ಮುಂಬೈ: ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಅವರು ನೀವು ಹೇಳಿದ್ದನ್ನು ನಾನು ಮಾಡುತ್ತೇನೆ, ನಿಮ್ಮ ಮಾತನ್ನು ನಾನು ಕೇಳುತ್ತೇನೆ ಎಂದು ಬಿಕ್ಕಿಬಿಕ್ಕಿ ಅಳುತ್ತಿರುವ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಖಿ ಸಾವಂತ್ ಅವರ ವೈವಾಹಿಕ ಜೀವನದಲ್ಲಿ ತೊಂದರೆ ಆಗಿದೆ. ಈ ಬಗ್ಗೆ ವಿಡಿಯೋವೊಂದರಲ್ಲಿ “ನೀವು ಹೇಳಿದ್ದನ್ನು ನಾನು ಮಾಡುತ್ತೇನೆ. ನಿಮ್ಮ ಮಾತನ್ನು ನಾನು ಕೇಳುತ್ತೇನೆ. ಆದರೆ ದಯವಿಟ್ಟು ನನ್ನನ್ನು ನಿರ್ಲಕ್ಷಿಸಬೇಡಿ. ನೀವು ನನ್ನನ್ನು ನಿರ್ಲಕ್ಷಿಸಿದ್ದರೆ ನನಗೆ ಬದುಕಲು ಆಗುವುದಿಲ್ಲ. ನಿಮಗೆ ನನ್ನ ಮೇಲೆ ಸ್ವಲ್ಪ ಕೂಡ ಕರುಣೆ ಇಲ್ವಾ? ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ” ಎಂದು ಹೇಳಿದ್ದಾರೆ.
- Advertisement 2
View this post on Instagram
- Advertisement 3
ತಮ್ಮ ಇನ್ಸ್ಟಾಗ್ರಾಂನಲ್ಲಿ ರಾಖಿ ಸಾವಂತ್ ಹಲವು ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಫಿಲ್ಟರ್ ಬಳಸಿ ರಾಖಿ ಸಾವಂತ್ ಈ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಈ ವಿಡಿಯೋ ನೋಡುತ್ತಿದ್ದಂತೆ ನೆಟ್ಟಿಗರು ಇದು ನಿಜವಾದ ಕಣ್ಣೀರು ಅಲ್ಲ ಎಂದು ಕಮೆಂಟ್ ಮಾಡುವ ಮೂಲಕ ರಾಖಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
- Advertisement 4
View this post on Instagram
ಇತ್ತೀಚೆಗೆ ರಾಖಿ ಸಾವಂತ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರಿಗೆ ಫ್ಯಾಮಿಲಿ ಪ್ಲಾನಿಂಗ್ ಬಗ್ಗೆ ಪ್ರಶ್ನಿಸಲಾಗಿತ್ತು. ಆಗ ರಾಖಿ ಸಾವಂತ್ ಅವರು, “ನಾನು 2020ರವರೆಗೂ ಮಗುವಿನ ಪ್ಲಾನಿಂಗ್ ಮಾಡುತ್ತೇನೆ. ನನ್ನ ಪತಿ ರಿತೇಶ್ ಮಗುವಿನೊಂದಿಗೆ ಎಲ್ಲರ ಮುಂದೆ ಬರುತ್ತಾರೆ” ಎಂದು ಉತ್ತರಿಸಿದ್ದಾರೆ.
ಅಲ್ಲದೆ ನನ್ನ ಅತ್ತೆ-ಮಾವ ತುಂಬಾನೇ ಸಿಂಪಲ್, ಸ್ವೀಟ್ ಹಾಗೂ ಕೇರಿಂಗ್. ಅವರು ಯಾವ ವಿಚಾರದ ಬಗ್ಗೆಯೂ ಹೆಚ್ಚು ಯೋಚನೆ ಮಾಡುವುದಿಲ್ಲ. ರಿತೇಶ್ ಅವರಿಗೆ ಇಬ್ಬರು ಸಹೋದರಿಯರು ಇದ್ದಾರೆ. ನಾನು ನನ್ನ ಪತಿ ಜೊತೆ ಬಿಗ್ ಬಾಸ್ 13 ಸೀಸನ್ನಲ್ಲಿ ಭಾಗವಹಿಸುತ್ತಿದ್ದೇವೆ. ಅಲ್ಲಿಯೇ ಎಲ್ಲರಿಗೂ ನನ್ನ ಪತಿಯನ್ನು ಪರಿಚಯ ಮಾಡಿಸುತ್ತೇನೆ ಎಂದು ಹೇಳಿದ್ದರು.