿಯರುಗಳನ್ನು ಪಂಜಾಬ್ ಸರ್ಕಾರ ಅಮಾನತು ಮಾಡಿದೆ.

ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯಲ್ಲಿ ಜೋರಾಗಿ ಮಳೆ ಸುರಿಯುತ್ತಿದ್ದ ಸಂದರ್ಭವೇ ರಸ್ತೆಗೆ ತೇಪೆ ಹಾಕಿದ್ದಾರೆ. ಇದರ ವೀಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪಂಜಾಬ್‌ನ ಲೋಕೋಪಯೋಗಿ ಕಟ್ಟಡ ಹಾಗೂ ರಸ್ತೆಗಳ ಇಲಾಖೆ ನಾಲ್ವರು ಎಂಜಿನಿಯರುಗಳನ್ನು ಅಮಾನತುಗೊಳಿಸಿದೆ. ಇದನ್ನೂ ಓದಿ: ನೀನು ಶಿಕ್ಷಕ ಅಲ್ಲ, ರಾಜಕಾರಣಿಯಂತೆ ಕಾಣುತ್ತೀಯ: ಕುರ್ತಾ, ಪೈಜಾಮಾ ಧರಿಸಿದ್ದಕ್ಕೆ ಮುಖ್ಯೋಪಾಧ್ಯಾನಿಗೆ ಡಿಎಂ ನಿಂದನೆ

ಹೋಶಿಯಾರ್‌ಪುರದ ಚಬ್ಬೇವಾಲ್ ಕ್ಷೇತ್ರದ ಮಹಿಲ್‌ಪುರ ಬ್ಲಾಕ್‌ನ ನಂಗಲ್ ಖಿಲಾಡಿಯನ್ ಹಾಗೂ ಶೆರ್ಪುರ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮಳೆಯ ನಡುವೆ ಕಾರ್ಮಿಕರು ರಸ್ತೆಗೆ ಡಾಂಬರು ಎರಚುವುದು ವೀಡಿಯೋದಲ್ಲಿ ಕಂಡುಬಂದಿದೆ. ಈ ಅವೈಜ್ಞಾನಿಕ ಕಾಮಗಾರಿಗೆ ಉಪವಿಭಾಗದ ಎಂಜಿನಿಯರ್ ತಾರ್ಸೆಮ್ ಸಿಂಗ್, ಜೂನಿಯರ್ ಎಂಜಿನಿಯರ್ ವಿಪನ್ ಕುಮಾರ್, ಪ್ರವೀಣ್ ಕುಮಾರ್ ಹಾಗೂ ಜಸ್ಬೀರ್ ಸಿಂಗ್ ಅಮಾನತುಗೊಂಡಿದ್ದಾರೆ. ಇದನ್ನೂ ಓದಿ: ಶೋಭಾ ಕರಂದ್ಲಾಜೆ ನೋಡಲು ನೆರೆ ನೀರಿನಲ್ಲಿ ಈಜಿ ಬಂದ ಜನ

ಈ ಕಾಮಗಾರಿಯ ವೀಡಿಯೋವನ್ನು ಚಿತ್ರೀಕರಿಸಿದ ವ್ಯಕ್ತಿ ಕಾರ್ಮಿಕನೊಬ್ಬನಲ್ಲಿ ರಸ್ತೆ ಬಾಳಿಕೆ ಬರುತ್ತಾ ಎಂದು ಪ್ರಶ್ನಿಸಿದ್ದಾನೆ. ಆದರೂ ಆತ ಹೌದು ಎಂದು ಉತ್ತರಿಸಿದ್ದಾನೆ. ಬಳಿಕ ಈ ವೀಡಿಯೋವನ್ನು ಗಮನಿಸಿದ ಎಎಪಿ ಕಾರ್ಯಕರ್ತ ಗುರ್ವಿಂದರ್ ಸಿಂಗ್ ಸಿಎಂ ಭಗವಂತ್ ಮಾನ್ ಅವರ ಗಮನಕ್ಕೂ ತಂದಿದ್ದಾರೆ. ಇದರ ಬೆನ್ನಲ್ಲೇ ಲೋಕೋಪಯೋಗಿ ಇಲಾಖೆ ಪಂಜಾಬ್‌ನ ಪ್ರಧಾನ ಕಾರ್ಯದರ್ಶಿ ಅನುರಾಗ್ ವರ್ಮಾ 4 ಎಂಜಿನಿಯರುಗಳನ್ನು ಅಮಾನತುಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ.

Live Tv

Leave a Reply

Your email address will not be published.

Back to top button