ಚೆನ್ನೈ: ತಮಿಳುನಾಡು ಸರ್ಕಾರಿ ವಸತಿನಿಲಯಗಳ (Hostel) ಆಹಾರ ಮೆನುವಿನಲ್ಲಿ (Tamil Nadu) ಚಿಕನ್, ಮಟನ್ ಜೊತೆ ಗೋಮಾಂಸವನ್ನೂ ಸಹ ಪೂರೈಸುವಂತೆ (Beef) ವಿದ್ಯಾರ್ಥಿಗಳು ಬೇಡಿಕೆ ಇಟ್ಟಿದ್ದಾರೆ. ಈ ವಿಚಾರ ದೇಶದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಈ ವಿಷಯದ ಕುರಿತು ತಮಿಳುನಾಡು ಸಾಮಾಜಿಕ ನ್ಯಾಯ ಸಚಿವ ವನ್ನಿ ಅರಸು ಸ್ವತಃ ಮಾತನಾಡಿ, ಕೆಲ ವಿದ್ಯಾರ್ಥಿಗಳು ತಮ್ಮ ಊಟದಲ್ಲಿ ಗೋಮಾಂಸವನ್ನು ಸೇರಿಸಬೇಕೆಂದು ವಿನಂತಿಸಿಕೊಂಡಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ.
ಚೆನ್ನೈನ ಸೈದಾಪೇಟೆಯಲ್ಲಿರುವ ಎಂಸಿ ರಾಜಾ ಹಾಸ್ಟೆಲ್ ಪರಿಶೀಲನೆ ವೇಳೆ ಅರಸು ಭೇಟಿ ನೀಡಿದ್ದರು. ಈ ವೇಳೆ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸಂವಾದ ನಡೆಸಲಾಯಿತು. ಹಾಸ್ಟೆಲ್‌ನಲ್ಲಿರುವ ಕೆಲ ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳು ಈಗಿರುವ ಮಾಂಸಾಹಾರಿ ಮೆನುವಿನಲ್ಲಿ ಗೋಮಾಂಸವನ್ನು ಸೇರಿಸಲು ಸಚಿವರಿಗೆ ವಿನಂತಿಸಿಕೊಂಡಿದ್ದಾರೆ. ಇದನ್ನೂ ಓದಿ: ದಾವಣಗೆರೆ | ಹೆಣ್ಣು ಮಗುವಿಗೆ ಜನ್ಮ ನೀಡಿ ಬಾಣಂತಿ ಸಾವು
ಈಗಾಗಲೇ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಮಟನ್ ಮತ್ತು ಚಿಕನ್ ನೀಡಲಾಗುತ್ತದೆ, ಅಷ್ಟೇ ಅಲ್ಲ, ಪ್ರತೀ ಸೋಮವಾರ ಬಿರಿಯಾನಿ ನೀಡಲಾಗುತ್ತಿದೆ. ಮಟನ್ ದುಬಾರಿಯಾಗಿದ್ದು, ತಮ್ಮ ಮನೆಯಲ್ಲಿ ಮಾಂಸ ಸೇವಿಸುವುದಿಲ್ಲ. ಆದ್ದರಿಂದ ಮೆನುವಿನಲ್ಲಿ ಗೋಮಾಂಸ ಸೇರಿಸಬೇಕು ಎಂದು ಹಾಸ್ಟೆಲ್ ವಿದ್ಯಾರ್ಥಿಗಳು ಬೇಡಿಕೆ ಇಟ್ಟಿದ್ದಾರೆ.
ಇನ್ನೂ ಅಂತಿಮ ನಿರ್ಧಾರವಾಗಿಲ್ಲ ಎಂದು ಸಚಿವ ವನ್ನಿ ಅರಸು
ವಿದ್ಯಾರ್ಥಿಗಳ ಬೇಡಿಕೆ ಕುರಿತು ಸಚಿವ ವನ್ನಿ ಅರಸು ಪ್ರತಿಕ್ರಿಯಿಸಿ, ಈ ವಿಷಯದ ಕುರಿತು ಸರ್ಕಾರ ತಕ್ಷಣ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಮೊದಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ವಿದ್ಯಾರ್ಥಿಗಳ ಅಭಿಪ್ರಾಯಗಳನ್ನು ಪರಿಗಣಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಲೆನಾಡ ಪ್ರವಾಸೋದ್ಯಮಕ್ಕೆ ರೆಕ್ಕೆ ಮೂಡಿಸಿದ ಕುವೆಂಪು ವಿಮಾನ ನಿಲ್ದಾಣ

